ಬೌಲರ್‌ಗಳ ಆಟಕ್ಕೆ 20 ವಿಕೆಟ್‌ ಪತನ – ಪಂಜಾಬ್‌ಗೆ ರೋಚಕ 16 ರನ್‌ಗಳ ಜಯ

Public TV
2 Min Read

ಮುಲ್ತಾನ್‌ಪುರ್‌: ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳೇ ವಿಜೃಂಭಿಸುತ್ತಾರೆ ಎಂಬ ಕೂಗಿನ ಮಧ್ಯೆ ಬೌಲರ್‌ಗಳು ಮಿಂಚಿದ್ದಾರೆ. ಪಂಜಾಬ್‌ (Punjab Kings) ಮತ್ತು ಕೋಲ್ಕತ್ತಾ (Kolkata Knight Riders) ವಿರುದ್ಧ ಪಂದ್ಯದಲ್ಲಿ 20 ವಿಕೆಟ್‌ ಪತನಗೊಂಡರೂ ಕೊನೆಗೂ ಪಂಜಾಬ್‌ ರೋಚಕ 16 ರನ್‌ಗಳ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಪಂಜಾಬ್‌ 15.2 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಕೋಲ್ಕತ್ತಾ 15.1 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್‌ ಆಗಿ ಸೋಲನ್ನು ಒಪ್ಪಿಕೊಂಡಿದೆ.

 

7 ರನ್‌ ಗಳಿಸುವಷ್ಟರಲ್ಲೇ ಕೋಲ್ಕತ್ತಾ ಎರಡು ವಿಕೆಟ್‌ ಕಳೆದುಕೊಂಡರೂ ರಘುವಂಶಿ ಮತ್ತು ರೆಹಾನೆ ನಿಧಾನವಾಗಿ ಆಡಿ ಇನ್ನಿಂಗ್ಸ್‌ ಕಟ್ಟಿದರು. ರಹಾನೆ 17 ರನ್‌ ರಘುವಂಶಿ 37 ರನ್‌ (28 ಎಸೆತ, 5 ಬೌಂಡರಿ, 1 ಸಿಕ್ಸ್‌ ) ಸಿಡಿಸಿ ಔಟಾದರು. ಇವರಿಬ್ಬರು ಔಟಾದ ಬೆನ್ನಲ್ಲೇ ಪತನ ಆರಂಭವಾಯಿತು. ಇದನ್ನೂ ಓದಿ: ಕೇವಲ 26 ರನ್‌ ಗಳಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ

12ನೇ ಓವರ್‌ನಲ್ಲಿ ಚಹಲ್‌ (Yuzvendra Chahal) ಅವರು ರಿಂಕು ಸಿಂಗ್‌ ಮತ್ತು ರಮಣ್‌ದೀಪ್‌ ಸಿಂಗ್‌ ಅವರನ್ನು ಔಟ್‌ ಮಾಡುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಹೀಗಿದ್ದರೂ ರಸೆಲ್‌ ಅಬ್ಬರಿಸುತ್ತಿದ್ದರು. ಆದರೆ ರಸೆಲ್‌ 17 ರನ್‌ಗಳಿಸಿದಾಗ ಜಾನ್‌ಸೆನ್‌ ಎಸೆತದಲ್ಲಿ ಬೌಲ್ಡ್‌ ಆಗುವ ಮೂಲಕ ಕಿಂಗ್ಸ್‌ ಪಂದ್ಯವನ್ನು ಸೋತಿತು.

 

ಚಹಲ್‌ 4 ವಿಕೆಟ್‌ ಕಿತ್ತರೆ, ಜಾನ್‌ಸೆನ್‌ 3 ವಿಕೆಟ್‌ ಕಿತ್ತರು. ಮ್ಯಾಕ್ಸ್‌ವೆಲ್‌, ಆರ್ಶ್‌ದೀಪ್‌ ಸಿಂಗ್‌, ಬಾರ್ಟ್ಲೆಟ್ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಸೆಂಚುರಿ ಬಾರಿಸಿದ್ದಕ್ಕೆ ಪಾಕ್‌ ಸೂಪರ್‌ ಲೀಗಲ್ಲಿ ಸಿಕ್ಕಿದ್ದು ಹೇರ್ ಡ್ರೈಯರ್‌!

ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ಆರಂಭಿಕ ಮೂವರು ಆಟಗಾರರನ್ನು ಹರ್ಷಿತ್‌ ರಾಣಾ ಪೆವಿಲಿಯನ್‌ಗೆ ಕಳುಹಿಸಿದ್ದರು. ಪ್ರಿಯಾಂಶ್‌ ಅರ್ಯಾ 22 ರನ್‌(12 ಎಸೆತ, 3 ಬೌಂಡರಿ, 1 ಸಿಕ್ಸ್‌), ಪ್ರಭುಸಿಮ್ರಾನ್‌ ಸಿಂಗ್‌ 30 ರನ್‌(15 ಎಸೆತ, 2 ಬೌಂಡರಿ, 3 ಸಿಕ್ಸ್‌) ಕೊನೆಯಲ್ಲಿ ಶಶಾಂಕ್‌ ಸಿಂಗ್‌ 18 ರನ್‌ ಹೊಡೆದ ಪರಿಣಾಮ ಪಂಜಾಬ್‌ 100 ರನ್‌ಗಳ ಗಡಿಯನ್ನು ದಾಟಿತ್ತು.

ಹರ್ಷಿತ್‌ ರಾಣಾ 3 ವಿಕೆಟ್‌, ವರುಣ್‌ ಚಕ್ರವರ್ತಿ ಮತ್ತು ಸುನಿಲ್‌ ನರೈನ್‌ ತಲಾ 2 ವಿಕೆಟ್‌, ವೈಭವ್‌ ಅರೋರ, ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್‌ ಕಿತ್ತರು.

 

Share This Article