IPL 2025ಕ್ಕೆ ಗ್ರ್ಯಾಂಡ್‌ ವೆಲ್‌ಕಮ್‌ – ಶಾರುಖ್‌ ಮಾತು, ಶ್ರೇಯಾ ಹಾಡು, ದಿಶಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ

By
2 Min Read

– ಮ್ಯೂಸಿಕ್‌ ಸೌಂಡ್‌ಗೆ ಮಂಕಾದ ಶ್ರೇಯಾ ಘೋಷಾಲ್‌ ಮಧುರ ಧ್ವನಿ
– ಅಭಿಮಾನಿಗಳ ಮನಗೆದ್ದ ಶಾರುಖ್‌, ಕೊಹ್ಲಿ ನೃತ್ಯ

ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ಐಪಿಎಲ್‌ 2025ಕ್ಕೆ (IPL 2025) ಗ್ರ್ಯಾಂಡ್‌ ವೆಲ್‌ಕಮ್‌ ಸಿಕ್ಕಿದೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅದ್ಭುತ ಭಾಷಣದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸುಮಧುರ ಧ್ವನಿಯಿಂದ ಅಭಿಮಾನಿಗಳನ್ನು ಮೋಡಿ ಮಾಡಿದರು. ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಅದ್ಭುತ ನೃತ್ಯದಿಂದ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟರು. ಪಂಜಾಬಿ ಗಾಯಕ ಕರಣ್ ಔಜ್ಲಾ ಗಾಯನದ ಮೂಲಕ ಗಮನ ಸೆಳೆದರು.

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅದ್ಭುತ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಗಾಯಕಿ ಶ್ರೇಯಾ ಘೋಷಾಲ್‌ ತನ್ನ ಮಧುರ ಕಂಠದಿಂದ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟರು. ಶ್ರೇಯಾ ಅವರ ಮೆಲೋಡಿ ಗಾಯನಕ್ಕೆ ಫ್ಯಾನ್ಸ್‌ ಫಿದಾ ಆದರು.

ಶ್ರೇಯಾ ಘೋಷಾಲ್ ಅವರ ಪ್ರದರ್ಶನದ ನಂತರ ಬಾಲಿವುಡ್ ನಟಿ ದಿಶಾ ಪಟಾನಿ ಮನಮೋಹಕ ನೃತ್ಯದ ಮೂಲಕ ಗಮನ ಸೆಳೆದರು. ಬೆಳ್ಳಿ ಉಡುಪಿನಲ್ಲಿ ಕಂಗೊಳಿಸಿದ ದಿಶಾ ತಮ್ಮ ಹಾಟ್‌ ನೃತ್ಯದ ಮೂಲಕ ವೇದಿಕೆಯನ್ನು ರಂಗೇರಿಸಿದರು.

ಶ್ರೇಯಾ ಘೋಷಾಲ್‌ ಅವರು ‘ವಂದೇ ಮಾತರಂ’, ‘ಮೇರೆ ಧೋಲ್ನಾ’, ‘ಕರ್ ಹರ್ ಮೈದಾನ್ ಫತೇ’, ‘ಘೂಮರ್’ ಹಾಡಿದಾಗ ಅಭಿಮಾನಿಗಳು ಸಹ ಜೊತೆಯಲ್ಲಿ ಹಾಡುತ್ತಾರೆ. ಪುಷ್ಪಾ 2 ಸಿನಿಮಾದ ಫೇಮಸ್ ‘ಸಾಮಿ ಸಾಮಿ’ ಹಾಡು ಕೇಳುತ್ತಿದ್ದಂತೆ ಫ್ಯಾನ್ಸ್‌ ರೋಮಾಂಚಿತರಾಗಿ ಕೂಗುತ್ತಾರೆ. ಈ ಹಾಡಿನ ಸಂದರ್ಭದಲ್ಲಿ ವಾದನಗಳ ಶಬ್ಧಕ್ಕೆ ಶ್ರೇಯಾ ಮಧುರ ಧ್ವನಿ ಸರಿಯಾಗಿ ಕೇಳುವುದಿಲ್ಲ. ಇದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಯಿತು.

ಶಾರೂಖ್‌ ಜೊತೆ ಹೆಜ್ಜೆ ಹಾಕಿದ ವಿರಾಟ್
ಶಾರುಖ್ ರಿಂಕು ಸಿಂಗ್ ಮತ್ತು ವಿರಾಟ್ ಕೊಹ್ಲಿಯನ್ನು ವೇದಿಕೆಯ ಮೇಲೆ ಕರೆದು ಇಬ್ಬರೊಂದಿಗೆ ಹಾಡುಗಳಿಗೆ ನೃತ್ಯ ಮಾಡಿದರು. ವಿರಾಟ್ ಮತ್ತು ಶಾರುಖ್ ‘ಜೂಮ್ ಜೋ ಪಠಾಣ್’ ಹಾಡಿಗೆ ಒಟ್ಟಿಗೆ ನೃತ್ಯ ಮಾಡಿದ್ದು, ವೇದಿಕೆಗೆ ಮತ್ತಷ್ಟು ರಂಗು ನೀಡಿತು.

Share This Article