161 ರನ್‌ಗೆ ಲಕ್ನೋ ಆಲೌಟ್‌ – ಮುಂಬೈಗೆ 54 ರನ್‌ಗಳ ಭರ್ಜರಿ ಜಯ

Public TV
2 Min Read

– ಆರ್‌ಸಿಬಿ, ಡೆಲ್ಲಿ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಪಾಂಡ್ಯ ಪಡೆ

ಮುಂಬೈ: ಆರಂಭದಲ್ಲಿ ಮುಗ್ಗರಿಸಿ ನಂತರ ಸತತ ಗೆಲುವುಗಳೊಂದಿಗೆ ಮಿಂಚುತ್ತಿರುವ ಮುಂಬೈ ಇಂದು ಮತ್ತೊಂದು ಜಯವನ್ನು ಮುಡಿಗೇರಿಸಿಕೊಂಡಿದೆ. ಪಾಂಡ್ಯ ಪಡೆ ಲಕ್ನೋ ವಿರುದ್ಧ 54 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಆರ್‌ಸಿಬಿ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿತು. 216 ರನ್‌ ಗುರಿ ಬೆನ್ನತ್ತಿದ ಲಕ್ನೋ ನಿಗದಿತ ಓವರ್‌ಗೆ 161 ರನ್‌ ಗಳಿಸಿ ಆಟೌಟ್‌ ಆಗಿ ಹೀನಾಯ ಸೋಲು ಕಂಡಿತು. ಇದನ್ನೂ ಓದಿ: ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್‌ ಅಫ್ರಿದಿ

ಮುಂಬೈ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರು. ರಯಾನ್ ರಿಕೆಲ್ಟನ್ ಮತ್ತು ಸೂರ್ಯಕುಮಾರ್‌ ಯಾದವ್‌ ಅರ್ಧಶತಕ ಆಟದ ಮೂಲಕ ಗಮನ ಸೆಳೆದರು. ರಿಯಾನ್‌ 32 ಬಾಲ್‌ಗೆ 6 ಫೋರ್‌, 4 ಸಿಕ್ಸರ್‌ನೊಂದಿಗೆ 58 ಹಾಗೂ ಸೂರ್ಯಕುಮಾರ್‌ ಯಾದವ್‌ 28 ಬಾಲ್‌ಗೆ 4 ಫೋರ್‌, 4 ಸಿಕ್ಸರ್‌ನೊಂದಿಗೆ 54 ರನ್‌ ಗಳಿಸಿ ತಂಡಕ್ಕೆ ನೆರವಾದರು. ವಿಲ್‌ ಜಾಕ್ಸ್‌ 29, ನಮನ್ ಧೀರ್ (ಔಟಾಗದೇ) 25, ಕಾರ್ಬಿನ್ ಬಾಷ್ 20 ರನ್‌ಗಳೊಂದಿಗೆ ಮುಂಬೈ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು.

ಲಕ್ನೋ ಪರ ಮಯಾಂಕ್‌ ಯಾದವ್‌, ಆವೇಶ್‌ ಖಾನ್‌ ತಲಾ 2, ಪ್ರಿನ್ಸ್‌ ಯಾದವ್‌, ದಿಗ್ವೇಶ್‌ ರಾಥಿ, ರವಿ ಬಿಷ್ಣೋಯ್‌ ತಲಾ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಈಡನ್‌ ಗಾರ್ಡನ್‌ನಲ್ಲಿ ಗೆದ್ದ ಮಳೆ – PBKS vs KKR ಪಂದ್ಯ ರದ್ದು, 4ನೇ ಸ್ಥಾನಕ್ಕೇರಿದ ಪಂಜಾಬ್‌

ಮುಂಬೈ ನೀಡಿ 216 ರನ್‌ ಗುರಿ ನೀಡಿದ ಲಕ್ನೋ ಬ್ಯಾಟಿಂಗ್‌ನಲ್ಲಿ ಮುಗ್ಗಿರಿಸಿತು. 6 ಓವರ್‌ ಹೊತ್ತಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಮಿಚೆಲ್‌ ಮಾರ್ಷ್‌ 34, ಆಯುಷ್‌ ಬದೋನಿ 35, ನಿಕೊಲಸ್‌ ಪೂರನ್‌ 27, ಡೇವಿಡ್‌ ಮಿಲ್ಲರ್‌ 24 ರನ್‌ ಗಳಿಸಿದರು.

ಉಳಿದಂತೆ ಯಾವ ಬ್ಯಾಟರ್‌ ಕೂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಈ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿರುವ ಕ್ಯಾಪ್ಟನ್ ರಿಷಬ್‌ ಪಂತ್‌‌ ಕಳೆಗುಂದಿದ್ದಾರೆ. ಪಂತ್ ಕೇವಲ 4 ರನ್‌ ಗಳಿಸಿ ಔಟಾಗಿದ್ದು,‌ ನಿರಾಸೆ ಮೂಡಿಸಿತು. ಲಕ್ನೋ ಬ್ಯಾಟರ್‌ಗಳನ್ನು ಪಾಂಡ್ಯ ಪಡೆ ಬೌಲರ್‌ಗಳು ಚೆಂಡಾಡಿದರು. ಕಳಪೆ ಬ್ಯಾಟಿಂಗ್‌ನಿಂದ ಲಕ್ನೋ ಅಂತಿಮವಾಗಿ 20 ಓವರ್‌ಗೆ 161 ರನ್‌ಗೆ ಆಲೌಟ್‌ ಆಯಿತು.

ಮುಂಬೈ ಪರ ಜಸ್ಪ್ರಿತ್‌ ಬುಮ್ರಾ ಕಮಾಲ್‌ ಮಾಡಿದರು. ಪ್ರಮುಖ 4 ವಿಕೆಟ್‌ ಕಿತ್ತು ಮಿಂಚಿದರು. ಇವರ ಜೊತೆ ಜೊತೆಗೆ ಟ್ರೆಂಟ್‌ ಬೌಲ್ಟ್‌ ಕೂಡ 3 ವಿಕೆಟ್‌ ಕಬಳಿಸಿ ನಿರ್ಣಾಯಕ ಪಾತ್ರ ವಹಿಸಿದರು. ವಿಲ್‌ ಜಾಕ್ಸ್‌ 2, ಕಾರ್ಬಿನ್ ಬಾಷ್ 1 ವಿಕೆಟ್‌ ಪಡೆದರು.

Share This Article