IPL 2024: RCBಗೆ ಎಂಟ್ರಿ ಕೊಡ್ತಾರಾ ರಚಿನ್‌ ರವೀಂದ್ರ ?

Public TV
2 Min Read

ಬೆಂಗಳೂರು:‌ ನಿನ್ನೆಯಿಂದಲೂ ಜಾಲತಾಣದಲ್ಲಿ ಬೆಂಗಳೂರು ಮೂಲದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ (Rachin Ravindra) ಅವರದ್ದೇ ಸುದ್ದಿ ಹರಿದಾಡುತ್ತಿದೆ. ನವೆಂಬರ್‌ 4 ರಂದು ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌ ಸೆಣಸಲಿದ್ದು, ಈ ಪಂದ್ಯದಲ್ಲಿ ರಚಿನ್‌ ಆಟವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ರಚಿನ್‌ ಬಗ್ಗೆ ಜಾಲತಾಣದಲ್ಲಿ ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿರುವ ಹೊತ್ತಿನಲ್ಲೇ ಆರ್‌ಸಿಬಿ ಜೆರ್ಸಿಯಲ್ಲಿ ರಚಿನ್‌ ಕಾಣಿಸಿಕೊಂಡಿರುವ ಫೋಟೋ ವೈರಲ್‌ ಆಗಿದೆ. ಅಲ್ಲದೇ 2024ರ ಐಪಿಎಲ್‌ (IPL 2024) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಪರ ರಚಿನ್‌ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿದೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್‌ – ಬೆಂಗ್ಳೂರು ವಿಲ್ಸನ್‌ ಗಾರ್ಡನ್‌ ನೆನಪು ಹಂಚಿಕೊಂಡ ರವೀಂದ್ರ

ಈಗಾಗಲೇ ವಿರಾಟ್‌ ಕೊಹ್ಲಿ (Virat Kohli), ಗ್ಲೇನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡು ಪ್ಲೆಸಿಸ್‌ ನಂತಹ ಸ್ಟಾರ್‌ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಇದೀಗ ಬೆಂಗಳೂರು ಮೂಲದ ಹುಡುಗನ ಮೇಲೆ ಕಣ್ಣಿಟ್ಟಿದೆಯಾ? ಆರ್‌ಸಿಬಿ ಪರ ರಚಿನ್‌ ಕಣಕ್ಕಿಳಿಯುತ್ತಾರಾ? ಅನ್ನೋ ಪ್ರಶ್ನೆಗಳೂ ಎದ್ದಿವೆ. ಆದ್ರೆ ಈ ಬಗ್ಗೆ ಆರ್‌ಸಿಬಿ ಟೀಂ ಮ್ಯಾನೇಜ್‌ಮೆಂಟ್‌ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

ರಚಿನ್‌ ರವೀಂದ್ರ ಯಾರು?
23 ವರ್ಷದ ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ಜನಿಸಿದ್ದರೂ ಅವರ ಅಪ್ಪ-ಅಮ್ಮ ಮೂಲತಃ ಬೆಂಗಳೂರಿನವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್ವೇರ್ ಎಂಜಿನೀಯರ್‌ಗಳಾಗಿದ್ದು, ಉದ್ಯೋಗ ಅರಸಿ 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ರಚಿನ್ ರವೀಂದ್ರ ಅವರ ತಂದೆ, ಸಾಫ್ಟ್ವೇರ್ ಎಂಜಿನೀಯರ್ ಆಗಿದ್ದರೂ ಅಪ್ಪಟ ಕ್ರಿಕೆಟ್ ಅಭಿಮಾನಿ. ಅದರಲ್ಲೂ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಪಕ್ಕಾ ಫ್ಯಾನ್. ಈ ಕಾರಣದಿಂದಾಗಿ ರಾಹುಲ್ ದ್ರಾವಿಡ್ ಹೆಸರಿನಿಂದ ʻರʼ ಮತ್ತು ಸಚಿನ್ ತೆಂಡೂಲ್ಕರ್ ಹೆಸರಿನಿಂದ ʻಚಿನ್ʼ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್ ಎಂದು ಹೆಸರಿಟ್ಟಿದ್ದರು. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ಪರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದಾರೆ. 2016 ಮತ್ತು 2018ರಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ನ್ಯೂಜಿಲೆಂಡ್ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಅಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಇದರ ಫಲವಾಗಿ 2021ರಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದರು. ನಂತರ ಇದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್