RCB Unbox: ‘ಬೆಂಗಳೂರ್‌’ ಅಲ್ಲ ಇನ್ಮುಂದೆ ಹೇಳಿ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’

Public TV
2 Min Read

– ಆರ್‌ಸಿಬಿಗೆ ಬಂತು ಹೊಸ ಹೆಸರು, ಹೊಸ ಜೆರ್ಸಿ
– ನಾವು ಪ್ರೀತಿಸುವ ನಗರ.. ನಿಮ್ಮ ತಂಡ, ನಿಮ್ಮ ಆರ್‌ಸಿಬಿ ಎಂದ ಕೊಹ್ಲಿ ಪಡೆ

ಬೆಂಗಳೂರು: ನಿರೀಕ್ಷೆಯಂತೆ ಅನ್‌ಬಾಕ್ಸ್‌ (RCB Unbox) ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ (Royal Challengers Bengalore) ಇನ್ಮುಂದೆ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’ (Royal Challengers Bengaluru) ಎಂದು ಬದಲಾಗಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರ್‌ಸಿಬಿ (RCB) ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮ ನಡೆಯಿತು. ಈ ವೇಳೆ ಆರ್‌ಸಿಬಿ ಹೆಸರಿನಲ್ಲಿ ‘ಬೆಂಗಳೂರ್‌’ ಪದವನ್ನು ತೆಗೆದು ‘ಬೆಂಗಳೂರು’ ಎಂದು ಬದಲಾಯಿಸಿಕೊಂಡಿದೆ. ಇದನ್ನೂ ಓದಿ: RCB Unbox: ಡಬ್ಲ್ಯೂಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ಮಹಿಳಾ ತಂಡಕ್ಕೆ ಪುರುಷರ ಟೀಂ ಭವ್ಯ ಸ್ವಾಗತ

ಹೆಸರು ಬದಲಾಯಿಸಿರುವ ಲೋಗೋ ಹಾಗೂ ನೀಲಿ ಬಣ್ಣ ಹೊಸ ಜೆರ್ಸಿ ತೊಟ್ಟಿರುವ ಆರ್‌ಸಿಬಿ ತಂಡದ ಆಟಗಾರರು ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 2024 ರ ಐಪಿಎಲ್‌ಗೆ ಕೊಹ್ಲಿ ಪಡೆ (Virat Kohli) ಹೊಸ ಹೆಸರು ಮತ್ತು ಜೆರ್ಸಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌ಸಿಬಿ, ‘ನಾವು ಪ್ರೀತಿಸುವ ನಗರ, ನಾವು ಸ್ವೀಕರಿಸುವ ಪರಂಪರೆ ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ. ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಮ್ಮ ತಂಡ, ನಿಮ್ಮ RCB!’ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಟ್ರೋಫಿ ಗೆದ್ದು ಕೋಟಿ ಕೋಟಿ ದೋಚಿದ ಹೆಣ್ಮಕ್ಕಳು – ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

ಆರ್‌ಸಿಬಿ ಆಟಗಾರರು ಹೊಸ ಜೆರ್ಸಿ ತೊಟ್ಟಿರುವ ಫೋಟೋವನ್ನು ಹಂಚಿಕೊಂಡು, ‘RCB ಕೆಂಪಾಗಿದೆ. ಈಗ ನೀಲಿ ಬಣ್ಣಕ್ಕೆ ಮುತ್ತಿಕ್ಕಿದೆ. ನಮ್ಮ ಹೊಸ ರಕ್ಷಾಕವಚದೊಂದಿಗೆ ನಾವು ಸಿದ್ಧರಿದ್ದೇವೆ. ನಿಮಗಾಗಿ ಬೋಲ್ಡ್ ಆಗಿ ಆಡಲು’ ಎಂದು ಬರೆದುಕೊಂಡಿದೆ.

Share This Article