ಐಪಿಎಲ್‌ ಹಬ್ಬ ಶುರು – ಟಾಸ್‌ ಗೆದ್ದ ಆರ್‌ಸಿಬಿ ಬ್ಯಾಟಿಂಗ್‌ ಆಯ್ಕೆ!

Public TV
1 Min Read

ಚೆನ್ನೈ: 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಡ್ಯಾನ್ಸ್ ಮೂಲಕ ರಂಗೇರಿಸಿದ್ದಾರೆ. ಹಿಂದಿ ಗೀತೆಗಳಿಗೆ ಭರ್ಜರಿ ಡಾನ್ಸ್‌ ಮಾಡಿದ್ದಾರೆ. ಇದರೊಂದಿಗೆ ಸೋನು ನಿಗಂ ಹಾಗೂ ಎ.ಆರ್‌ ರೆಹಮಾನ್‌ ಅವರ ಸಂಗೀತ ಕಡಲಲ್ಲಿ ಅಭಿಮಾನಿಗಳು ತೇಲಾಡಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ 3 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು (RCB) ಮುಖಾಮುಖಿಯಾಗುತ್ತಿದ್ದು. ಟಾಸ್‌ ಗೆದ್ದ ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದು, ನಾಯಕ ಫಾಫ್‌ ಡು ಪ್ಲೆಸಿಸ್‌ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.

ಆರ್‌ಸಿಬಿ ಮತ್ತು ಚೆನ್ನೈ ನಡುವೆ 31 ಪಂದ್ಯಗಳು ನಡೆದಿದ್ದು, 20 ಪಂದ್ಯಗಳಲ್ಲಿ ಚೆನ್ನೈ, 10 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.

ಆರ್‌ಸಿಬಿ ತಂಡ:
ಫಾಫ್‌ ಡು ಪ್ಲೆಸಿಸ್‌, ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌, ದಿನೇಶ್‌ ಕಾರ್ತಿಕ್‌, ಅನೂಜ್‌ ರಾವತ್‌, ಕರ್ಣ್‌ ಶರ್ಮಾ, ಅಲ್ಝಾರಿ ಜೋಸೆಫ್‌, ಮಯಾಂಕ್‌ ದಾಗರ್‌, ಮೊಹಮ್ಮದ್‌ ಸಿರಾಜ್‌

ಸಿಎಸ್‌ಕೆ ತಂಡ:
ಋತುರಾಜ್‌ ಗಾಯಕ್ವಾಡ್‌, ರಚಿನ್‌ ರವೀಂದ್ರ, ಅಜಿಂಕ್ಯಾ ರಹಾನೆ, ಡೇರಿಲ್‌ ಮಿಚೆಲ್‌, ರವೀಂದ್ರ ಜಡೇಜಾ, ಸಮೀರ್‌ ರಝ್ವಿ, ಎಂ.ಎಸ್‌ ಧೋನಿ, ದೀಪಕ್‌ ಚಹಾರ್‌, ಮಹೀಶ್‌ ತೀಕ್ಷಣ, ತುಷಾರ್‌ ದೇಶ್‌ಪಾಂಡೆ, ಮುಸ್ತಾಫಿಜುರ್ ರೆಹಮಾನ್.

Share This Article