KKR vs MI ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿ – 5 ಓವರ್‌ಗಳ ಪಂದ್ಯ ನಡೆಸಲು ತಜ್ಞರ ಸಲಹೆ!

Public TV
1 Min Read

ಕೋಲ್ಕತ್ತ: ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ (Eden Gardens) ಆಯೋಜನೆಗೊಂಡಿರುವ ಮುಂಬೈ ಇಂಡಿಯನ್ಸ್‌ ಮತ್ತು ಕೋಲ್ಕತ್ತಾ ನೈಟ್‌ರೈಡರ್ಸ್‌ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ (Rain) ಅಡ್ಡಿಯಾಗಿದೆ.

ಸುಮಾರು 40 ನಿಮಿಷಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ ಮ್ಯಾಚ್‌ ತಡವಾಗಿ ಆರಂಭಿಸಲಾಗುತ್ತಿದೆ. 40 ನಿಮಿಷಗಳ ಬಳಿಕ ವರುಣ ಬಿಡುವು ನೀಡಿದ್ದು, ಸಿಬ್ಬಂದಿ ಮೈದಾನವನ್ನು ಹದಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಪಂತ್‌ ಔಟ್‌; ಡೆಲ್ಲಿ ತಂಡಕ್ಕೆ ಹೊಸ ನಾಯಕ – ಬೆಂಗಳೂರು ಬಾಯ್ಸ್‌ ಕೈಹಿಡಿಯುತ್ತಾ ಲಕ್‌?

ಸದ್ಯ ಭಾರೀ ಮಳೆ ಹಿನ್ನೆಲೆಯಲ್ಲಿ ಮೈದಾನವನ್ನು (Cricket Field) ಹದಗೊಳಿಸಲು ಸಿಬ್ಬಂದಿ ಕನಿಷ್ಠ ಒಂದು ಗಂಟೆ ಸಮಯ ಕೇಳಿದ್ದಾರೆ. ಸುಮಾರು 8:45ರ ವೇಳೆ ಪಿಚ್‌ ಕ್ಯೂರೇಟರ್‌ಗಳೊಂದಿಗೆ ಅಂಪೈರ್‌ಗಳು ಮತ್ತು ತಂಡದ ನಾಯಕರು ಪಿಚ್‌ ಪರಿಶೀಲಿಸಲಿದ್ದಾರೆ. ಇದರಿಂದ 9:30ರ ನಂತರ ಪಂದ್ಯ ಆರಂಭಗೊಳ್ಳುವ ನಿರೀಕ್ಷೆಯಿದ್ದು, 20 ಓವರ್‌ಗಳ ಪಂದ್ಯ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ 10 ಗಂಟೆಯ ನಂತರ ಪಂದ್ಯ ಆರಂಭಗೊಂಡರೆ 5 ಅಥವಾ 10 ಓವರ್‌ಗಳಿಗೆ ಪಂದ್ಯ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಾಥಮಿಕ ಮೂಲಗಳ ಪ್ರಕಾರ ಮೈದಾನ ಹದಗೊಳಿಸಲು ಕನಿಷ್ಠ 75 ನಿಮಿಷಗಳು ಬೇಕಾಗುತ್ತದೆ. ಆದ್ದರಿಂದ 5 ಓವರ್‌ಗಳ ಪಂದ್ಯ ಆರಂಭಿಸುವುದು ಸೂಕ್ತ ಎಂದು ಕ್ರಿಕೆಟ್‌ ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಿಷಭ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ – ಪಂತ್‌ ಒಂದು ಪಂದ್ಯದಿಂದ ಅಮಾನತು!

ಸದ್ಯ 11 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿರುವ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಅಧಿಕೃತ ಪ್ರವೇಶ ಪಡೆಯಲು ಇನ್ನೊಂದು ಪಂದ್ಯ ಗೆಲ್ಲಬೇಕಿದೆ. ಆದ್ರೆ 12ರಲ್ಲಿ ಕೇವಲ 4 ಪಂದ್ಯ ಗೆದ್ದಿರುವ ಮುಂಬೈ 9ನೇ ಸ್ಥಾನದಲ್ಲಿದೆ.

Share This Article