IPL 2024: ಚಾಂಪಿಯನ್‌ KKRಗೆ 20 ಕೋಟಿ ರೂ., ಆರೆಂಜ್‌, ಪರ್ಪಲ್‌ ಕ್ಯಾಪ್‌‌ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

Public TV
3 Min Read

ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳ ನಡುವಿನ IPL 2024 ರ ಫೈನಲ್ ಪಂದ್ಯವು ಭಾನುವಾರ‌ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ ತಂಡವು ಎಸ್‌ಆರ್‌ಹೆಚ್‌ ವಿರುದ್ಧ ಅದ್ಧೂರಿ ಜಯಗಳಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಇದರೊಂದಿಗೆ ಐಪಿಎಲ್ 2024 ರ ಫೈನಲ್ ಪಂದ್ಯದ ವಿಜೇತ ತಂಡಕ್ಕೆ 20 ಕೋಟಿ ರೂ. ಮತ್ತು ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಬಹುಮಾನ ಲಭಿಸಿದೆ. ಇದಲ್ಲದೇ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಮುಂತಾದ ಹಲವು ಪ್ರಶಸ್ತಿಗಳನ್ನು ನೀಡಲಾಗಿದ್ದು, ಯಾವ ಆಟಗಾರ ಯಾವ ಪ್ರಶಸ್ತಿ ಪಡೆದಿದ್ದಾರೆ ಎಂಬುದರ ಡೀಟೈಲ್‌ ಇಲ್ಲಿದೆ.

ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಆಲ್‌ರೌಂಡರ್ ನಿತೀಶ್ ರೆಡ್ಡಿ (Nitish Kumar Reddy) ಉದಯೋನ್ಮುಖ ಆಟಗಾರನಾಗಿ ಆಯ್ಕೆಯಾದರು. ಅವರಿಗೆ 10 ಲಕ್ಷ ರೂ. ಹಾಗೂ ಟ್ರೋಫಿಯನ್ನು ನೀಡಲಾಯಿತು. ಈ ಆವೃತ್ತಿಯಲ್ಲಿ ಅತೀ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಕ್ಕಾಗಿ ಅಭಿಷೇಕ್ ಶರ್ಮಾ (Abhishk Sharma) ಅವರು ಸೂಪರ್ ಸಿಕ್ಸರ್‌ ಆಗಿ ಆಯ್ಕೆಯಾದರು. ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ನ ಜೇಕ್ ಫ್ರೇಸರ್ ಮೆಕ್ಗರ್ಕ್ (Jake Fraser-McGurk) ಗೆದ್ದರು. ಇದಲ್ಲದೆ ಆರೆಂಜ್ ಕ್ಯಾಪ್ ಮತ್ತೊಮ್ಮೆ ವಿರಾಟ್ ಕೊಹ್ಲಿಗೆ (Virat Kohli) ದಕ್ಕಿತು ಮತ್ತು ಹರ್ಷಲ್ ಪಟೇಲ್ (Harshal Patel)  ಪರ್ಪಲ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡರು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

IPL 2024 ಪ್ರಶಸ್ತಿಗಳ ಸಂಪೂರ್ಣ ಪಟ್ಟಿ
* ಕೋಲ್ಕತ್ತಾ ನೈಟ್ ರೈಡರ್ಸ್ (ವಿಜೇತರು) – 20 ಕೋಟಿ ರೂ. ಮತ್ತು ಟ್ರೋಫಿ
* ಸನ್ ರೈಸರ್ಸ್ ಹೈದರಾಬಾದ್ (ರನ್ನರ್ ಅಪ್) – 12.5 ಕೋಟಿ ರೂ. ಮತ್ತು ಟ್ರೋಫಿ
* ನಿತೀಶ್ ರೆಡ್ಡಿ (ಉದಯೋನ್ಮುಖ ಆಟಗಾರ)- 10 ಲಕ್ಷ ಮತ್ತು ಟ್ರೋಫಿ
* ಸನ್‌ರೈಸರ್ಸ್ ಹೈದರಾಬಾದ್ ( ಫೇರ್‌ಪ್ಲೇ ಪ್ರಶಸ್ತಿ) – 10 ಲಕ್ಷ ಮತ್ತು ಟ್ರೋಫಿ
* ಹರ್ಷಲ್ ಪಟೇಲ್ (Dream11 ಗೇಮ್ ಚೇಂಜರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
* ಅಭಿಷೇಕ್ ಶರ್ಮಾ (ಸೀಸನ್‌ನ ಸೂಪರ್ ಸಿಕ್ಸರ್)- 10 ಲಕ್ಷ ರೂ.
* ರಮಣದೀಪ್ ಸಿಂಗ್ (ಪರಿಪೂರ್ಣ ಕ್ಯಾಚ್)- 10 ಲಕ್ಷ ರೂ. ಮತ್ತು ಟ್ರೋಫಿ
* ಜೇಕ್ ಫ್ರೇಸರ್ ಮೆಕ್ಗರ್ಕ್ (ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
* ವೆಂಕಟೇಶ್ ಅಯ್ಯರ್ (ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
* ಹರ್ಷಲ್ ಪಟೇಲ್ (24 ವಿಕೆಟ್)- 10 ಲಕ್ಷ ರೂ. ಮತ್ತು ಪರ್ಪಲ್ ಕ್ಯಾಪ್
* ವಿರಾಟ್ ಕೊಹ್ಲಿ (741 ರನ್) – 10 ಲಕ್ಷ ರೂ. ಮತ್ತು ಆರೆಂಜ್ ಕ್ಯಾಪ್
* ಸುನಿಲ್ ನರೈನ್ (ಅತ್ಯಂತ ಮೌಲ್ಯಯುತ ಆಟಗಾರ)- 10 ಲಕ್ಷ ಮತ್ತು ಟ್ರೋಫಿ
* ಪಿಚ್ ಮತ್ತು ಗ್ರೌಂಡ್ ಅವಾರ್ಡ್ – ರಾಜೀವ್ ಗಾಂಧಿ ಸ್ಟೇಡಿಯಂ ಹೈದರಾಬಾದ್- 50 ಲಕ್ಷ

ಐಪಿಎಲ್ 2024 ಅಂಕಗಳ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮೂರನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳ ಮೇಲೂ ಹಣದ ಮಳೆ ಸುರಿಯಿತು. ತೃತೀಯ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ತಂಡ 7 ಕೋಟಿ ರೂ., ನಾಲ್ಕನೇ ಸ್ಥಾನ ಪಡೆದ RCB 6.5 ಕೋಟಿ ರೂ. ಬಹುಮಾನ ಪಡೆಯಿತು. ಎರಡನೆಯದಾಗಿ, ಅತ್ಯುತ್ತಮ ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿಯನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ನೀಡಲಾಯಿತು.

Share This Article