RCB ಪಾಲಿಗೆ ಅಂದು ಹೀರೋ ಆಗಿದ್ದ ಮುಂಬೈ, ಈಗ ವಿಲನ್‌ ಆಗಿರೋದೇಕೆ..?

Public TV
2 Min Read

ಬೆಂಗಳೂರು: ಅಂದು ಆರ್‌ಸಿಬಿ (RCB), ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಗೆಲುವಿಗಾಗಿ ಪ್ರಾರ್ಥಿಸಿತ್ತು. ಆರ್‌ಸಿಬಿ ಅಭಿಮಾನಿಗಳೆಲ್ಲಾ ಮುಂಬೈ ಇಂಡಿಯನ್ಸ್‌ ತಂಡವೇ ಗೆಲ್ಲಬೇಕು ಎಂದು ಅಲ್ಲಲ್ಲಿ ವಿಶೇಷ ಪೂಜೆಗಳನ್ನೂ ಮಾಡಿಸಿದ್ದುಂಟು. ಆದರಿಂದು ಅದೇ ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ ತಂಡ ಸೋಲುವಂತೆ ಪ್ರಾರ್ಥಿಸುತ್ತಿದ್ದಾರೆ.

ಹೌದು.. 2022ರ ಐಪಿಎಲ್‌ ಆವೃತ್ತಿಯಲ್ಲಿ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಹಾಗೂ ಫಾಫ್‌ ಡು ಪ್ಲೆಸಿಸ್‌ (Faf du Plessis) ನಾಯಕತ್ವದ ಆರ್‌ಸಿಬಿ ನಡುವೆ ಪ್ಲೇ ಆಫ್‌ ರೇಸ್‌ಗೆ ಪೈಪೋಟಿ ನಡೆದಿತ್ತು. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಸೆಣಸಾಟ ನಡೆದಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆದ್ದರೆ ಆರ್‌ಸಿಬಿ ಪ್ಲೇ ಆಫ್‌ ಕನಸು ಭಗ್ನಗೊಳ್ಳುತ್ತದೆ ಎಂಬ ಕಾರಣಕ್ಕೆ ಮುಂಬೈ ಇಂಡಿಯನ್ಸ್‌ ಗೆಲ್ಲುವಂತೆ ಆರ್‌ಸಿಬಿ ತಂಡ ಪ್ರಾರ್ಥಿಸುತ್ತಿತ್ತು. ಆರ್‌ಸಿಬಿ ಚಿಹ್ನೆಯನ್ನು ನೀಲಿ ಬಣ್ಣಕ್ಕೆ ಬದಲಿಸಿ ಮುಂಬೈ ಗೆಲುವಿಗೆ ಸಪೋರ್ಟ್‌ ಮಾಡಿತ್ತು. ಇದನ್ನೂ ಓದಿ: ರಾಜಕೀಯ ಒತ್ತಡದ ನಡುವೆಯೂ IPL ವೀಕ್ಷಿಸಿ ರಿಲ್ಯಾಕ್ಸ್ ಆದ ನೂತನ ಸಿಎಂ ಸಿದ್ದರಾಮಯ್ಯ

ಅಂದುಕೊಂಡಂತೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 5 ವಿಕೆಟ್‌ಗಳ ಜಯ ಸಾಧಿಸಿತು. ಆದರೆ 2023ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವೇ ಪ್ಲೇ ಆಫ್‌ ರೇಸ್‌ನಲ್ಲಿರೋದ್ರಿಂದ ಹೈದರಾಬಾದ್‌ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್‌ ಸೋಲುವಂತೆ ಆರ್‌ಸಿಬಿ ಫ್ಯಾನ್ಸ್‌ ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ: RCB ಮ್ಯಾಚ್‌ ನೋಡಲು ಟಿಕೆಟ್ ಸಿಗದಿದ್ದಕ್ಕೆ ರೊಚ್ಚಿಗೆದ್ರು ಫ್ಯಾನ್ಸ್‌ – ದ್ರಾವಿಡ್‌ ಕಾರಿಗೆ ಮುತ್ತಿಗೆ

ಭಾನುವಾರ ಮುಂಬೈ ಇಂಡಿಯನ್ಸ್‌ vs ಸನ್‌ ರೈಸರ್ಸ್‌ ಹೈದರಾಬಾದ್‌ (MIvsSRH) ಹಾಗೂ ಆರ್‌ಸಿಬಿ vs ಗುಜರಾತ್‌ ಟೈಟಾನ್ಸ್‌ (RCBvsGT) ವಿರುದ್ಧ ನಡೆಯಲಿರುವ ರಣರೋಚಕ ಪಂದ್ಯಗಳನ್ನು ವೀಕ್ಷಣೆ ಮಾಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮುಂಬೈ ತಂಡಕ್ಕೆ ಫೇವ್‌ರೆಟ್‌ ಪಿಚ್‌ ಆಗಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ಹೈದರಾಬಾದ್‌ ಎದುರಿಸುವುದು ಸಾಧ್ಯವೇ? ಬೌಲಿಂಗ್‌ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ಪಾಂಡ್ಯನ ಟೈಟಾನ್ಸ್‌ ಪಡೆಯನ್ನು ಆರ್‌ಸಿಬಿ ಸೋಲಿಸುತ್ತದೆಯೇ? ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿದೆ. ಆದರೆ ತವರಿನಲ್ಲಿ ಅನೇಕ ಬಾರಿ‌ 200ಕ್ಕೂ ಹೆಚ್ಚು ಮೊತ್ತ ದಾಖಲಿಸಿರುವ ಆರ್‌ಸಿಬಿ ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಪ್ರಶ್ನೆಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಆರ್‌ಸಿಬಿ ಖಚಿತವಾಗಿ ಪ್ಲೇ ಆಫ್‌ ಪ್ರವೇಶಿಸಲಿದೆ.

Share This Article