ನಯನತಾರಾ ದಂಪತಿ IPL ಕ್ರೇಜ್‌ – CSKಗೆ ಬಲ ತುಂಬಿದ ಲೇಡಿ ಸೂಪರ್‌ ಸ್ಟಾರ್‌

Public TV
2 Min Read

ಚೆನ್ನೈ: ಸದಾ ಸಿನಿ ಜರ್ನಿಯಲ್ಲಿ ಬ್ಯೂಸಿಯಾಗಿರುವ ವಿಘ್ನೇಶ್ ಶಿವನ್ (Vignesh Shivan) ಹಾಗೂ ನಯನತಾರಾ (Nayanthara) ದಂಪತಿ ಶನಿವಾರ ಐಪಿಎಲ್‌ (IPL) ಮ್ಯಾಚ್‌ ವೀಕ್ಷಣೆ ಮಾಡಿದ್ದಾರೆ.

 

View this post on Instagram

 

A post shared by Vignesh Shivan (@wikkiofficial)

ಶನಿವಾರ ಚೆಪಾಕ್ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಮುಂಬೈ ಇಂಡಿಯನ್ಸ್‌ (Mumbai Indians) ನಡುವಿನ ಪಂದ್ಯಕ್ಕೆ ನಯನತಾರಾ, ವಿಘ್ನೇಶ್‌ ದಂಪತಿ ಹಾಜರಾಗಿದ್ದರು. ಕಾಲಿವುಡ್‌ ಸ್ಟಾರ್‌ ಧನುಷ್‌ (Dhanush) ಹಾಗೂ ಉದಯನಿಧಿ ಸ್ಟಾಲಿನ್‌ (Udhayanidhi Stalin) ಸಹ ಬಿಡುವು ಮಾಡಿಕೊಂಡು ಪಂದ್ಯ ವೀಕ್ಷಣೆ ಮಾಡುವ ಮೂಲಕ ಚೆನ್ನೈ ತಂಡಕ್ಕೆ ಬಲ ತುಂಬಿದರು. ಪ್ರತಿ ಸಿಕ್ಸರ್‌ ಬೌಂಡರಿಗಳನ್ನ ಎಂಜಾಯ್‌ ಮಾಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಈ ಸಂಭ್ರಮದ ಕ್ಷಣಗಳನ್ನು ಫೋಟೋದಲ್ಲಿ ಸೆರೆಹಿಡಿದಿರುವ ನಯನತಾರಾ ದಂಪತಿ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

2015ರ ತಮಿಳು ಆಕ್ಷನ್‌ ಕಾಮಿಡಿ ʻನಾನುಮ್‌ ರೌಡಿದಾನ್‌ʼ ಸಿನಿ ಚಿತ್ರೀಕರಣದ ವೇಳೆ ನಯನತಾರಾ ಹಾಗೂ ವಿಘ್ನೇಶ್‌ ಅವರ ಪ್ರೀತಿ ಶುರುವಾಗಿತ್ತು. ಕಳೆದ ವರ್ಷ ನಯನತಾರಾ- ವಿಘ್ನೇಶ್ ಶಿವನ್ ಅದ್ಧೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಈ ಜೋಡಿ ಪಡೆದಿದ್ದರು.

‘ಲೇಡಿ ಸೂಪರ್ ಸ್ಟಾರ್‌’ ನಯನತಾರಾ ಅವರಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ದಕ್ಷಿಣ ಭಾರತದಲ್ಲಿ ನಯನತಾರಾಗೆ ಸಖತ್ ಬೇಡಿಕೆ ಇದೆ. ಅವರು ಎಲ್ಲೇ ಹೋದರೂ, ಬಂದರೂ ಸಾವಿರಾರು ಜನರು ಸೇರುತ್ತಾರೆ. ಈಗ ಅವರು ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ:
ಕಳೆದ ವರ್ಷ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆಗೆ ಸಪ್ತಪದಿ ತುಳಿದ ನಟಿ ನಯನತಾರಾ ಅವರು ಈಗ ಎರಡು ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿರುವ ನಯನತಾರಾ, ಮಕ್ಕಳ ಲಾಲನೆ ಪಾಲನೆ ಜೊತೆಗೆ ಸಿನಿಮಾ ಕೆಲಸಗಳಲ್ಲೂ ಸಖತ್ ಬ್ಯೂಸಿ ಆಗಿದ್ದಾರೆ. ಈ ವರ್ಷ ಶಾರುಖ್ ಖಾನ್ ಜೊತೆಗೆ ನಯನತಾರಾ ನಟಿಸಿರುವ ‘ಜವಾನ್‌’ ಸಿನಿಮಾವು ತೆರೆಗೆ ಬರಲಿದೆ. ಇದು ನಯನತಾರಾ ಅವರ ಮೊದಲ ಬಾಲಿವುಡ್ ಸಿನಿಮಾವಾಗಿದೆ. ಜೊತೆಗೆ ನಟ ‘ಜಯಂ’ ರವಿ ಜತೆ ‘ಇರೈವನ್‌’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *