ಕಳಪೆ ಫೀಲ್ಡಿಂಗ್‌ಗೆ ಬೆಂಗಳೂರು ಬಲಿ – ಕೋಲ್ಕತ್ತಾಗೆ 21 ರನ್‌ಗಳ ಜಯ

Public TV
2 Min Read

ಬೆಂಗಳೂರು: ಕಳಪೆ ಫೀಲ್ಡಿಂಗ್‌, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಸೋಲನ್ನು ಅನುಭವಿಸಿದೆ. 21 ರನ್‌ಗಳಿಂದ ಗೆದ್ದ ಕೋಲ್ಕತ್ತಾ ಈ ಆವೃತ್ತಿಯಲ್ಲಿ ಮೂರನೇ  ಜಯವನ್ನು ದಾಖಲಿಸಿತು.

ಗೆಲ್ಲಲು 201 ರನ್‌ಗಳ ಕಠಿಣ ಗುರಿಯನ್ನು ಪಡೆದ ಬೆಂಗಳೂರು ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 179 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಆವೃತ್ತಿಯಲ್ಲಿ ತಾನು ಆರ್‌ಸಿಬಿ ವಿರುದ್ಧ ಆಡಿದ ಎರಡು ಪಂದ್ಯಗಳನ್ನು ಕೋಲ್ಕತ್ತಾ ಗೆದ್ದಿರುವುದು ವಿಶೇಷ. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

ಇನ್ನಿಂಗ್ಸ್‌ ಆರಂಭಿಸಿದ ಕೊಹ್ಲಿ (Virat Kohli) ಮತ್ತು ಫಾಫ್‌ ಡು ಪ್ಲೆಸಿಸ್‌ ಆರಂಭದಿಂದಲೇ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ಆದರೆ ಡುಪ್ಲೆಸಿಸ್‌ ಬಲವಾದ ಹೊಡೆತ ಹೊಡೆಯಲು ಹೋಗಿ 17 ರನ್‌(7 ಎಸೆತ, 1 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ನಂತರ ಬಂದ ಶಾಬಾಜ್‌ ಅಹ್ಮದ್‌ 2 ರನ್‌, ಮ್ಯಾಕ್ಸ್‌ವೆಲ್‌ 5 ರನ್‌ ಗಳಿಸಿ ಔಟಾದರು.

ವಿಕೆಟ್‌ ಉರುಳುತ್ತಿದ್ದರೂ ಕೊಹ್ಲಿ ಮತ್ತು ಮಹಿಪಾಲ್ ಲೋಮ್ರೋರ್ 4ನೇ ವಿಕೆಟಿಗೆ 34 ಎಸೆತಗಳಲ್ಲಿ 55 ರನ್‌ ಜೊತೆಯಾಟವಾಡಿದರು. ಕೊಹ್ಲಿ ಲೋಮ್ರೋರ್‌ 34 ರನ್‌(18 ಎಸೆತ, 1 ಬೌಂಡರಿ, 3 ಸಿಕ್ಸರ್‌), ಕೊಹ್ಲಿ54 ರನ್‌(37 ಎಸೆತ, 6 ಬೌಂಡರಿ) ಹೊಡೆದು ವೆಂಕಟೇಶ್‌ ಅಯ್ಯರ್‌ ಬೌಂಡರಿ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ದಿನೇಶ್‌ ಕಾರ್ತಿಕ್‌ 22 ರನ್‌ಗಳಿಸಿ ಕ್ಯಾಚ್‌ ನೀಡಿ ಹೊರ ನಡೆದರು.

ವರುಣ್‌ ಚಕ್ರವರ್ತಿ 27 ರನ್‌ ನೀಡಿ 3 ವಿಕೆಟ್‌ ಪಡೆದರೆ, ಸುಯೇಶ್‌ ಶರ್ಮಾ ಮತ್ತು ಅಂಡ್ರೆ ರಸಲ್‌ ತಲಾ 2 ವಿಕೆಟ್‌ ಪಡೆದರು. ಬೌಲಿಂಗ್‌ ನಿಯಂತ್ರಣದ ಜೊತೆ ಅತ್ಯುತ್ತಮ ಫೀಲ್ಡಿಂಗ್‌ನಿಂದ ಕೋಲ್ಕತ್ತಾ ಈ ಪಂದ್ಯವನ್ನು ಗೆದ್ದುಕೊಂಡಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ ಜೇಸನ್‌ ರಾಯ್‌ 56 ರನ್‌(29 ಎಸೆತ, 4 ಬೌಂಡರಿ, 5 ಸಿಕ್ಸರ್‌), ನಾರಾಯಣ ಜಗದೀಶನ್‌ 27 ರನ್‌(29 ಎಸೆತ, 4 ಬೌಂಡರಿ) ಹೊಡೆದು ಔಟಾದರು. 2 ಜೀವದಾನ ಪಡೆದ ನಾಯಕ ನಿತೀಶ್‌ ರಾಣಾ ಸ್ಫೋಟಕ 48 ರನ್‌(21 ಎಸೆತ, 3 ಬೌಂಡರಿ, 4 ಸಿಕ್ಸರ್‌) ಹೊಡೆದರೆ ಕೊನೆಯಲ್ಲಿ ರಿಂಕು ಸಿಂಗ್‌ ಔಟಾಗದೇ 18 ರನ್‌(10 ಎಸೆತ, 2 ಬೌಂಡರಿ, 1 ಸಿಕ್ಸರ್‌) ಡೇವಿಡ್‌ ವೈಸ್‌ ಔಟಾಗದೇ 12 ರನ್‌(3 ಎಸೆತ, 2 ಸಿಕ್ಸರ್)‌ ಸಿಡಿಸಿದ ಪರಿಣಾಮ ಕೋಲ್ಕತ್ತಾ ಅಂತಿಮವಾಗಿ 5 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿತು.

Share This Article