ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

Public TV
1 Min Read

ಮುಂಬೈ: ಐಪಿಎಲ್ 2022ರ ಟೂರ್ನಿಯಲ್ಲಿ ಮುಂಬೈ ತಂಡದ ಪರ ಲೀಗ್ ಪಂದ್ಯಗಳಲ್ಲಿ ಆಡಲು ಅರ್ಜುನ್‍ಗೆ ಒಂದೇ ಒಂದು ಅವಕಾಶ ಸಿಗದ ಕಾರಣ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೌನ ಮುರಿದಿದ್ದಾರೆ.

ಈ ಕುರಿತು ಮಂಗಳವಾರ ಯೂಟ್ಯೂಬ್ ಚಾನೆಲ್‍ವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂಬೈ ಫ್ರಾಂಚೈಸಿಯ ಮಾರ್ಗದರ್ಶಕರಾದ ಸಚಿನ್, ಮಗ ಅರ್ಜುನ್‍ಗೆ ನೀಡಿದ್ದ ಕೆಲ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಅರ್ಜುನ್‍ಗೆ ಕೇವಲ ತನ್ನ ಆಟದ ಮೇಲೆ ಗಮನಹರಿಸು ಅಂತ ಹೇಳಿದ್ದೆ. ತಂಡದ ಆಯ್ಕೆಯ ಭಾಗದ ಬಗ್ಗೆ ಯೋಚಿಸುವುದಿಲ್ಲ. ನಾನು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ. ನಾನು ಆ ಭಾಗವನ್ನು ನಿರ್ವಹಣೆಗೆ ಮಾತ್ರ ಬಿಡುತ್ತೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಡುಪ್ಲೆಸಿ ಬಳಗಕ್ಕೆ ನಿರ್ಣಾಯಕ

ಎಡಗೈ ಮಧ್ಯಮ ವೇಗಿ ಅರ್ಜುನ್‍ರನ್ನು ಈ ವರ್ಷದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 30 ಲಕ್ಷ ನೀಡಿ ಖರೀದಿಸಲಾಗಿತ್ತು. ಆದರೆ ಲೀಗ್ ಹಂತದ ಒಂದೇ ಒಂದು ಪಂದ್ಯದಲ್ಲೂ ಅವರಿಗೆ ಆಡಲೂ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಕೊನೆ ಸ್ಥಾನದಲ್ಲಿದೆ. ಟೂರ್ನಿಯ ಆರಂಭದಿಂದಲೂ ಸ್ಥಿರ ಪದರ್ಶನ ನೀಡಲು ಎಡವಿದ್ದ ಮುಂಬೈ, ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *