ವಿರೋಚಿತ ಸೋಲು – ಕಣ್ಣೀರಿಟ್ಟ ರಿಂಕು ಸಿಂಗ್

Public TV
2 Min Read

ಮುಂಬೈ: ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ರಿಂಕು ಸಿಂಗ್ ತಮ್ಮ ಏಕಾಂಗಿ ಹೋರಾಟದಿಂದ ಇನ್ನೇನು ತಂಡಕ್ಕೆ ಗೆಲುವು ತಂದು ಕೊಟ್ಟರು ಎನ್ನುವಷ್ಟರಲ್ಲಿ ವಿಕೆಟ್ ಕೈಜೆಲ್ಲಿಕೊಂಡರು. ಇದರೊಂದಿಗೆ ಗೆಲುವಿನ ಹೊಸ್ತಿಲಲ್ಲಿದ್ದ ಕೆಕೆಆರ್ ವಿರೋಚಿತ 2 ರನ್‍ಗಳಿಂದ ಸೋಲುಕಂಡಿತು.

ಈ ಸೋಲಿನಲ್ಲೂ ಕೂಡ ಕೆಕೆಆರ್ ತಂಡದ ಗೆಲುವಿಗಾಗಿ ಹೋರಾಡಿದ ರಿಂಕು ಸಿಂಗ್ ಎಲ್ಲರ ಮನಗೆದ್ದರು. 144 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ರಿಂಕು ಸಿಂಗ್ ಮುಂದೆ 24 ಎಸೆತಗಳಲ್ಲಿ 67 ರನ್ ಗುರಿ ಇತ್ತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಇನ್ನೊಂದೆಡೆ ರಿಂಕು ಸಿಂಗ್ ಅಬ್ಬರಿಸಲು ಆರಂಭಿಸಿದರು. ಇದನ್ನೂ ಓದಿ: RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ

ಲಕ್ನೋ ಬೌಲರ್‌ಗಳ ಮೇಲೆ ಏಕಾಏಕಿ ಮುಗಿಬಿದ್ದ ರಿಂಕು ಸಿಂಗ್ ತಂಡದ ಗೆಲುವು ಖಚಿತ ಪಡಿಸಲು ಮುಂದಾದರು. 19 ಓವರ್‌ನಲ್ಲಿ ಕೋಲ್ಕತ್ತಾಗೆ 17 ರನ್ ಹರಿದುಬಂತು. ಕೊನೆಯ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 21 ರನ್ ಬೇಕಾಗಿತ್ತು. ಸ್ಟೋಯಿನಿಸ್ ಎಸೆದ ಮೊದಲ ಎಸೆತವನ್ನೇ ರಿಂಕು ಸಿಂಗ್ ಬೌಂಡರಿಗಟ್ಟಿದರು, ಆ ಬಳಿಕ ಸತತ ಎರಡು ಎಸೆತಗಳನ್ನು ಸಿಕ್ಸ್ ಬಾರಿಸಿದರು. 4 ನೇ ಎಸೆತದಲ್ಲಿ 2 ರನ್ ಬಂತು. ಆ ಬಳಿಕ ಎರಡು ಎಸೆತಗಳಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಾಗಿತ್ತು. ಈ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಿಂಕು ಸಿಂಗ್ 5ನೇ ಎಸೆತದಲ್ಲಿ ಲೂಯಿಸ್ ಹಿಡಿದ ಅದ್ಭುತ ಕ್ಯಾಚ್‍ಗೆ ವಿಕೆಟ್ ಕೈಚೆಲ್ಲಿಕೊಂಡರು. ಈ ಮೂಲಕ ರಿಂಕ್ ಸಿಂಗ್ 40 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಹೋರಾಟದ ಇನ್ನಿಂಗ್ಸ್ ಕೊನೆಗೊಂಡಿತು. ಇದನ್ನೂ ಓದಿ: ಸ್ಟೋಯಿನಿಸ್ ಸ್ಟನ್‌ ಬೌಲಿಂಗ್, ಡಿ ಕಾಕ್ ದರ್ಬಾರ್‌ – ಪ್ಲೇ ಆಫ್‍ಗೆ ಎರಡನೇ ತಂಡವಾಗಿ ಎಂಟ್ರಿಕೊಟ್ಟ ಲಕ್ನೋ

ಇತ್ತ 1 ಎಸೆತದಲ್ಲಿ 3 ರನ್‍ಗಳ ಗುರಿ ಪಡೆದ ಕೋಲ್ಕತ್ತಾ ತಂಡ ಗೆಲುವು ದಾಖಲಿಸಲಾಗದೆ 2 ರನ್‍ಗಳಿಂದ ವಿರೋಚಿತ ಸೋಲು ಕಂಡಿತು. ಈ ಸೋಲು ಕಂಡ ರಿಂಗ್ ಸಿಂಗ್ ಮೈದಾನದಲ್ಲಿ ಕಣ್ಣೀರಿಟ್ಟರು. ಇದೀಗ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿಂಕು ಸಿಂಗ್ ಬ್ಯಾಟಿಂಗ್ ಪರಾಕ್ರಮವನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *