6 ಸಿಕ್ಸ್, 8 ಫೋರ್ ಚಚ್ಚಿ ಮಿಲ್ಲರ್ ಮಿಂಚಿಂಗ್ – ಗುಜರಾತ್‍ಗೆ ರೋಚಕ ಜಯ

By
2 Min Read

ಪುಣೆ: ರೋಚಕವಾಗಿ ಕೂಡಿದ ಕಾದಾಟದಲ್ಲಿ ಬ್ಯಾಟಿಂಗ್‍ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದ ಡೇವಿಡ್ ಮಿಲ್ಲರ್ ಆಟಕ್ಕೆ ಚೆನ್ನೈ ಶರಣಾಗಿದೆ.

ಆರಂಭದಿಂದ ಕೊನೆಯ ವರೆಗೆ ಗುಜರಾತ್ ಗೆಲುವಿಗಾಗಿ ಶತಾಯ ಗತಾಯ ಹೋರಾಡಿದ ಡೇವಿಡ್ ಮಿಲ್ಲರ್ ಅಜೇಯ 94 ರನ್ (51 ಎಸೆತ, 8 ಬೌಂಡರಿ, 6 ಸಿಕ್ಸ್) ಬಾರಿಸಿ ಇನ್ನೂ 1 ಎಸೆತ ಬಾಕಿ ಇರುವಂತೆ ಗುಜರಾತ್‍ಗೆ 3 ವಿಕೆಟ್‍ಗಳ ರೋಚಕ ಜಯ ತಂದುಕೊಟ್ಟರು.

170 ರನ್ ಗುರಿ ಪಡೆದ ಗುಜರಾತ್ ತಂಡ ಕೂಡ ಉತ್ತಮ ಆರಂಭ ಪಡುವಲ್ಲಿ ವಿಫಲವಾಯಿತು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಬೇಗನೆ ವಿಕೆಟ್ ಕೈ ಚೆಲ್ಲಿಕೊಂಡು ಪೆವಿಲಿಯನ್ ಸೇರಿಕೊಂಡರು. ನಂತರ ಡೇವಿಡ್ ಮಿಲ್ಲರ್ ಜೊತೆ ಸೇರಿ ನಾಯಕ ರಶೀದ್ ಖಾನ್ ಭರ್ಜರಿ ಬ್ಯಾಟ್ ಬೀಸಿದರು. ಚೆನ್ನೈ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ ರಶೀದ್ ಖಾನ್ 40 ರನ್ (21 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ತಂಡ ಆರಂಭದಲ್ಲೇ ಪಟಪಟನೇ ಮೊದಲ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಒಂದು ಕಡೆ ಆರಂಭಿಕ ಆಟಗಾರ ಋತುರಾಜ್ ಗಾಯಾಕ್ವಾಡ್ ಅಬ್ಬರಿಸಲು ಆರಂಭಿಸಿದರು. ಈ ಹಿಂದಿನ ಬ್ಯಾಟಿಂಗ್ ವೈಫಲ್ಯವನ್ನು ಮರೆಮಾಚುವಂತೆ ಗಾಯಕ್ವಾಡ್ ಬ್ಯಾಟ್ ಬೀಸಿದರು.

ಗಾಯಕ್ವಾಡ್‍ಗೆ ಉತ್ತಮ ಸಾಥ್ ನೀಡಿದ ಅಂಬಾಟಿ ರಾಯುಡು 46 ರನ್ (31 ಎಸೆತ, 4 ಬೌಂಡರಿ) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈ ಚೆಲ್ಲಿಕೊಂಡರು. ಈ ಮೊದಲು ಗಾಯಕ್ವಾಡ್ ಜೊತೆಗೆ 3ನೇ ವಿಕೆಟ್‍ಗೆ 92 ರನ್ (56 ಎಸೆತ) ಜೊತೆಯಾಟವಾಡಿದರು. ಇವರ ವಿಕೆಟ್ ಕಳೆದುಕೊಂಡ ಬಳಿಕ ಕೆಲಕಾಲ ಆರ್ಭಟಿಸಿದ ಗಾಯಕ್ವಾಡ್ 73 ರನ್ (48 ಎಸೆತ, 5 ಬೌಂಡರಿ, 5 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ಬೌಂಡರಿ, ಸಿಕ್ಸರ್‌ಗಳ ನೆರವಿನಿಂದ ಶಿವಂ ದುಬೆ 19 ರನ್ (17 ಎಸೆತ, 2 ಬೌಂಡರಿ) ಮತ್ತು ಜಡೇಜಾ ಅಜೇಯ 22 ರನ್ (12 ಎಸೆತ, 2 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿತು.

Share This Article
Leave a Comment

Leave a Reply

Your email address will not be published. Required fields are marked *