ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

Public TV
2 Min Read

ಮುಂಬೈ: ಕೋಲ್ಕತ್ತಾ ತಂಡದ ಆರಂಭಿಕ ಆಟಗಾರ ಆರನ್ ಫಿಂಚ್ ವಿಕೆಟ್ ಪಡೆದ ಡೆಲ್ಲಿ ಬೌಲರ್ ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಮಾಡಿ ನಿನ್ನೆಯ ಪಂದ್ಯದಲ್ಲಿ ಎಲ್ಲರ ಗಮನಸೆಳೆದಿದ್ದಾರೆ.

ಚೇತನ್ ಸಕಾರಿಯಾ ಡೆಲ್ಲಿ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಆರಂಭದಲ್ಲೇ ಆರನ್ ಫಿಂಚ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಈ ವಿಕೆಟ್ ಕಬಳಿಸಿದ ಬಳಿಕ ಸಕಾರಿಯಾ ಬಲಗೈ ಮುಷ್ಟಿ ಹಿಡಿದು ಎಡಗೈನ ಎರಡು ಬೆರಳುಗಳನ್ನು ಹಣೆಯ ಮೇಲೆ ಇಟ್ಟು ಸಂಭ್ರಮಿಸಿದ್ದರು. ಈ ಸಂಭ್ರಮಾಚರಣೆ ಡ್ರ್ಯಾಗನ್ ಬಾಲ್ Z ಕಾರ್ಟೂನ್ ಪಾತ್ರ ಗೊಕು ರೀತಿ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೊರೊನಾ ಸೋಂಕಿನಿಂದ ತಂದೆಯನ್ನು ಕಳೆದುಕೊಂಡ ಚೇತನ್ ಸಕಾರಿಯಾ

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಸಕಾರಿಯಾ, ಇದು ಭಾವನಾತ್ಮಕ ಸಂಭ್ರಮಾಚರಣೆ ನನ್ನ ತಂದೆಗಾಗಿ. ನನ್ನ ತಂದೆ ಯಾವತ್ತು ನಾನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್‌ ವಿಕೆಟ್ ಪಡೆಯುವುದನ್ನು ಎದುರು ನೋಡುತ್ತಿದ್ದರು. ಹಾಗಾಗಿ ತಂದೆಗಾಗಿ ಈ ರೀತಿ ಸಂಭ್ರಮಾಚರಣೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

IPL DC VS KKR 7

2021ರಲ್ಲಿ ಸಕಾರಿಯಾ ಐಪಿಎಲ್‍ನಲ್ಲಿ ಆಡುತ್ತಿದ್ದಾಗ ಅವರ ತಂದೆ ಕಾಂಜಿಭಾಯ್ ಸಕಾರಿಯಾಗೆ ಕೊರೊನಾ ಸೋಂಕು ಕಾಣಿಸಿಕೊಂಡು ಮರಣ ಹೊಂದಿದ್ದರು. ಈ ವೇಳೆ ಸಕಾರಿಯಾ ರಾಜಸ್ಥಾನ ಪರ ಉತ್ತಮ ಪ್ರದರ್ಶನ ತೋರಿ ಗಮನಸೆಳೆದಿದ್ದರು. ನಂತರ ಟೀಂ ಇಂಡಿಯಾ ಪರ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡರು. 15ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ಸಕಾರಿಯಾ ಅವರನ್ನು ಡೆಲ್ಲಿ ತಂಡ 4.20 ಕೋಟಿ ರೂ. ನೀಡಿ ಖರೀದಿಸಿತು. ನಿನ್ನೆ 2022ರ ಐಪಿಎಲ್‍ನಲ್ಲಿ ಡೆಲ್ಲಿ ಪರ ಮೊದಲ ಪಂದ್ಯವಾಡಿದ ಸಕಾರಿಯಾ 3 ಓವರ್ ಎಸೆದು 17 ರನ್ ನೀಡಿ 1 ವಿಕೆಟ್ ಪಡೆಯಲು ಯಶಸ್ವಿಯಾದರು.

 

View this post on Instagram

 

A post shared by IPL (@iplt20)

ಈ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ 146 ರನ್‍ಗಳ ಸಾಧರಣ ಮೊತ್ತ ಬೆನ್ನಟ್ಟಿದ ಡೆಲ್ಲಿ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ರನ್ ಸಿಡಿಸಿ 4 ವಿಕೆಟ್‍ಗಳ ಜಯ ದಾಖಲಿಸಿತು.

Share This Article
Leave a Comment

Leave a Reply

Your email address will not be published. Required fields are marked *