ಐಪಿಎಲ್‍ನ ಸಿಕ್ಸರ್ ಕಿಂಗ್ಸ್

Public TV
1 Min Read

ಮುಂಬೈ: ಐಪಿಎಲ್ ಎಂದಕ್ಷಣ ನೆನಪಿಗೆ ಬರುವುದು ಬಿಗ್ ಸಿಕ್ಸರ್‌ಗಳು. ಬ್ಯಾಟ್ಸ್‌ಮ್ಯಾನ್‌ಗಳು ಸಿಡಿಸುವ ಆಕರ್ಷಕ ಸಿಕ್ಸರ್‌ಗಳು ಪ್ರೇಕ್ಷಕರನ್ನು ರಂಜಿಸುತ್ತದೆ. ಐಪಿಎಲ್ ಇತಿಹಾಸವನ್ನು ಗಮನಿಸಿದರೆ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಪಟ್ಟಿಯಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ.

ಹೌದು ಐಪಿಎಲ್ ಬ್ಯಾಟ್ಸ್‌ಮ್ಯಾನ್‌ಗಳ ಸ್ವರ್ಗ. ಬಿಗ್ ಹಿಟ್ಟರ್‌ಗಳು ಸಿಡಿಸುವ ಮನಮೋಹಕ ಸಿಕ್ಸರ್‌ಗಳು ಅಭಿಮಾನಿಗಳನ್ನು ಇನ್ನಷ್ಟು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಈವರೆಗೆ ಆಗಿರುವ 14 ಸೀಸನ್‍ಗಳನ್ನು ಗಮನಿಸಿದಾಗ 3 ಮಂದಿ ಆಟಗಾರರು ಟಾಪ್ 3 ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿ ಪಂದ್ಯದಲ್ಲೂ ಬಿಗ್ ಸಿಕ್ಸರ್ ಮೂಲಕ ಈ ಮೂವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಇದನ್ನೂ ಓದಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ – ರವೀಂದ್ರ ಜಡೇಜಾ ವಿಶ್ವ ನಂಬರ್ 1 ಆಲ್‍ರೌಂಡರ್

14ನೇ ಆವೃತ್ತಿ ಐಪಿಎಲ್‍ವರೆಗೆ ಗಮನಿಸಿದರೆ, ಐಪಿಎಲ್‍ನ ಸಿಕ್ಸರ್ ಕಿಂಗ್ ಆಗಿ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ಸಿಕ್ಸರ್‌ಗಳ ಮಳೆ ಸುರಿಸುವ ಗೇಲ್ ಐಪಿಎಲ್ ಇತಿಹಾಸದಲ್ಲಿ 357 ಸಿಕ್ಸ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಬಳಿಕ 251 ಸಿಕ್ಸ್ ಸಿಡಿಸಿರುವ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಇದ್ದು, ಈವರೆಗೆ ರೋಹಿತ್ 227 ಸಿಕ್ಸ್ ಸಿಡಿಸಿ ಹಿಟ್‍ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾವಲ್ಪಿಂಡಿ ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿದ ಡೇವಿಡ್ ವಾರ್ನರ್

14 ಆವೃತ್ತಿಗಳ ಬಳಿಕ ಇದೀಗ 15ನೇ ಆವೃತ್ತಿ ಐಪಿಎಲ್‍ಗೆ ದಿನಗಣನೆ ಆರಂಭವಾಗಿದ್ದು, ಈ ಮೂವರು ಐಪಿಎಲ್ ಸಿಕ್ಸರ್ ಕಿಂಗ್ಸ್‌ಗಳಲ್ಲಿ ಗೇಲ್ ಮತ್ತು ವಿಲಿಯರ್ಸ್ ಈಗಾಗಲೇ ಐಪಿಎಲ್‍ನಿಂದ ದೂರ ಸರಿದಿದ್ದಾರೆ. ರೋಹಿತ್ ಶರ್ಮಾ ಮಾತ್ರ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಬಿಡಿಯ ಸಿಕ್ಸರ್‌ಗಳ ದಾಖಲೆಯನ್ನು ಅಳಿಸಿ ಹಾಕಲು ರೋಹಿತ್‍ಗೆ ಇನ್ನೂ 24 ಸಿಕ್ಸ್ ಅವಶ್ಯಕತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *