ಅರಬ್ ನಾಡಿನಲ್ಲಿಂದು ಹೈವೋಲ್ಟೇಜ್ ಪಂದ್ಯ – ಯಾರಿಗೆ ಸಿಗಲಿದೆ ಜಯ?

Public TV
2 Min Read

ದುಬೈ: ಅರಬ್ ನಾಡಿನಲ್ಲಿಂದು ಐಪಿಎಲ್ ಆರಂಭಗೊಳ್ಳಲಿದ್ದು, ಧೋನಿ ಸಾರಥ್ಯದ ಚೆನ್ನೈ ಹಾಗೂ ರೋಹಿತ್ ಸಾರಥ್ಯದ ಮುಂಬೈ ಮೊದಲ ಪಂದ್ಯದಲ್ಲಿ ಕಾದಾಡಲಿವೆ. ಮೊದಲ ಪಂದ್ಯವೇ ಹೈವೋಲ್ಟೇಜ್‍ನಿಂದ ಕೂಡಿದ್ದು ಅಭಿಮಾನಿಗಳಲ್ಲಿ ಕಾತರತೆಯನ್ನು ಹೆಚ್ಚಿಸಿದೆ.

ಐಪಿಎಲ್‍ನ ಮೊದಲಾರ್ಧದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಮೊದಲ ಕಾದಾಟದಲ್ಲಿ ಬಲಿಷ್ಟ ಚೆನ್ನೈ ತಂಡವನ್ನು ಮುಂಬೈ ಬಗ್ಗು ಬಡಿದಿತ್ತು. ಚೆನ್ನೈ ನೀಡಿದ್ದ 219 ರನ್‍ಗಳ ಟಾರ್ಗೆಟ್ ಚೇಸ್ ಮಾಡಿ ಧೋನಿ ಪಡೆಗೆ ಶಾಕ್ ನೀಡಿತ್ತು. ಈಗ ಆ ಸೋಲಿನ ಸೇಡಿನ ತವಕದಲ್ಲಿರುವ ಚೆನ್ನೈ, ಮುಂಬೈಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ. ಇದನ್ನೂ ಓದಿ: ರವಿಶಾಸ್ತ್ರಿ ಬಳಿಕ ಟೀಂ ಇಂಡಿಯಾಕ್ಕೆ ಕನ್ನಡಿಗ ಕೋಚ್?

ಎರಡು ತಂಡಗಳ ಬಲಾಬಲವನ್ನು ನೋಡುವುದಾದರೇ ಮೆಲ್ನೋಟಕ್ಕೆ ಮುಂಬೈ ಬಲಿಷ್ಟ ತಂಡದಂತೆ ಕಾಣುತ್ತದೆ. ಮುಂಬೈಗೆ ಡಿ ಕಾಕ್, ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಬ್ಯಾಂಟಿಂಗ್‍ನಲ್ಲಿ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಬೂಮ್ರ, ಅಡಮ್ ಮಿಲ್ನೆ, ಟ್ರೆಂಟ್ ಬೋಲ್ಟ್, ಚಾಹರ್ ಎದುರಾಳಿ ಬ್ಯಾಟಿಂಗ್‍ನ ಬೆನ್ನು ಮೂಳೆ ಮುರಿಯಬಲ್ಲ ಆಟಗಾರರಾಗಿದ್ದಾರೆ. ಇದನ್ನೂ ಓದಿ: ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ

ಚೆನ್ನೈ ತಂಡದಲ್ಲೂ ಕೂಡ ಬಲಿಷ್ಟ ಆಟಗಾರರಿದ್ದು, ಚೆನ್ನೈ ಬ್ಯಾಟಿಂಗ್ ವಿಭಾಗವನ್ನು ನೊಡುವುದಾದರೆ ಸುರೇಶ್ ರೈನಾ, ಮೋಯಿನ್ ಅಲಿ, ಅಂಬಾಟಿ ರಾಯುಡು, ಜಡೇಜಾ, ಎಂ.ಎಸ್ ಧೋನಿಯಂತಹ ಅನುಭವಿ ಆಟಗಾರರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಇಮ್ರಾನ್ ತಾಹೀರ್, ಲುಂಗಿ ಎನ್‍ಗಿಡಿ ಯಂತ ಬೌಲರ್‍ಗಳಿದ್ದಾರೆ. ಸ್ಟಾರ್ ಆಲ್‍ರೌಂಡರ್ ಬ್ರಾವೋ ಚೆನ್ನೈ ತಂಡದ ಟ್ರಾಂಪ್ ಕಾರ್ಡ್ ಆಗಿದ್ದಾರೆ.

ಉಭಯ ತಂಡಗಳು ಸಾಕಷ್ಟು ಅನುಭವಿಗಳಿಂದ ಕೂಡಿದೆ. ಆದರೆ ಕಳೆದ ಬಾರಿ ದುಬೈನಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಚೆನ್ನೈ ನಾಯಕ ಧೋನಿಯು ಸಹ ರನ್ ಗಳಿಸಲು ಪರಾದಾಡಿದ್ದರು. ದುಬೈ ಪಿಚ್ ನಲ್ಲಿ ಚೆನ್ನೈ ತಂಡದ ಟ್ರ್ಯಾಕ್ ರೇಕಾರ್ಡ್ ಅಷ್ಟೋಂದು ಚೆನ್ನಾಗಿಲ್ಲದಿರುವುದು ಮುಂಬೈ ತಂಡಕ್ಕೆ ಪ್ಲಸ್ ಆಗಬಹುದು. ಇಂದು ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು ಕ್ರಿಕೆಟ್ ಪ್ರಿಯರಿಗೆ ಮನರಂಜನೆಯ ಮಹಾಪೂರವೇ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *