ಸಿಂಪಲ್ ಸುನಿ ಆರ್‌ಸಿಬಿ ಭವಿಷ್ಯ ಹೇಳಿದ್ರು

Public TV
1 Min Read

ಬೆಂಗಳೂರು: ಐಪಿಎಲ್ ಪ್ರಾರಂಭವಾದ ನಂತರದಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ರಾರಾಜಿಸುವ  ಪೋಸ್ಟ್  ಅಂದ್ರೆ `ಈ ಬಾರಿ ಕಪ್ ನಮ್ದೇ’. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಆವೃತ್ತಿಯಲ್ಲಿ ಆರ್.ಸಿ.ಬಿ ತಂಡದ ಅಭಿಮಾನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರವನ್ನೇ ನೀಡಿದ್ರೂ ಸಹ ಆರ್.ಸಿ.ಬಿ ತಂಡವೂ ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲಿನ ಲಡ್ಡುವನ್ನು ತಿನ್ನುತ್ತಲೇ ಇದೆ. ಅಲ್ಲದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ, ಮುಂಬೈ, ಹೈದ್ರಾಬಾದ್, ರಾಜಸ್ಥಾನ ತಂಡಗಳ ವಿರುದ್ಧ ಸೋತಿರುವ ಆರ್ ಸಿ ಬಿ ತಂಡದ ಬಗ್ಗೆ ಅಭಿಮಾನಿಗಳು ಈಗಾಗಲೇ ನಂಬಿಕೆ ವಿಶ್ವಾಸ ಎಲ್ಲವನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪಂದ್ಯ ಸೋತರೂ ನಮ್ಮ ಒಲವು ನಮ್ಮ ತಂಡಕ್ಕೆ ಮಾತ್ರ ಎಂಬ ವಿಶ್ವಾಸದಲ್ಲಿರುವ ಆರ್ ಸಿ ಬಿ ತಂಡದ ಅಪ್ಪಟ ಅಭಿಮಾನಿ ಸಿಂಪಲ್ ಸುನಿ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ.

ಸುನಿ ಭವಿಷ್ಯವಾಣಿಯ ಪ್ರಕಾರ ಮುಂದಿನ ಪಂದ್ಯದಲ್ಲಿ ಆರ್ ಸಿ ಬಿ ಗೆಲ್ಲೋ ಲಕ್ಷಣಗಳಿವೆಯಂತೆ. ಸರಣಿಯಲ್ಲಿ ಸೋಲಿನ ರುಚಿ ಉಂಡಿರುವ ಆರ್ ಸಿ ಬಿ ಈ ಪಂದ್ಯದಲ್ಲಿ ಗೆಲ್ಲಲೇ ಬೇಕು. ಗೆದ್ದೇ ಗೆಲ್ಲುತ್ತದೆ. ಸೋತವರು ಗೆಲ್ಲಲೇ ಬೇಕಲ್ಲವೇ ಎಂದು ತಂಡದ ಬಗ್ಗೆ ಒಲುಮೆಯ ಮಾತುಗಳನ್ನಾಡಿದ್ದಾರೆ. ಸುನಿ ಅವರ ಮಾತಿಗೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ಮಾತು ನಿಜವಾಗ್ಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಸತತ 4 ಪಂದ್ಯ ಸೋತು ನಿರಾಸೆಯಲ್ಲಿರುವ ಆರ್ ಸಿ ಬಿ ಇಂದಿನ ಪಂದ್ಯದಲ್ಲಿ ಫಾರ್ಮ್ ಗೆ ಮರಳಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಸಿಂಪಲ್ ಸುನಿಯ ಭವಿಷ್ಯವಾಣಿ ನಿಜವಾಗುತ್ತಾ, ಇಲ್ಲ ಮತ್ತೆ ಅಭಿಮಾನಿಗಳು ಇವರು ಬಾಳು ಇಷ್ಟೇ ಅಂತ ಮೂಗು ಮುರಿಯೋ ಹಾಗಾಗುತ್ತಾ ಕಾದು ನೋಡೋಣ.

Share This Article
Leave a Comment

Leave a Reply

Your email address will not be published. Required fields are marked *