2019ರ ಐಪಿಎಲ್ ಬಳಿಕ ಧೋನಿ ನಿವೃತ್ತಿ? ಕುತೂಹಲ ಮೂಡಿಸಿದ ರೈನಾ ಹೇಳಿಕೆ

Public TV
1 Min Read

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸುರೇಶ್ ರೈನಾ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಪಂದ್ಯದ ಬಳಿಕ ಮಾತನಾಡಿದ ರೈನಾ, ತಂಡದ ನಾಯಕತ್ವದ ಕುರಿತ ಪ್ರಶ್ನೆಗೆ ನೀಡಿದ ಉತ್ತರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಧೋನಿ ನಾಯಕತ್ವದ ಸಿಎಸ್‍ಕೆ ತಂಡ ಐಪಿಎಲ್ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನವನ್ನೇ ತೋರಿದೆ. ಆದರೆ ಧೋನಿ ಅವರ ಅನುಪಸ್ಥಿತಿಯಲ್ಲಿ ತಂಡ ಸೋಲುಂಡು ನಿರಾಸೆ ಮೂಡಿಸುತ್ತಿದೆ. ಈ ಬಾರಿ ಟೂರ್ನಿಯಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. ಈ ಕುರಿತು ರೈನಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಧೋನಿ ತಂಡಕ್ಕೆ ಕೇವಲ ನಾಯಕರಾಗಿ ಮಾತ್ರವಲ್ಲದೇ ಒಬ್ಬ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅವರ ನಾಯಕತ್ವದ ಅನುಪಸ್ಥಿತಿಗಿಂತ ಬ್ಯಾಟ್ಸ್ ಆಗಿ ತಂಡಕ್ಕೆ ಗೈರಾಗುವುದು ಹೆಚ್ಚಿನ ಪ್ರಭಾವ ಉಂಟುಮಾಡುತ್ತದೆ ಎಂದರು. ಇದೇ ವೇಳೆ ಮುಂದಿನ ಅವಧಿಗಳಲ್ಲಿ ತಮಗೆ ತಂಡ ನಾಯಕತ್ವ ವಹಿಸುವ ಬಗ್ಗೆಯೂ ಸುಳಿವು ನೀಡಿದರು. ಹಲವು ವರ್ಷಗಳಿಂದ ತಂಡದ ನಾಯಕತ್ವವನ್ನು ಧೋನಿ ಉತ್ತಮವಾಗಿ ನಿರ್ವಹಿಸಿದ್ದಾರೆ. ಮುಂದಿನ ಅವಧಿಯಲ್ಲಿ ನೀವು ನನ್ನನ್ನು ಹೆಚ್ಚಾಗಿ ನೋಡುತ್ತೀರಿ. ಮತ್ತಷ್ಟು ಪರಿಪಕ್ವತೆ ಗಳಿಸುವ ಅಗತ್ಯ ನನಗಿದೆ. ಆದರೆ ಧೋನಿ ತಮಗೆ ಇಷ್ಟವಿರುಷ್ಟು ದಿನ ಐಪಿಎಲ್ ನಲ್ಲಿ ಮುಂದುವರಿಯಲಿದ್ದಾರೆ ಎಂದರು.

ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಯಶಸ್ವಿ ತಂಡವಾಗಿ ಮುನ್ನುಗುತ್ತಿರುವ ಚೆನ್ನೈ ನಾಯಕತ್ವ ಕುರಿತು ರೈನಾ ಅವರ ಹೇಳಿಕೆ ಕುತೂಹಲ ಮೂಡಿಸಿದ್ದು, 36 ವರ್ಷದ ಧೋನಿ 2019 ಆವೃತ್ತಿ ಬಳಿಕ ನಿವೃತ್ತಿ ಘೋಷಣೆ ಮಾಡಲಿದ್ದರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಐಪಿಎಲ್ ಬಳಿಕ ಆರಂಭವಾಗುವ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಳಿಕ ಧೋನಿ ನಿವೃತ್ತಿ ಹೇಳುತ್ತಾರೆ ಎಂಬ ಮಾತು ಕೇಳಿಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *