ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ: ಬಿಪಾಶಾ ಬಸು

Public TV
2 Min Read

ಮುಂಬೈ: ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಹೇಳಿದರು.

ನಟರಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಪರಸ್ಪರ ಪ್ರೀತಿಸುತ್ತಿದ್ದು, 2016 ಏಪ್ರಿಲ್ 30 ರಂದು ಬಂಗಾಳಿ ಸಾಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ ಇವರಿಬ್ಬರ ವಿವಾಹದ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ. ಕರಣ್‍ರವರ ಎರಡು ಹಿಂದಿನ ವಿವಾಹಗಳು ವಿಫಲವಾಗಿದ್ದ ಕಾರಣ ಬಿಪಾಶಾರವರ ಹೆತ್ತವರು ಈ ವಿವಾಹದ ಕುರಿತು ಮತ್ತು ಅವರ ಆಯ್ಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು ಎಂದು ಬಿಪಾಶಾ ಬಹಿರಂಗಪಡಿಸಿದ್ದಾರೆ. ‘ಕುಬೂಲ್ ಹೈ’ ಚಿತ್ರದ ಖ್ಯಾತ ನಟ ಮೊದಲು ಶ್ರದ್ಧಾ ನಿಗಮ್ ಮತ್ತು ಜೆನ್ನಿಫರ್ ವಿಂಗೆಟ್ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

 

View this post on Instagram

 

A post shared by bipashabasusinghgrover (@bipashabasu)

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಿಪಾಶಾ ತಮ್ಮ ಪ್ರಸ್ತುತ ದಾಂಪತ್ಯ ಜೀವನದ ಹಿಂದಿನ ಕೆಲ ಕರಾಳ ನೆನಪುಗಳ ಬಗ್ಗೆ ಮಾತನಾಡಿ, ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಎಂದಿಗೂ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಖಂಡಿಸಬೇಕು ಅಂತ ಅಲ್ಲ. ನಾನು ಇಷ್ಟಪಟ್ಟಂತಹ ವ್ಯಕ್ತಿತ್ವವುಳ್ಳ ಹುಡುಗ ನನಗೆ ಸಿಕ್ಕಿದ್ದಾನೆ. ನನ್ನ ಆಯ್ಕೆಯ ಸಂಬಂಧವು ಯಾವಾಗಲೂ ದೀರ್ಘಾವಧಿಯವರೆಗೆ ಇರಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ ಎಂದರು.

 

View this post on Instagram

 

A post shared by bipashabasusinghgrover (@bipashabasu)

ನಾನು ರಿಜಿಸ್ಟರ್ ಆಫೀಸಿನ ಕಾಗದದ ತುಂಡಿಗೆ ಸಹಿ ಮಾಡಲಿಲ್ಲ. ಮದುವೆಯ ಮೊದಲಿನ ಯಾವ ಸಂಬಂಧಗಳು ಗಟ್ಟಿ ಇರಲು ಸಾಧ್ಯವಿಲ್ಲ. ಇದು ದುರದೃಷ್ಟಕರ ಆದರೆ ದೀರ್ಘಾವಧಿಯ ಸಂಬಂಧಗಳ ಕೆಲ ನೆನಪುಗಳನ್ನು ನೀವು ಹಿಂದಿರುಗಿ ನೋಡಿದಾಗ ನೀವು ಯಾವಾಗಲೂ ಸಂತೋಷವಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಯಾವುದೇ ಒಂದು ಕಾರಣಕ್ಕಾಗಿ ಏನಾದರೂ ಒಂದು ಮರೆಯಲಾಗದ ಘಟನೆ ಸಂಭವಿಸಿರುತ್ತದೆ ಎಂದು ಕರಣ್ ಮತ್ತು ಅವರ ಪೋಷಕರೊಂದಿಗಿನ ಪ್ರಸ್ತುತ ಬಾಂಧವ್ಯದ ಬಗ್ಗೆ ತಿಳಿ ಹೇಳಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

ಬಿಪಾಶಾ ಕರಣ್‍ರವರನ್ನ ವಿವಾಹವಾಗುವ ಮೊದಲು, ಜಾನ್ ಅಬ್ರಹಾಂ ಜೊತೆ ಸಂಬಂಧದಲ್ಲಿದ್ದರು. ಇಬ್ಬರೂ 9 ವರ್ಷಗಳ ಕಾಲ ಡೇಟಿಂಗ್ ಕೂಡಾ ನಡೆಸಿದ್ದರು. ನಂತರ 2011ರಲ್ಲಿ ಈ ಸಂಬಂಧ ಮುರಿದು ಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *