ಕೇಸ್‌ನಿಂದ ತಪ್ಪಿಸಿಕೊಳ್ಳೋದಕ್ಕೆ ರಾಜಕಾರಣಿಗಳ ಸಹಾಯ ಬಯಸಿದ್ರಾ ದರ್ಶನ್? – ಸ್ಫೋಟಕ ರಹಸ್ಯ ಬಯಲು

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ (Darshan) ಜೈಲು ಸೇರಿ 50 ದಿನಗಳೇ ಕಳೆದಿದ್ದರೂ ತನಿಖೆ (Investigation) ಇನ್ನೂ ಚುರುಕಾಗಿ ಸಾಗುತ್ತಿದೆ. ಅಲ್ಲದೇ ರಹಸ್ಯಗಳು ಬಯಲಾಗುತ್ತಿವೆ.

ರೇಣುಕಾಸ್ವಾಮಿ ಹತ್ಯೆ ಬಳಿಕ ಆರೋಪಿಗಳು ತಪ್ಪಿಸಿಕೊಳ್ಳೋದಕ್ಕೆ ಮಾಡಿದ್ದ ಒಂದೊಂದೇ ಪ್ಲ್ಯಾನ್‌ಗಳನ್ನು ತನಿಖಾಧಿಕಾರಿಗಳು ಬಯಲು ಮಾಡುತ್ತಿದ್ದಾರೆ. ಮನೆಯಲ್ಲಿರುವ ಸಿಸಿಟಿವಿ ಡಿಲೀಟ್ ಮಾಡಿರೋದ್ರಿಂದ ಹಿಡಿದು ಎಲ್ಲಾ ಸಾಕ್ಷ್ಯ ನಾಶಕ್ಕೆ ಆರೋಪಿಗಳು ಯತ್ನಿಸಿದ್ದರು. ಆದ್ರೆ, ತನಿಖಾಧಿಕಾರಿಗಳು ಅದೆಲ್ಲಾ ಎಫ್‌ಎಸ್‌ಎಲ್ (FSL) ಮೂಲಕ ರಿಟ್ರೀವ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಇದು ಮೋದಿ ಭಾರತ, ಬಾಂಗ್ಲಾದೇಶದಂತಹ ಪರಿಸ್ಥಿತಿ ಉಂಟಾಗಲ್ಲ; ಕಾಂಗ್ರೆಸ್‌ಗೆ ಶೇಖಾವತ್ ತಿರುಗೇಟು

ಅದೇ ರೀತಿ ದರ್ಶನ್ ತಪ್ಪಿಸಿಕೊಳ್ಳೋದಕ್ಕೆ ರಾಜಕಾರಣಿಗೆಲ್ಲಾ ಕರೆ ಮಾಡಿದ್ದರಂತೆ, ಬೆಂಗಳೂರಿನಿಂದ ಮೈಸೂರಿಗೆ `ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆ ತೆರಳುವಾಗ ಕೆಲವೊಂದು ರಾಜಕಾರಣಿಗಳ ಸಹಾಯ ಬಯಸಿದ್ದರಂತೆ. ಅದಕ್ಕಾಗಿಯೇ ವಾಟ್ಸಪ್ ಕಾಲ್ ಮೂಲಕ ಮಾತನಾಡಿದ್ದರು. ಬಳಿಕ ಚಾಟ್, ವಾಟ್ಸಪ್ ಕಾಲ್ ಹಿಸ್ಟರಿ ಎಲ್ಲವನ್ನೂ ಡಿಲೀಟ್ ಮಾಡಿದ್ದರು. ಆದ್ರೆ ತನಿಖಾಧಿಕಾರಿಗಳು ಈ ಎಲ್ಲ ಮಾಹಿತಿಯನ್ನು ರಿಟ್ರೀವ್ ಮಾಡೋ ಪ್ರಯತ್ನ ಮಾಡಿದ್ದು, ಸೋಮವಾರ (ಆ.12) ರಿಪೋರ್ಟ್ ಪೊಲೀಸರ ಕೈ ಸೇರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆ | ರಾಜ್ಯದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ

Share This Article