ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯಬಾರದು: ಮಾಜಿ ಸಚಿವ ಅಭಯಚಂದ್ರ ಜೈನ್

Public TV
1 Min Read

ಮಂಗಳೂರು: ಮಹೇಶ್‌ ಶೆಟ್ಟಿ ತಿಮರೋಡಿಯನ್ನ (Mahesh Shetty Thimarodi) ಬಂಧಿಸುವುದಕ್ಕೆ ನಿಮ್ಮಿಂದ ಆಗೋದಿಲ್ವಾ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಭಯಚಂದ್ರ ಜೈನ್ (Abhayachandra Jain) ಸರ್ಕಾರದ ವಿರುದ್ಧವೇ ಗರಂ ಆಗಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆದರೆ ನನ್ನ ವಿರೋಧವಿದೆ ಎಂದು ಹೇಳಿದರು.

ಅನಾಮಿಕ ಇನ್ನೂ 13 ಪಾಯಿಂಟ್ ತೋರಿಸಬಹುದು. ಆರಂಭದಲ್ಲೇ ಮುಸುಕುಧಾರಿಯ (Mask Man) ಮಂಪರು ಪರೀಕ್ಷೆ ಆಗಬೇಕಿತ್ತು. ಇನ್ನು ಮುಂದೆ ಅನಾಮಿಕನನ್ನು ಧರ್ಮಸ್ಥಳ ದ್ವಾರ ದಾಟಿ ದೇವಸ್ಥಾನದ ವಠಾರಕ್ಕೆ ಬರಲು ನಾವು ಬಿಡುವುದಿಲ್ಲ. ಮತ್ತೆ ಬಾಹುಬಲಿ ಬೆಟ್ಟಕ್ಕೆ ಬಂದರೆ ನಾನು ಮುಂದೆ ನಿಲ್ಲುತ್ತೇನೆ ಎಂದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

 

ಮುಂದಿನ ತನಿಖೆ ಏನಿದ್ದರೂ ಮಂಪರು ಪರೀಕ್ಷೆ ನಂತರವೇ ಆಗಬೇಕು. ತಿಮರೋಡಿಯನ್ನು ಬಂಧಿಸಿದ ನಂತರವೇ ಮುಂದಿನ ತನಿಖೆ ನಡೆಯಬೇಕು. ತಿಮರೋಡಿಯನ್ನು ಬಂಧಿಸುವುದು ಸರ್ಕಾರಕ್ಕೆ ಕಷ್ಟದ ಕೆಲಸ ಅಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತದೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಿರಂತರ ಸುಳ್ಳು ಅಪಪ್ರಚಾರ ನಡೆಯುತ್ತಿದೆ. ಮುಸುಕುಧಾರಿಯ ಬಳಿಕ ಹೊಸ ದೂರುದಾರರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ನಾಡಿಗೆ ಬಹಳ ಉಪಕಾರ ಮಾಡಿದವರು. ಶ್ರೀ ಕ್ಷೇತ್ರದ ಆರೋಪ, ಸಲ್ಲದ ಮಾತಿಗೆ ತಡೆ ಬೀಳಬೇಕಾಗಿದೆ ಎಂದು ತಿಳಿಸಿದರು.

Share This Article