ಟಾಕ್ಸಿಕ್ ಚಿತ್ರದ ರೆಬೆಕಾ ಪಾತ್ರದಲ್ಲಿ ತಾರಾ ಸುತಾರಿಯಾ

1 Min Read

ಶ್ (Yash) ಅಭಿನಯದ ಟಾಕ್ಸಿಕ್ (Toxic) ಸಿನಿಮಾದ ಒಂದೊಂದೇ ಪೋಸ್ಟರ್‌ಗಳು ರಿವೀಲ್ ಆಗ್ತಿವೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ತೆರೆಗೆ ಬರುವುದಕ್ಕೆ ಸಿದ್ಧತೆ ಮಾಡಿಕೊಂಡಿರುವ ಟಾಕ್ಸಿಕ್ ಚಿತ್ರದ ಒಂದೊಂದೇ ಕ್ಯಾರೆಕ್ಟರ್‌ಗಳನ್ನ ಅನಾವರಣ ಮಾಡುತ್ತಿದೆ ಚಿತ್ರತಂಡ. ಆ ಪೈಕಿ ರೆಬೆಕಾ ಪಾತ್ರವನ್ನ ಪರಿಚಯಿಸಿದ್ದು, ಈ ಪಾತ್ರದಲ್ಲಿ ನಟಿ ತಾರಾ ಸುತಾರಿಯಾ (Tara Sutaria) ನಟಿಸುತ್ತಿದ್ದಾರೆ.‌

 

View this post on Instagram

 

A post shared by Yash (@thenameisyash)

ಈ ಹಿಂದೆ ಕಿಯಾರಾ ಅಡ್ವಾನಿಯ ನಡಿಯಾ ಪಾತ್ರವನ್ನ, ಹುಮಾ ಖುರೇಷಿ ಅವರ ಎಲೆಜೆಬೆತ್ ಹಾಗೂ ನಯನತಾರಾ ಅವರ ಗಂಗಾ ಪಾತ್ರದ ಬಗ್ಗೆ ಈಗಾಗ್ಲೇ ಹಿಂಟ್ ಕೊಟ್ಟಿದೆ ಚಿತ್ರತಂಡ. ಅವರ ಪಾತ್ರಗಳ ಫಸ್ಟ್‌ಲುಕ್ ರಿಲೀಸ್ ಮಾಡಿ ಅಭಿಮಾನಿಗಳ ಸಂಭ್ರಮವನ್ನ ದುಪ್ಪಟ್ಟು ಮಾಡಿದೆ ಚಿತ್ರತಂಡ. ಇದನ್ನೂ ಓದಿ: ಟಾಕ್ಸಿಕ್‍ಗೆ ದುರಂಧರ್ ಎದುರಾಳಿ..!

ಗೀತು ಮೋಹನ್‌ದಾಸ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಟಾಕ್ಸಿಕ್ ಸಿನಿಮಾ ಮೇಲೆ ದೊಡ್ಡ ನಿರೀಕ್ಷಗಳಿವೆ. ವಿಶ್ವದಾದ್ಯಂತ ಸಿನಿಮಾವನ್ನ ರಿಲೀಸ್ ಮಾಡಲು ಅದ್ಧೂರಿ ತಯಾರಿ ನಡೆಯುತ್ತಿದೆ. ಇನ್ನು ಯಶ್ ಹುಟ್ಟುಹಬ್ಬಕ್ಕೆ ಯಾವ ರೀತಿ ಗಿಫ್ಟ್ ಸಿಗಲಿದೆ ಅನ್ನೋದು ಮತ್ತಷ್ಟು ಕೌತುಕತೆ ಮೂಡಿಸಿದೆ.

Share This Article