ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

Public TV
2 Min Read

ನಟಿ ನತಾಶಾ (Natasa) ಅವರಿಂದ ವಿಚ್ಛೇದನ ಪಡೆದು ದೀರ್ಘಕಾಲದ ಬಳಿಕ ಮತ್ತೆ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ (Hardik Pandya) ಲವ್‌ನಲ್ಲಿ ಬಿದ್ದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಹುಟ್ಟಿಕೊಳ್ತಿದ್ದಂತೆ ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಪಾಂಡ್ಯ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ತಮ್ಮ ಹೊಸ ಗರ್ಲ್‌ಫ್ರೆಂಡ್‌ ಯಾರು ಅನ್ನೋದನ್ನೂ ಬಹಿರಂಗಪಡಿಸಿದ್ದಾರೆ.

ಟಿ20 ಏಷ್ಯಾಕಪ್‌ ಟೂರ್ನಿ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ಪಾಂಡ್ಯ, ಹೊಸ ಗರ್ಲ್‌ಫ್ರೆಂಡ್‌ ಮಹೀಕಾ ಶರ್ಮಾ (Mahieka Sharma) ಅವರೊಂದಿಗೆ ಹಾಲಿಡೇಸ್‌ ಎಂಜಾಯ್‌ ಮಾಡ್ತಿದ್ದಾರೆ. ಈ ವೇಳೆ ಬೀಚ್‌ ಎದುರು ಹಾಗೂ ನೈಟ್‌ ಔಟ್‌ ವೇಳೆ ತೆಗೆದ ಫೋಟೋಗಳನ್ನ ಪಾಂಡ್ಯ ಹಂಚಿಕೊಂಡಿದ್ದು, ಮಹೀಕಾ ಅವರಿಗೂ ಟ್ಯಾಗ್‌ ಮಾಡಿದ್ದಾರೆ. ಇದನ್ನೂ ಓದಿ: ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್‌ 1’ ನೋಡಿದ ಅಟ್ಲೀ

ಮೊದಲ ಫೋಟೋದಲ್ಲಿ ಪಾಂಡ್ಯ, ಮಹೀಕಾ ಅವರ ಹೆಗಲ ಮೇಲೆ ರೊಮ್ಯಾಂಟಿಕ್‌ ಆಗಿ ಕೈ ಹಾಕಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ನೈಟ್‌ಔಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಹೀಕಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ರೆ, ಪಾಂಡ್ಯ ಸಿಂಪಲ್ಲಾಗಿ ಡ್ರೆಸ್‌ ಮಾಡಿಕೊಂಡಿದ್ದಾರೆ. ಫೋಟೋಗಳಿಗೆ ಪಾಂಡ್ಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

ಯಾರು ಈ ಬ್ಯೂಟಿ?
ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಮಹೀಕಾ ಶರ್ಮಾ, ಫ್ಯಾಷನ್‌ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಐಎಫ್‌ಎ ಮಾಡೆಲ್‌ ಆಫ್‌ ದಿ ಇಯರ್‌ ಹಾಗೂ ಎಲ್ಲೆ ಮಾಡೆಲ್‌ ಆಫ್‌ ದಿ ಸೀಸನ್‌ ಪ್ರಶಸ್ತಿಗಳನ್ನು ಮಹೀಕಾ ಮುಡಿಗೇರಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಮಹೀಕಾ ಶರ್ಮಾ ಇನ್‌ಸ್ಟಾದಲ್ಲಿ 1.47 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

Jasmin Walia 4

2024ರಲ್ಲಿ ಭಾರತ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಹಾರ್ದಿಕ್‌ ಪಾಂಡ್ಯ ನಟಿ ನತಾಶಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಬಾಲಿವುಡ್‌ ಬ್ಯೂಟಿ ಅನನ್ಯಾ ಪಾಂಡೆ ಅವರೊಂದಿಗೆ ಡೇಟಿಂಗ್‌ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ನಂತ್ರ ಬ್ರಿಟಿಷ್‌ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್‌ ಮಾಡ್ತಿದ್ದಾರೆ ಎನ್ನಲಾಗಿತ್ತು. ಆದ್ರೆ, ಇಬ್ಬರು ಪರಸ್ಪರ ಮಾತನಾಡ್ತಿದ್ದೆವು, ಡೇಟಿಂಗ್‌ ಹಂತಕ್ಕೆ ಬರುವ ಮೊದಲೇ ಇಬ್ಬರ ಸಂಬಂಧ ಅಂತ್ಯಗೊಂಡಿತು ಎಂದು ಪಾಂಡ್ಯ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದ್ರೀಗ ಖುದ್ದು ಪಾಂಡ್ಯ ಅವರೇ ಮಹೀಕಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರೋದನ್ನ ಬಹಿರಂಗಪಡಿಸಿದ್ದಾರೆ.

Share This Article