ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ‘ಕಾಂಡೋಮ್ ಚಾಲೆಂಜ್’ ಟ್ರೈ ಮಾಡ್ಬೇಡಿ!

Public TV
1 Min Read

ನವದೆಹಲಿ: ಕೆಲವು ದಿನಗಳಿಂದ ಇಂಟರ್ ನೆಟ್ ನಲ್ಲಿ ಕಾಂಡೋಮ್ ಚಾಲೆಂಜ್ ಒಂದು ಟ್ರೆಂಡಿಂಗ್ ನಲ್ಲಿದೆ. ಕೆಲ ಯುವಕ-ಯುವತಿಯರು ಕಾಂಡೋಮ್ ಚಾಲೆಂಜ್ ಸ್ವೀಕರಿಸಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದರು. ಈ ಫೋಟೋ ಹಾಗು ವಿಡಿಯೋಗಳನ್ನು ನೋಡಿದ ಯುವ ಜನತೆ ಚಾಲೆಂಜ್ ಸ್ವೀಕರಿಸಲು ಹೋಗಿ ಪೇಚಿಗೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

ಏನಿದು ಕಾಂಡೋಮ್ ಚಾಲೆಂಜ್?: ಕಾಂಡೋಮ್‍ನ್ನು ಮೂಗಿನ ರಂಧ್ರದಲ್ಲಿ ಹಾಕಿಕೊಂಡು ಬಾಯಿ ಮುಖಾಂತರ ಹೊರಗೆ ತೆಗೆಯುವುದು. ಹೀಗೆ ಮೂಗಿನ ರಂಧ್ರದ ಮೂಲಕ ಹೋದ ಕಾಂಡೋಮ್ ಬಾಯಿ ಮೂಲಕ ಹೊರ ಬರುವಾಗ ಉಸಿರಾಟದಲ್ಲಿ ಏರಿಳಿತ ಉಂಟಾದ್ರೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಆದ್ರೂ ಕೆಲವರು ಮಾತ್ರ ಸಲೀಸಾಗಿ ಕಾಂಡೋಮ್ ನ್ನು ಮೂಗಿನ ಮೂಲಕ ಸೇರಿಸಿ ಬಾಯಿಯಿಂದ ಹೊರ ತೆಗೆದಿದ್ದಾರೆ.

ಕಾಂಡೋಮ್ ತೆಳುವಾದ ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟಿರುತ್ತದೆ. ಕಾಂಡೋಮ್ ಮೇಲೆ ಎಣ್ಣೆ( Lubricant And Spermicide) ಮಾದರಿಯ ಅಂಶದ ಲೇಪನದ ಜೊತೆಗೆ ಕೆಲವು ರಾಸಾಯನಿಕ ಪದಾರ್ಥಗಳ ಬಳಕೆ ಆಗಿರುತ್ತದೆ. ಕಾಂಡೋಮ್ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿ ಕಾಂಡೋಮ್‍ನ್ನು ಮೂಗಿನ ನಾಳಗಳಲ್ಲಿ ಸೇರಿಸಿದಾಗ ಅಲ್ಲಿರುವ ಮೃದು ಮೂಳೆಗಳಿಗೆ ತೊಂದರೆ ಆಗುವ ಸಾಧ್ಯತೆಗಳೂ ಕೂಡ ಹೆಚ್ಚಿವೆ. ಬಾಯಿ ಮೂಲಕ ಕಾಂಡೋಮ್ ಹೊರಬರುವಾಗ ಉಸಿರಾಟದ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಆಗಿ ವ್ಯಕ್ತಿಯ ಪ್ರಾಣಕ್ಕೆ ಹಾನಿಯಾಗುವ ಎಲ್ಲಾ ಸಾಧ್ಯತೆಗಳು ಇವೆ ಎಂಬುದಾಗಿ ವರದಿಯಾಗಿದೆ.

ಯೂಟ್ಯೂಬ್ ನಲ್ಲಿ ಕಾಂಡೋಮ್ ಚಾಲೆಂಜ್ ವಿಡಿಯೋಗಳು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲೋಡ್ ಆಗುತ್ತಿವೆ. ಈ ಚಾಲೆಂಜ್‍ಗೆ ಯುವ ಜನತೆ ಆಕರ್ಷಿತರಾಗುತ್ತಿದ್ದಾರೆ. ಕಾಂಡೋಮ್ ಬಾಯಿಯ ಮೂಲಕ ಹೊರ ತೆಗೆಯುವಾಗ ಪ್ರಾಣಕ್ಕೆ ಕುತ್ತು ಉಂಟಾಗಲಿದ್ದು, ಹಾಗಾಗಿ ಇದನ್ನು ಟ್ರೈ ಮಾಡದಿರುವುದು ಒಳ್ಳೆಯದು.

Share This Article
Leave a Comment

Leave a Reply

Your email address will not be published. Required fields are marked *