ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ

Public TV
2 Min Read

ಮೈಸೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಮಿಕರು, ಸರ್ಕಾರಿ ನೌಕರರ ಜೊತೆ ಅರಮನೆ ನಗರಿಯಲ್ಲಿ 15 ಸಾವಿರ ಯೋಗ ಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಯೋಗಾಸನ ಮಾಡಿದ್ದಾರೆ.

ಖಾಸಗಿ ಹೋಟೆಲಿನಿಂದ ಬೆಳಗ್ಗೆ 6:30ರ ವೇಳೆಗೆ ಅರಮನೆ ಮುಂಭಾಗಕ್ಕೆ ಮೋದಿ ಆಗಮಿಸಿದರು. ಚುಟುಕಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಆಯುಷ್‌ ಸಚಿವ ಸರ್ಬಾನಂದ ಸೊನೊವಾಲ್, ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ವ್ಯಕ್ತಿಗೆ ಮಾತ್ರ ಯೋಗ ಅಲ್ಲ. ಇದು ಮನುಕುಲಕ್ಕೆ ಯೋಗ ಮುಖ್ಯ. ಯೋಗದಿಂದ ವ್ಯಕ್ತಿಗೆ ಮಾತ್ರ ಶಾಂತಿ ಸಿಗುವುದಿಲ್ಲ. ಇಡಿ ವಿಶ್ವಕ್ಕೆ ಶಾಂತಿ ಸಿಗುತ್ತದೆ ಎಂದು ಕೊಂಡಾಡಿದರು.

 

75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಆಚರಿಸಲಾಗುತ್ತಿರುವ ಅಜಾದಿ ಕೀ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ವಿಶ್ವದ 75 ಭಾಗಗಳಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ. ಈ ಮೂಲಕ ಯೋಗ ದೇಶ ದೇಶಗಳನ್ನು ಒಂದಾಗಿಸುತ್ತದೆ. ವಿಶ್ವದ ವಿವಿಧ ಭಾಗದಲ್ಲಿ ಯೋಗ ದಿನಾಚರಣೆ ನಡೆಸುತ್ತಿರುವ ಎಲ್ಲರಿಗೆ ಸಮಸ್ತ ಭಾರತೀಯರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

ಭಾಷಣ ಮುಗಿದ ಬಳಿಕ ವೇದಿಕೆಯಿಂದ ಕೆಳಗೆ ಇಳಿದ ಮೋದಿ ಯೋಗಾಸನ ಮಾಡಲು ನಿಗದಿಯಾದ ಸ್ಥಳಕ್ಕೆ ತೆರಳಿದರು. ಬೆಳಗ್ಗೆ 7:08ಕ್ಕೆ ಆರಂಭಗೊಂಡ ಯೋಗ ಕಾರ್ಯಕ್ರಮ  ಶಾಂತಿ ಮಂತ್ರದೊಂದಿಗೆ 7:52ಕ್ಕೆ ಮುಕ್ತಾಯಗೊಂಡಿತು.

15 ಸಾವಿರ ಮಂದಿ ಪೈಕಿ ಸುಮಾರು 8 ಸಾವಿರ ಜನರು ಮೋದಿ ಯೋಗ ಮಾಡುವ ಜಾಗದ ಅಕ್ಕಪಕ್ಕದಲ್ಲೇ ಯೋಗ ಮಾಡಿದ್ದಾರೆ. ಉಳಿದವರು ಅರಮನೆಯ ಹಿಂಭಾಗದ ಆವರಣದಲ್ಲಿ ಯೋಗ ಮಾಡಿದ್ದಾರೆ. 15 ಸಾವಿರ ಜನರಲ್ಲಿ 3 ಸಾವಿರ ಜನರು ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ 12 ಸಾವಿರ ಮಂದಿ ಸ್ಥಳೀಯರು ಭಾಗವಹಿಸಿದ್ದರು.

 

ಟೀ ಶರ್ಟ್, ಯೋಗ ಮ್ಯಾಟ್, ವಾಟರ್ ಬಾಟಲಿ ಅನ್ನು ಆಯೋಜಕರು ಅದೇ ಸ್ಥಳದಲ್ಲಿ ನೀಡಿದ್ದಾರೆ. ಮೊಬೈಲ್ ಹೊರತು ಪಡಿಸಿ ಬೇರೆ ಯಾವುದೇ ವಸ್ತುಗಳ ತೆಗೆದು ಕೊಂಡು ಹೋಗಲು ಅವಕಾಶವಿರಲಿಲ್ಲ.

ಯಾರೆಲ್ಲ ಯೋಗ ಮಾಡಿದ್ದಾರೆ?
5 ಸಾವಿರ ಯೋಗ ಒಕ್ಕೂಟದ ಸದಸ್ಯರು, 1200 ವಿದ್ಯಾರ್ಥಿಗಳು, ಶಿಕ್ಷಕರು, 2,500 ಜೆಎಸ್‍ಎಸ್ ಸಂಸ್ಥೆಯವರು, 600 ದ್ವಿತೀಯ ಪಿಯುಸಿ ತಂಡ, 600 ಕಾಲೇಜ್ ವಿದ್ಯಾರ್ಥಿಗಳು, 150 ನ್ಯಾಚುರೋಪತಿ, ಯೋಗ ಕಾಲೇಜು, 120 ಆಯುರ್ವೇದಿಕ್ ಕಾಲೇಜು, 100 ಕಾರ್ಮಿಕ ಇಲಾಖೆಯ ಸಿಬ್ಬಂದಿ, 70 ಡಿಎಫ್‍ಆರ್‌ಎಲ್, 300 ಎನ್‍ಎಸ್‍ಎಸ್ ವಿದ್ಯಾರ್ಥಿಗಳು, 100 ವಿಶೇಷ ಚೇತನರು, 100 ಹಾಸ್ಟೆಲ್ ವಿದ್ಯಾರ್ಥಿಗಳು, 30 ತೃತೀಯ ಲಿಂಗಿಗಳು, 100 ಕೆಎಸ್ ಆರ್ ಪಿ ಸಿಬ್ಬಂದಿ ಯೋಗ ಮಾಡಿದ್ದಾರೆ.

ಎರಡು ವರ್ಷ ಕೊರೊನಾ ಕಾರಣದಿಂದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ರದ್ದಾಗಿತ್ತು. ಆದರೆ ಈ ಬಾರಿ ಮೈಸೂರಿನಲ್ಲಿ ಮತ್ತೆ ಈ ಹಿಂದೆ ನಡೆದಂತೆ  ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿತು.

Live Tv

Share This Article
Leave a Comment

Leave a Reply

Your email address will not be published. Required fields are marked *