ಬೆಂಗ್ಳೂರು ಮಹಿಳೆಯರಿಗೆ ಗುಡ್‍ನ್ಯೂಸ್- ಇಂದು ದಿನಪೂರ್ತಿ ಬಿಎಂಟಿಸಿನಲ್ಲಿ ಸುತ್ತಾಡ್ಬೋದು

Public TV
1 Min Read

ಬೆಂಗಳೂರು: ಮಹಿಳಾ ದಿನಾಚರಣೆ (International Womens Day) ಹಿನ್ನೆಲೆ ಬಿಎಂಟಿಸಿ (BMTC) ಸಿಲಿಕಾನ್ ಸಿಟಿ ಮಹಿಳೆಯರಿಗೆ ಗುಡ್ ನ್ಯೂಸ್ ಒಂದನ್ನ ನೀಡಿದ್ದು, ಇಂದು ದಿನ ಪೂರ್ತಿ ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ ಬೇಕಾದ್ರು ಸಂಚರಿಸುವ ಅವಕಾಶ ಮಾಡಿ ಕೊಡುವುದರೊಂದಿಗೆ, ಅರ್ಥಪೂರ್ಣವಾಗಿ ಮಹಿಳಾದಿನಾಚರಣೆಗೆ ಮುಂದಾಗಿದೆ.

ಕರ್ನಾಟಕದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡುವ ಮೂಲಕ ಈ ವರ್ಷದ ಮಹಿಳೆ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ.

ಇಂದು ಮಹಿಳೆಯರ ದಿನವಾಗಿದ್ದರಿಂದ ಬಿಎಂಟಿಸಿ ಬಸ್‍ಗಳಲ್ಲಿ (Free Bus) ದಿನಪೂರ್ತಿ ಮಹಿಳೆಯರು ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. ಬಿಎಂಟಿಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಯಾವುದೇ ದಾಖಲಾತಿ, ಗುರುತಿನ ಚೀಟಿಯ ಅವಶ್ಯಕತೆ ಇಲ್ಲ. ಇದನ್ನೂ ಓದಿ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬೀಳಿಸಿದ ಇಸ್ರೋ

ಪ್ರತಿದಿನ ಸುಮಾರು 10.21 ಲಕ್ಷ ಅಂದಾಜು ಮಹಿಳೆಯರು ಬಿಎಂಟಿಸಿ ಬಸ್‍ಗಳ ಮೂಲಕ ಪ್ರಯಾಣಿಸುತ್ತಾರೆ. ಇಂದು ಈ ಸಂಖ್ಯೆ ದ್ವಿಗುಣವಾಗುವಾಗುವ ಸಾಧ್ಯತೆ ಇದ್ದು, 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಸಬಹುದಾಗಿ ಅಂದಾಜಿಸಲಾಗಿದೆ. ಈ ವಿಶೇಷ ಸೇವೆ ಬಗ್ಗೆ ನಾರಿಯರು ಸಂತಸ ವ್ಯಕ್ತಪಡಿಸಿದ್ದು, ಸರ್ಕಾರ ಮತ್ತು ಬಿಎಂಟಿಸಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಉಚಿತ ಪ್ರಯಾಣ ಹಿನ್ನೆಲೆ ತಮ್ಮ ಸ್ನೇಹಿತೆಯರು ಮತ್ತು ಕುಟಂಬಸ್ಥರ ಜೊತೆ ದಿನ ಪೂರ್ತಿ ಬೆಂಗಳೂರು ರೌಂಡ್ಸ್ ಗೆ ಪ್ಲ್ಯಾನ್ ಕೂಡ ಮಾಡಿದ್ದಾರೆ.

ಒಟ್ಟಾರೆ ಇಂದು ಮಹಿಳೆಯರ ದಿನಾಚರಣೆ ಹಿನ್ನೆಲೆ ಬಿಎಂಟಿಸಿಯ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆ ಶುಭಾಶಯಗಳು.

Share This Article
Leave a Comment

Leave a Reply

Your email address will not be published. Required fields are marked *