ಬಾಗಲಕೋಟೆಯಲ್ಲಿ ರೆಡಿಯಾಗ್ತಿದೆ ಅಂತಾರಾಷ್ಟ್ರೀಯ ಈಜುಕೊಳ – ಈಜು ಪ್ರಿಯರಲ್ಲಿ ಸಂತಸ

Public TV
1 Min Read

-ಗುಣಮಟ್ಟದ ಈಜುಕೊಳಕ್ಕೆ ನವೀಕರಣ ಭಾಗ್ಯ

ಬಾಗಲಕೋಟೆ: ಬೆಂಗಳೂರು ಬಿಟ್ಟರೆ ಬಾಗಲಕೋಟೆ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಿಸಲಾಗಿತ್ತು. ನಿರ್ವಹಣೆ ಕೊರತೆಯಿಂದ ಬಂದ್ ಆಗಿದ್ದ ಈಜುಕೊಳಕ್ಕೆ ಇದೀಗ ನವೀಕರಣ ಭಾಗ್ಯ ದೊರೆತಿದ್ದು, ಈಜುಪ್ರಿಯರಲ್ಲಿ ಸಂತಸ ಮೂಡಿಸಿದೆ.

ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ 2006ರಲ್ಲಿ 1 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಿಸಲಾಗಿತ್ತು. ಬಾಗಲಕೋಟೆಯಲ್ಲಿನ ಈಜುಕೊಳ ನಿರ್ವಹಣೆ ಇಲ್ಲದೆ ಹಾಗೂ ಅತೀ ಆಳವಿರುವುದರಿಂದ ಬಂದ್ ಆಗಿತ್ತು. ಈಜುಕೊಳದಲ್ಲಿ ನೀರು ಸೋರಿಕೆ, ಜೊತೆಗೆ 38 ಲಕ್ಷ ಲೀಟರ್ ನೀರು ಬೇಕಾಗುತ್ತಿತ್ತು. ಇದರಿಂದ ಈಜುಕೊಳ ಬಂದ್ ಮಾಡಲಾಗಿತ್ತು. ಈಜುಕೊಳ ದುರಸ್ಥಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಇದನ್ನೂ ಓದಿ:ಮಳೆನೀರು ಕೊಯ್ಲು ಅಳವಡಿಸಿಕೊಳ್ಳದಿದ್ರೆ ಭವಿಷ್ಯವಿಲ್ಲ: ಜಲತಜ್ಞ ಜೋಸೆಫ್ ರೆಬೆಲ್ಲೋ

ಬಿಟಿಡಿಎ ಅಧ್ಯಕ್ಷರಾಗಿರುವ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಸ್ಪಂದಿಸಿ ಈಜುಕೊಳ ದುರಸ್ಥಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈಜುಕೊಳಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು, ಈಜುಕೊಳ ಆಳ ಕಡಿಮೆ ಮಾಡಿ, ಪ್ರತ್ಯೇಕವಾಗಿ ಚಿಕ್ಕ ಮಕ್ಕಳಿಗಾಗಿ ಈಜುಕೊಳ ನಿರ್ಮಾಣವಾಗುತ್ತಿದೆ. ಗ್ಯಾಲರಿ ನಿರ್ಮಿಸಿದ್ದು, ಈಜುಕೊಳದಲ್ಲಿ ಮಿಂದೆದ್ದ ಬಳಿಕ ಬಟ್ಟೆ ಬದಲಾಯಿಸಲು ಸ್ತ್ರೀಯರು, ಪುರುಷರಿಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗುತ್ತಿದೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ನವೀಕರಣ ಕಾಮಗಾರಿ ಆರಂಭಿಸಿದ್ದಾರೆ.

ಕ್ರೀಡಾಪಟುಗಳು ಫಿಟ್ನೆಸ್‍ಗಾಗಿ ಈಜುವುದು, ಜೊತೆಗೆ ಈಜುಪ್ರಿಯರಿಗೆ ಈಜುಗೊಳ ಅನುಕೂಲವಾಗಲಿದೆ. ಇನ್ನೂ ಬಾಗಲಕೋಟೆ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈಜುಗೊಳ ದುರಸ್ಥಿ ಸಂಬಂಧ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ. ಬರುವ ಬೇಸಿಗೆಯಲ್ಲಿ ಈಜುಪ್ರಿಯರಿಗೆ, ಕ್ರೀಡಾಪಟುಗಳಿಗೆ ಈಜುಕೊಳದಲ್ಲಿ ಈಜುವುದಕ್ಕೆ ಅವಕಾಶ ಸಿಗಲಿದೆ. ಈಜು ಪ್ರಿಯರು, ಕ್ರೀಡಾಪಟುಗಳು ಬಾಗಲಕೋಟೆಯಲ್ಲಿನ ಖಾಸಗಿ ಈಜುಕೊಳಕ್ಕೆ ಹೋಗುತ್ತಿದ್ದರು. ಇನ್ಮುಂದೆ ಬರುವ ಬೇಸಿಗೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ ಎಂಜಾಯ್ ಮಾಡುವುದಕ್ಕೆ ಮುಕ್ತ ಅವಕಾಶ ಸಿಗಲಿದೆ. ಇದರಿಂದ ಈಜು ಪ್ರಿಯರು ಕ್ರೀಡಾಪಟುಗಳಲ್ಲಿ ಸಂತಸ ಮೂಡಿಸಿದೆ.ಇದನ್ನೂ ಓದಿ:ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ನಮ್ಮ ಜವಾಬ್ದಾರಿ: ಶಶಿಕಲಾ ಜೊಲ್ಲೆ

Share This Article
Leave a Comment

Leave a Reply

Your email address will not be published. Required fields are marked *