ಬೆಂಗಳೂರು: ನಗರದ ಬನಶಂಕರಿಯಲ್ಲಿರುವ ಬ್ರಿಗೇಡ್ ಸಾಫ್ಟ್ ವೇರ್ ಪಾರ್ಕಿನಲ್ಲಿರುವ ಫಿಡಿಲಿಟಸ್ ಕಾರ್ಪ್ ಸಂಸ್ಥೆಯಲ್ಲಿ ಪುರುಷರ ದಿನವನ್ನು ಆಚರಿಸಲಾಗಿದೆ.
ಸಾಮಾನ್ಯವಾಗಿ ಮದರ್ಸ್ ಡೇ, ಫ್ರೆಂಡ್ ಶಿಪ್, ಲವರ್ಸ್ ಡೇ ಕೇಳಿರುತ್ತವೆ. ಆದರೆ ಅದೆಷ್ಟೋ ಜನಕ್ಕೆ ಗೊತ್ತಿರಲಿಕ್ಕೆ ಇಲ್ಲ, ಪುರುಷರಿಗೂ ಒಂದು ದಿನ ಇದೆ. ಅದೇ ಇಂಟರ್ ನ್ಯಾಷನಲ್ ಮೆನ್ಸ್ ಡೇ. ನವೆಂಬರ್ 19ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಲಾಗುತ್ತದೆ.
‘ಇಂಟರ್ ನ್ಯಾಷನಲ್ ಮೆನ್ಸ್ ಡೇ’ ಪ್ರಯುಕ್ತ ಬೆಂಗಳೂರಿನ ಬನಶಂಕರಿಯಲ್ಲಿರುವ ಬ್ರಿಗೇಡ್ ಸಾಫ್ಟ್ ವೇರ್ ಪಾರ್ಕ್ ನಲ್ಲಿರುವ ಫಿಡಿಲಿಟಸ್ ಕಾರ್ಪ್ ಸಂಸ್ಥೆಯ “ಎಫ್ಸಿಪಿಯಲ್ ವುಮೆನ್ ಪವರ್” ವಿಭಾಗದ ಮಹಿಳಾ ಉದ್ಯೋಗಿಗಳಿಂದ ವತಿಯಿಂದ ಪುರುಷರ ದಿನವನ್ನು ದಿನಾಚರಣೆ ಆಚರಿಸಲಾಗಿದೆ. ವಿಶೇಷವಾಗಿ ಮಹಿಳೆಯರು ತಮ್ಮ ಪುರುಷ ಸಹೋದ್ಯೋಗಿಗಳೊಂದಿಗೆ ಮೆನ್ಸ್ ಡೇ ಆಚರಣೆ ಮಾಡಿದರು. ಫಿಡಿಲಿಟಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಚ್ಚುತ್ ಗೌಡ ಅವರ ಸಮ್ಮುಖದಲ್ಲಿ ಕೇಕ್ ಕಟ್ಟಿಂಗ್ ಜೊತೆಗೆ ಪುರುಷರಿಗೆ ಕೆಲವು ಆಟಗಳನ್ನು ಮಹಿಳಾ ಉದ್ಯೋಗಿಗಳು ಆಯೋಜಿಸಿದ್ದರು.
ಸಂಸ್ಥೆಯ ಮುಖ್ಯಸ್ಥ ಅಚ್ಚುತ್ ಗೌಡ ಮಾತನಾಡಿ, ಸಮಾಜದಲ್ಲಿ ಪುರುಷರು ಎಂದಿನಂತೆ ಮಹಿಳೆಯರಂತೆ ಶ್ರಮಜೀವಿಗಳಾಗಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಲಿಂಗ ಸಮಾನತೆ ಕಾಪಾಡುವ ಜವಾಬ್ದಾರಿಯನ್ನು ಪುರುಷರು ಹೊಂದಬೇಕಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಪುರುಷರಿಂದ ಎಂದಿನಂತೆ ಎಲ್ಲಾ ರೀತಿಯಲ್ಲಿ ಸ್ಥಾನಮಾನ ನೀಡಬೇಕಾಗಿದೆ. ನಮ್ಮ ಖಾಸಗಿ ಸಂಸ್ಥೆಯಲ್ಲಿ ಎಲ್ಲರಿಗೂ ಅಸಮಾನತೆ ಇಲ್ಲದೆ ಎಲ್ಲರಿಗೂ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಲು ಫಿಡಿಲಿಟಸ್ ಕಾರ್ಪ್ ಉತ್ತಮ ವೇದಿಕೆಯಾಗಿದೆ” ಎಂದು ಹೇಳಿದರು.