ಬೆಂಗಳೂರು: ಸುಡು ಬಿಸಿಲಿಗೆ ಬೆಂದಿದ್ದ ಬೆಂಗಳೂರಿಗೆ ಮಳೆರಾಯ ತಂಪೆರೆದಿದ್ದು, ಹೊಸ ವರ್ಷದ ಯುಗಾದಿಯ ನಂತರ ಮೊದಲ ಮಳೆಯಾಗಿದೆ.
ನಗರದ ಮೆಜೆಸ್ಟಿಕ್, ಶಾಂತಿನಗರ, ವಿಜಯನಗರ, ಕಾಮಾಕ್ಷಿ ಪಾಳ್ಯ, ಹೆಬ್ಬಾಳ, ಯಶವಂತಪುರ ಸೇರಿದಂತೆ ನಗರದ ಬಹುತೇಕ ಕಡೆ ವರುಣನ ಸಿಂಚನವಾಗಿದೆ. ಮಳೆಯ ಪರಿಣಾಮ ನಗರದಲ್ಲಿ ತಾಪಮಾನ ಕಡಿಮೆಯಾಗಿದೆ.
ವಾಯುಭಾರ ಕುಸಿತದ ಪರಿಣಾಮ ಮಳೆಯಾಗಿದ್ದು, ರಾಜ್ಯದಲ್ಲಿ ಇನ್ನೂ ಎರಡು-ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ ಇದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣ ತುಂತುರು ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಇತ್ತ ರಾಜ್ಯದ ಹಾಸನದ ಅರಕಲಗೂಡು, ಚಿತ್ರದುರ್ಗ ತಾಲೂಕಿನ ಭರಮಸಾಗರ, ತುಮಕೂರಿನ ಹಲವೆಡೆ ಮಳೆಯಾಗಿದ್ದು, ಬಿಸಿಲ ತಾಪಕ್ಕೆ ವರುಣ ತಂಪೆರೆದಿದ್ದು, ಚಿತ್ರದುರ್ಗದ ಹೆಗ್ಗೆರೆ ಗ್ರಾಮ ಬಳಿ ಸಿಡಿಲು ಬಡಿದು ಕುರಿಗಾಯಿ ಕೊಟ್ರಬಸಪ್ಪ (37) ಸಾವನ್ನಪ್ಪಿದ್ದಾರೆ.