ಪ್ರಭಾಸ್ ನಟನೆಯ ‘ಸ್ಪಿರಿಟ್’ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್ ಅಪ್‌ಡೇಟ್

Public TV
1 Min Read

ಸಾಲು ಸಾಲು ಸಿನಿಮಾಗಳ ಸೋಲಿನಿಂದ ತತ್ತರಿಸಿದ್ದ ಪ್ರಭಾಸ್‌ಗೆ (Prabhas) ‘ಕಲ್ಕಿ 2898 ಎಡಿ’ ಚಿತ್ರದ ಯಶಸ್ಸಿನಿಂದ ವೃತ್ತಿರಂಗದಲ್ಲಿ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಸದ್ಯ ಸಂದೀಪ್ ರೆಡ್ಡಿ ವಂಗಾ ಜೊತೆ ‘ಸ್ಪಿರಿಟ್’ (Spirit) ಸಿನಿಮಾ ಮಾಡಲು ಪ್ರಭಾಸ್ ಸಜ್ಜಾಗಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಅಚ್ಚರಿಪಡುವಂತಹ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ.

ಸ್ಟಾರ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಹೊಸ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ತೆರೆಮರೆಯಲ್ಲಿ ಚಿತ್ರದ ತಯಾರಿ ನಡೆಯುತ್ತಿದೆ. ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ. ಇನ್ನೂ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ರಣಬೀರ್ ಕಪೂರ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳನ್ನು ಸಂದೀಪ್ ನೀಡಿದ್ದಾರೆ. ಅರ್ಜುನ್ ರೆಡ್ಡಿ, ಅನಿಮಲ್, ಕಬೀರ್ ಸಿಂಗ್ ಚಿತ್ರಗಳು ಯಶಸ್ಸು ಕಂಡಿದೆ. ಅದರಲ್ಲಿ ಅರ್ಜುನ್ ರೆಡ್ಡಿ ನಟ ವಿಜಯ್, ಅನಿಮಲ್ ಹೀರೋ ರಣಬೀರ್ ಕಪೂರ್‌ಗೆ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸಲು ಸಂದೀಪ್‌ ಅಪ್ರೋಚ್‌ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರದ್ದು ಸಣ್ಣ ಅತಿಥಿಯ ಪಾತ್ರ ಆಗಿರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಕಾದುನೋಡಬೇಕಿದೆ.

ಇನ್ನೂ ದಿ ರಾಜ ಸಾಬ್, ಸಲಾರ್‌ 2, ಹನು ರಾಘವಪುಡಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಪ್ರಭಾಸ್ ಕೈಯಲ್ಲಿವೆ.

Share This Article