ಗಾಳಿ ಸಹಾಯದಿಂದಲೇ ಒಮನ್ ತಲುಪಿದ ಕೌಂಡಿನ್ಯ ನೌಕೆ – 16 ದಿನಗಳಲ್ಲಿ 1,400 ಕಿಮೀ ಸಮುದ್ರಯಾನ

1 Min Read

– ಐತಿಹಾಸಿಕ ಯಾನಕ್ಕೆ ಮೋದಿ ಶ್ಲಾಘನೆ

ನವದೆಹಲಿ: ಭಾರತದ ಸಾಂಪ್ರದಾಯಿಕ ನೌಕೆ ʻಕೌಂಡಿನ್ಯʼ (Kaundinya) ಯಶಸ್ವಿಯಾಗಿ ಒಮನ್‌ನ ಮಸ್ಕತ್ ತಲುಪಿದೆ. ಯಾವುದೇ ಎಂಜಿನ್ ಸಹಾಯವಿಲ್ಲದೇ ಇಲ್ಲದೇ ಗಾಳಿ ಆಧರಿಸಿ ಗುಜರಾತ್‌ನ ಪೋರ್‌ಬಂದರ್‌ನಿಂದ ಡಿಸೆಂಬರ್ 29 ರಂದು ಪಯಣ ಆರಂಭಿಸಿದ್ದ ಕೌಂಡಿನ್ಯ 16 ದಿನಗಳಲ್ಲಿ 1400 ಕಿ.ಮೀ. ಸಮುದ್ರಯಾನ ನಡೆಸಿ ಇಂದು ಮಸ್ಕತ್‌ನ ಪೋರ್ಟ್ ಸುಲ್ತಾನ್ ಕಾಬೂಸ್ ಬಂದರು ಸೇರಿದೆ.

ಕಮಾಂಡರ್ ವಿಕಾಸ್ ಶೆರಾನ್ ನೇತೃತ್ವದ 16 ಜನರ ತಂಡದ ಪ್ರಯತ್ನ ಸಕ್ಸಸ್ ಆಗಿದೆ. ಈ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 5ನೇ ಶತಮಾನದಲ್ಲಿ ಅರಬ್ಬರ ಜೊತೆ ವ್ಯಾಪಾರಕ್ಕಾಗಿ ಈ ನೌಕೆಯ ಬಳಕೆ ಬಗ್ಗೆ ಅಜಂತಾ ಗುಹಾಂತರ ದೇವಾಲಯದ ಚಿತ್ರಗಳಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಖಮೇನಿ ಬೆಂಬಲಿಸಿ ಕಾರ್ಗಿಲ್‌ ಮುಸ್ಲಿಮರ ಪ್ರತಿಭಟನೆ – ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ

ಮೋದಿ ಆರ್ಥಿಕ ಸಲಹಾಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಅವರ ಪ್ರಸ್ತಾಪದ ಮೇರೆಗೆ ಇದನ್ನ 2023ರಲ್ಲಿ ಗೋವಾದಲ್ಲಿ ನಿರ್ಮಾಣ ಮಾಡಲಾಗಿದೆ. ಮರದ ಹಡಗುಗಳ ನಿರ್ಮಾಣಕ್ಕೆ ಹೆಸರಾದ ಕೇರಳ ಕುಶಲಕರ್ಮಿಗಳ ತಂಡ ಕೆಲಸ ಮಾಡಿದ್ದು, ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಅನುದಾನ ನೀಡಿದೆ. ಈ ನೌಕೆಯನ್ನು ತೆಂಗಿನನಾರನ್ನು ಬಳಸಿ ನಿರ್ಮಿಸಲಾಗಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಬೆಳಗಿದ ʻಮಕರ ಜ್ಯೋತಿʼ – ಕಣ್ತುಂಬಿಕೊಂಡ ಅಯ್ಯಪ್ಪನ ಭಕ್ತರು

ಅದ್ಭುತ ಚಿತ್ರಕಲೆ ಇದೆ. ಫೆಬ್ರವರಿ 2025ರಲ್ಲಿ ಈ ನೌಕೆಯನ್ನ ಲೋಕಾರ್ಪಣೆ ಮಾಡಲಾಗಿತ್ತು. ಮೊದಲನೇ ಶತಮಾನದಲ್ಲಿ ಹಿಂದೂ ಮಹಾಸಾಗರವನ್ನು ದಾಟಿ ಕಾಂಬೋಡಿಯಾದ ರಾಣಿಯನ್ನು ಮದುವೆಯಾದರು ಎಂದು ನಂಬಲಾಗಿರುವ ಕೌಂಡಿನ್ಯ ಅವರ ಹೆಸರನ್ನೇ ಈ ನೌಕೆಗೆ ಇಡಲಾಗಿದೆ. ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕೇಂದ್ರ ಸಚಿವ ಮುರುಗನ್ ದೆಹಲಿ ನಿವಾಸದಲ್ಲಿ ಪ್ರಧಾನಿ ಮೋದಿ ಪೊಂಗಲ್ ಸಂಭ್ರಮ

Share This Article