ಸುಹಾಸ್ ಹತ್ಯೆಯಲ್ಲಿ ಮುಸ್ಲಿಂ ಹೆಡ್‌ಕಾನ್ಸ್‌ಟೇಬಲ್ ಭಾಗಿಯಾಗಿದ್ದಾರೆಂದು ಅವಹೇಳನ – ಇಬ್ಬರು ಹಿಂದೂ ಮುಖಂಡರ ವಿರುದ್ಧ FIR

By
1 Min Read

ಮಂಗಳೂರು: ಸುಹಾಸ್ ಶೆಟ್ಟಿ(Suhas Shetty) ಹತ್ಯೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ರಶೀದ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದ ಇಬ್ಬರು ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹಿಂದೂ ಮುಖಂಡ ಮೂಡಬಿದ್ರೆಯ(Moodabidri) ಸಮಿತ್ ರಾಜ್ ದರೆಗುಡ್ಡೆ ಹಾಗೂ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಉಲ್ಲಾಸ್ ಕೆ.ಟಿ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಹಾಕಲಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಮುಸ್ಲಿಂ ಹೆಡ್‌ಕಾನ್ಸ್‌ಟೇಬಲ್‌ ಭಾಗಿ?

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಬಜಪೆ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಕೈವಾಡ ಇದೆ. ಯಾವಾಗ ಬಂಧನ ಎಂದು ಸಮಿತ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಅಲ್ಲದೇ, ಹತ್ಯೆಯಲ್ಲಿ ಬಜಪೆ(Bajpe) ಠಾಣಾ ಹೆಡ್‌ಕಾನ್ಸ್‌ಟೇಬಲ್ ಪರೋಕ್ಷವಾಗಿ ಕೈ ಜೋಡಿಸಿದ್ದಾರೆ ಎಂದು ಉಲ್ಲಾಸ್ ಕೆ.ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮೈನಿಂಗ್ ಕೇಸಲ್ಲಿ 7 ವರ್ಷ ಜೈಲು – ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ ರೆಡ್ಡಿ?

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವಿನಾಕಾರಣ ನನ್ನ ಹೆಸರು ಎಳೆದು ತಂದಿದ್ದಾರೆ. ಯಾವುದೇ ಆಧಾರ ಇಲ್ಲದೆ ನನ್ನ ಹೆಸರು ಹಾಕಿ ಅವಹೇಳನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೆಡ್‌ಕಾನ್ಸ್ಟೇಬಲ್ ರಶೀದ್ ಅವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Share This Article