ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆಕ್ಸಿಜನ್ ಜನರೇಟರ್ಸ್ ಸ್ಥಾಪನೆ

Public TV
1 Min Read

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಅನುಕೂಲಕ್ಕಾಗಿ 10 ತುರ್ತು ಆಮ್ಲಜನಕ ಜನರೇಟರ್‌ಗಳನ್ನು ಸ್ಥಾಪಿಸಲಾಗಿದೆ.

ಡಿಪಾರ್ಚರ್ಸ್ ಮತ್ತು ಆಗಮನದ ಪ್ರದೇಶದಲ್ಲಿ ತುರ್ತು ಆಮ್ಲಜನಕದ ಸಕಾಲಿಕ ಲಭ್ಯತೆಯು ಹೃದಯಾಘಾತ, ಉಸಿರಾಟದ ತೊಂದರೆ, ಮೂರ್ಜೆ ಅಥವಾ ಇತರೆ ಉಸಿರಾಟದ ಸಮಸ್ಯೆಯುಳ್ಳವರಿಗೆ ತುರ್ತಾಗಿ ಆಮ್ಲಜನಕ ಒದಗಿಸುವ ಉದ್ದೇಶದಿಂದ ಈ ಸೇವೆ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ  

40 ನಿಮಿಷಗಳವರೆಗೆ 99.7 ಶೇಕಡಾ ಶುದ್ಧ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಒದಗಿಸುತ್ತದೆ. ಇದು ಆರೋಗ್ಯದಲ್ಲಿ ಸಮಸ್ಯೆ ಇರುವ ವ್ಯಕ್ತಿಯು ಆಸ್ಪತ್ರೆಯನ್ನು ತಲುಪುವವರೆಗೆ ಸಾಕಷ್ಟು ಬೆಂಬಲವನ್ನು ನೀಡುತ್ತದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಐಎಎಲ್(ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್) ವಕ್ತಾರರು, ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ:  ಕಾಶ್ಮೀರದಲ್ಲಿ ಸರಣಿ ಸ್ಫೋಟ- ಇಬ್ಬರು ಲಷ್ಕರ್ ಉಗ್ರರು ಅರೆಸ್ಟ್ 

Live Tv

Share This Article
Leave a Comment

Leave a Reply

Your email address will not be published. Required fields are marked *