ಆಸ್ತಾ ವರ್ಮಾ ಸ್ಫೂರ್ತಿ- ತಾಯಿಗೆ ವರ ಹುಡುಕ್ತಿರೋ ಮತ್ತೊಬ್ಬ ಯುವತಿ

Public TV
1 Min Read

ನವದೆಹಲಿ: ಇತ್ತೀಚೆಗೆ ಕಾನೂನು ವಿದ್ಯಾರ್ಥಿನಿ ಆಸ್ತಾ ವರ್ಮಾ, ತನ್ನ 50 ವರ್ಷದ ತಾಯಿಗೆ ವರಬೇಕು ಎಂದು ಟ್ವೀಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿತ್ತು. ಇದೀಗ ಆಸ್ತಾ ವರ್ಮಾ ಅವರಿಂದ ಸ್ಫೂರ್ತಿ ಪಡೆದು ಯುವತಿಯೊಬ್ಬಳು ತನ್ನ ತಾಯಿಗೂ ವರ ಹುಡುಕುತ್ತಿದ್ದಾಳೆ.

ಮೋಹಿನಿ ವಿಗ್ ಎಂಬಾಕೆ ತನ್ನ ಅಮ್ಮನ ಜೊತೆಗಿರುವ ಸೆಲ್ಫಿ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ. ಅಲ್ಲದೆ 56 ವರ್ಷದ ನನ್ನ ತಾಯಿಗೆ ಸೂಕ್ತವಾದ ವರ ಬೇಕಾಗಿದ್ದು, ಹುಡುಕುತ್ತಿದ್ದೇನೆ. ವರ ಅಮ್ಮನ ಪ್ರೀತಿಯಲ್ಲಿ ಪಾಲುದಾರನಾಗಬೇಕು ಹಾಗೂ ಕಾಳಜಿಯುಳ್ಳವನಾಗಿರಬೇಕು ಎಂದು ಬರೆದುಕೊಂಡಿದ್ದಾಳೆ.

https://twitter.com/mohini_vig/status/1193544558841253889

ಇದರ ಜೊತೆಗೆ, ಆಸ್ತಾವರ್ಮಾ ಅವರಿಂದ ಸ್ಫೂರ್ತಿ ಪಡೆದು ನಾನು ನನ್ನ 56 ವರ್ಷದ ತಾಯಿಗೆ ಮತ್ತೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹೀಗಾಗಿ 55 ರಿಂದ 60 ವರ್ಷದ ಒಳಗಿನ ಸಸ್ಯಹಾರಿ, ಧೂಮಪಾನ, ಮದ್ಯ ಸೇವಿಸಬಾರದು ಹಾಗೂ ಉತ್ತಮ ನಡತೆಯುಳ್ಳ ಮನುಷ್ಯನಾಗಿರಬೇಕು ಎಂದು ಬರೆದುಕೊಂಡಿದ್ದಾಳೆ. ಇದನ್ನೂ ಓದಿ: 50 ವರ್ಷದ ಅಮ್ಮನಿಗೆ ವರ ಬೇಕಾಗಿದೆ- ಮಗಳ ಟ್ವೀಟ್ ವೈರಲ್

ಇತ್ತೀಚೆಗಷ್ಟೇ ತಾಯಿಗೆ ವರ ಹುಡುಕಲು ಹೊರಟ ಆಸ್ತಾ ವರ್ಮಾ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಹಲವರ ಮನ ಕರಗುವಂತೆ ಮಾಡಿತ್ತು. ಇದೀಗ ಮೋಹಿನಿ ಟ್ವೀಟ್ ಗೂ ಇದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿದ್ದು, ಗುಡ್ ಲಕ್, ನಿನ್ನ ತಾಯಿಯ ಮುಂದಿನ ಪಯಣಕ್ಕೆ ದೇವರು ಒಳ್ಳೆ ಮಾಡಲಿ. ಆದಷ್ಟು ಬೇಗ ನೀನು ಅಂದುಕೊಂಡಂತೆ ಅಮ್ಮನಿಗೆ ಒಳ್ಳೆಯ ವರ ಸಿಗಲಿ ಎಂದು ಆಶೀರ್ವದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *