ಮೈದಾನದಲ್ಲಿ ಭಾಂಗ್ರಾ ನೃತ್ಯ ಮಾಡಿ ರಂಜಿಸಿದ ಟೀಂ ಇಂಡಿಯಾ ಆಟಗಾರ!

Public TV
1 Min Read

ಲಂಡನ್: ಓವೆಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಮೊದಲ ದಿನವೇ ಹಿಡಿತ ಸಾಧಿಸಿದ್ದು, ಇದೇ ವೇಳೆ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್  ಕ್ರೀಡಾಂಗಣದಲ್ಲಿ ಭಾಂಗ್ರಾ ಡಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ದಿನದಾಟದ ಟೀ ವಿರಾಮ ವೇಳೆಗೆ 123 ರನ್ ಗಳಿಸಿದ್ದ ಇಂಗ್ಲೆಂಡ್ ಪಡೆ ದಿನದಾಟದ ಅಂತ್ಯಕ್ಕೆ 198 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಇಶಾಂತ್ ಶರ್ಮಾ 3, ಬುಮ್ರಾ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ.

ಇತ್ತ ವೇಗಿಗಳು ಬೀಗಿ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಾರತೀಯ ಅಭಿಮಾನಿಗಳು ತಮ್ಮ ಹಾಡು, ಡಾನ್ಸ್, ಚೀರಾಟದ ಮೂಲಕ ಆಟಗಾರರನ್ನು ಬೆಂಬಲಿಸುತ್ತಿದ್ದರು. ಈ ವೇಳೆ ಲಾಂಗ್ ಆನ್ ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಧವನ್ ಅಭಿಮಾನಿಗಳ ಎದುರು ಭಾರತದ ಸಾಂಪ್ರದಾಯಿಕ ಭಾಂಗ್ರಾ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ತಂಡ ಒತ್ತಡದ ಎದುರಿಸುತ್ತಿದ್ದ ವೇಳೆಯಲ್ಲೂ ತಮ್ಮ ನಗುವಿನ ಮೂಲಕ ಧವನ್ ಇತರೇ ಆಟಗಾರರಲ್ಲಿ ಸ್ಫೂರ್ತಿ ತುಂಬುತ್ತಾರೆ. ಈ ಹಿಂದಿನ ಪಂದ್ಯಗಳಲ್ಲೂ ಧವನ್ ತಮ್ಮ ಹಾಸ್ಯದ ಮೂಲಕವೇ ಆಟಗಾರರಲ್ಲಿ ಉತ್ತಮ ಸಹಕಾರ ಮೂಡಲು ಕಾರಣರಾಗಿದ್ದರು.

ಮೈದಾನದಲ್ಲಿ ಧವನ್ ಡಾನ್ಸ್ ಮಾಡುತ್ತಿದ್ದಾರೆ ವೀಕ್ಷಕ ವಿವರಣೆ ನೀಡುತ್ತಿದ್ದ ಹರ್ಭಜನ್ ಕೂಡ ಪಂಜಾಬಿ ಡಾನ್ಸ್ ಮಾಡಿದ್ದಾರೆ. ಧವನ್ ಹಾಗೂ ಹಭರ್ಜನ್ ಡಾನ್ಸ್ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂಗ್ಲೆಂಡ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಕುಕ್ ತಮ್ಮ ವಿದಾಯದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಅಂತಿಮವಾಗಿ 72 ರನ್ ಗಳಿಸಿದ್ದ ಕುಕ್, ವೇಗಿ ಬುಮ್ರಾ ಬೌಲಿಂಗ್ ನಲ್ಲಿ ಔಟಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ಕುಕ್ ಗೆ ಗೌರವ ಸೂಚಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *