ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

Public TV
3 Min Read

– ಟ್ರಂಪ್‌ ಪ್ಲ್ಯಾನ್‌ ಇತಿಹಾಸವನ್ನೇ ಬದಲಾಯಿಸಬಹುದು; ಇಸ್ರೇಲ್‌ ಪ್ರಧಾನಿ

ವಾಷಿಂಗ್ಟನ್: ಕೆಲ ದಿನಗಳ ಹಿಂದೆಯಷ್ಟೇ ಇಸ್ರೇಲ್‌-ಹಮಾಸ್‌ ನಡುವಿನ ಕದನ ವಿರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (onald Trump) ಇದೀಗ ಗಾಜಾ ಪಟ್ಟಿಯ (Gaza Strip) ಮೇಲೆ ಕಣ್ಣಿಟ್ಟಿದ್ದಾರೆ. ಟ್ರಂಪ್‌ ಅವರ ಈ ಹೊಸ ಪ್ರಸ್ತಾಪ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಶ್ವೇತಭವನದ ಭೇಟಿಯ ಸಮಯದಲ್ಲಿ ಗಾಜಾವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಟ್ರಂಪ್ ಮಂಡಿಸಿದ್ದಾರೆ. ಟ್ರಂಪ್ ಆವರ ಆಫರ್ ಅನ್ನು ಎರಡು ರಾಷ್ಟ್ರಗಳು ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ, ಯುದ್ದ ಪೀಡಿತ ಪ್ರದೇಶದಿಂದ ಹೊರಕ್ಕೆ ಹೋಗಬೇಕು ಮತ್ತು ಈಜಿಪ್ಟ್ ಅಥವಾ ಜೋರ್ಡಾನ್ ಮುಂತಾದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ಯಾಲೆಸ್ತೀನಿಯನ್ನರು ಸ್ಥಳಾಂತರಗೊಳ್ಳಬೇಕು ಎಂದು ಟ್ರಂಪ್‌ ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನೆತನ್ಯಾಹು ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ಗಾಜಾವನ್ನು ಅಮೆರಿಕ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಇದನ್ನೂ ಓದಿ: USA vs China Tax War | ಅಮೆರಿಕದ ಕಲ್ಲಿದ್ದಲು, ಗ್ಯಾಸ್‌ ಮೇಲೆ ತೆರಿಗೆ ವಿಧಿಸಿದ ಚೀನಾ

ಇದೇ ವೇಳೆ ಸ್ಫೋಟಗೊಳ್ಳದ ಬಾಂಬ್ ಗಳನ್ನು ನಿಷ್ಕಿಯಗೊಳಿಸಲಾಗುವುದು. ಯುದ್ದದಿಂದ ನೆಲಸಮವಾಗಿರುವ ಕಟ್ಟಡದ ಅವಶೇಷಗಳ ಜಾಗವನ್ನು ಸಮತಟ್ಟು ಮಾಡಲಾಗುವುದು. ಆರ್ಥಿಕತೆಯನ್ನು ಸರಿದಾರಿಗೆ ತರಲಾಗುವುದು ಮತ್ತು ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂಬ ಆಫರ್‌ಗಳನ್ನೂ ಟ್ರಂಪ್‌ ನೀಡಿದ್ದಾರೆ. ಜೊತೆಗೆ ಗಾಜಾದಲ್ಲಿರುವ ಸುಮಾರು 20 ಲಕ್ಷ ನಾಗರಿಕರು ಬೇರೆ ದೇಶಕ್ಕೆ ಹೋಗಬೇಕು ಎನ್ನುವ ಷರತ್ತನ್ನೂ ವಿಧಿಸಿದ್ದಾರೆ.

ಮುಂದುವರಿದು… ನಮ್ಮ ಆಫರ್ ಸ್ವೀಕರಿಸಲು ಇವರು ಯೋಗ್ಯರಲ್ಲ, ಇವರಿಗಾಗಿ ನಾವು ಅಷ್ಟೊಂದು ಹಣ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ. ಅಷ್ಟೊಂದು ಅನಾಹುತ ನಡೆಯುತ್ತಿದ್ದರೂ, ತಮ್ಮ ಹಕ್ಕಿಗಾಗಿ, ತಮ್ಮ ಜೀವನಕ್ಕಾಗಿ ಇವರು ಪಣತೊಟ್ಟವರಲ್ಲ. ತಮ್ಮ ಇಂದಿನ ಶೋಚನೀಯ ಸ್ಥಿತಿಗೆ ಅವರೇ ಕಾರಣ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್‌

ಆದ್ರೆ ಗಾಜಾಪಟ್ಟಿಯಿಂದ ಪ್ಲ್ಯಾಲೆಸ್ತೀನಿಯನ್ನರನ್ನು ಸ್ಥಳಾಂತರಿಸುವುದರಿಂದ ಅದು ಮಧ್ಯಪ್ರಾಚ್ಯದ ಇತರ ಪ್ರದೇಶಗಳನ್ನು ಅಸ್ತಿರಗೊಳಿಸಬಹುದು. ಸಂಘರ್ಷ ಹೆಚ್ಚಿಸಬಹುದು ಹಾಗೂ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ದೀರ್ಘಕಾಲಕ್ಕೆ ಧಕ್ಕೆಯಾಗಬಹುದು ಎಂದು ಟ್ರಂಪ್‌ಗೆ ಮಿತ್ರರಾಷ್ಟ್ರದ ನಾಯಕರು ಎಚ್ಚರಿಸಿದ್ದಾರೆ.

ನೆತನ್ಯಾಹು ಅಮೆರಿಕ ಭೇಟಿ ನಡುವೆ ಇಸ್ರೇಲ್‌-ಹಮಾಸ್‌ ನಡುವಿನ ಕದನವಿರಾಮ ಮುಂದುವರಿದಿದೆ. 2023ರ ಅಕ್ಟೋಬರ್‌ 7ರಂದು ಸಂಭವಿಸಿದ ದಾಳಿಯ ನಂತರ ಈವರೆಗೆ 47,500 ಪ್ಯಾಲೆಸ್ತೀನಿಯನ್ನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಚೀನಾ, ಮೆಕ್ಸಿಕೊ, ಕೆನಡಾಗೆ ಸುಂಕದ ಬರೆ – ಅಮೆರಿಕಕ್ಕೆ ಬೀಳುತ್ತಾ ರಿವರ್ಸ್‌ ಟ್ಯಾಕ್ಸ್‌ ಎಫೆಕ್ಟ್‌?

ಇತಿಹಾಸ ಬದಲಾಯಿಸಬಹುದು:
ಇನ್ನೂ ಶ್ವೇತಭವನಕ್ಕೆ ಭೇಟಿ ನೀಡಿರುವ ನೆತನ್ಯಾಹು, ಟ್ರಂಪ್‌ ಪ್ರಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯನ್‌ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಟ್ರಂಪ್‌ ಅವರ ಯೋಜನೆ ʻಇತಿಹಾಸವನ್ನೇ ಬದಲಾಯಿಸಬಹುದುʼ. ಹಾಗಾಗಿ ಟ್ರಂಪ್‌ ಅವರ ಯೋಜನೆ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.

Share This Article