ಕದಂಬ ರವಿವರ್ಮನ ಕಾಲದ ಶಾಸನ ಪತ್ತೆ

Public TV
1 Min Read

ಶಿವಮೊಗ್ಗ : ಕರ್ನಾಟಕವನ್ನಾಳಿದ ಪ್ರಥಮ ಕನ್ನಡ ರಾಜವಂಶಸ್ಥನಾದ ರವಿವರ್ಮನ ಕಾಲದ ಅಪರೂಪದ ಶಾಸನ ಜಿಲ್ಲೆಯ ಸೊರಬದಲ್ಲಿ ಪತ್ತೆಯಾಗಿದೆ.

ಸೊರಬ ತಾಲೂಕು ತಲಗುಂದ ಗ್ರಾಮದ ರಾಮೇಶ್ವರ ದೇವಾಲಯದ ಬಳಿ ಕದಂಬ ರಾಜವಂಶಸ್ಥನಾದ ರಾಜ ರವಿವರ್ಮನ ಕಾಲದ ಕಲ್ಲಿನ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಆರ್. ಶೇಜೇಶ್ವರ ಪತ್ತೆ ಮಾಡಿದ್ದಾರೆ. ಕಲ್ಲಿನ ಶಾಸನವು 143 ಸೆ.ಮೀ ಉದ್ದ ಹಾಗೂ 49 ಸೆ.ಮೀ ಅಗಲವಿದೆ. ಇದು ಬ್ರಾಹ್ಮಿ ಲಿಪಿ ಹಾಗೂ ಸಂಸ್ಕೃತ ಭಾಷೆಯ ಏಳು ಸಾಲಿನಿಂದ ಕೊಡಿದೆ. ಶಾಸನವು ಅಲ್ಲಲ್ಲಿ ಸ್ವಲ್ಪ ಒಡೆದು ಹೋಗಿದೆ. ಇದನ್ನೂ ಓದಿ: ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್

ಶಾಸನದ ಸಾರಾಂಶ ಹೀಗಿದೆ: ಕದಂಬ ರವಿವರ್ಮನಿಗೆ ಸಂಬಂಧಿಸಿದಂತೆ ಇದುವರೆಗೂ 10 ಶಾಸನಗಳು ಮಾತ್ರ ದೂರೆತಿದೆ. ಈಗ ದೂರೆತಿರುವ ಶಾಸನವು ಸೇರಿ 11 ಶಾಸನಗಳು ಕಂಡು ಬಂದಿದೆ. ರವಿವರ್ಮ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ 485 ರಿಂದ ಕ್ರಿ.ಶ 519ರ ವರೆಗೂ 34 ವರ್ಷಗಳ ಕಾಲ ಆಡಳಿತ ನಡೆಸಿದ್ದಾನೆ. ಈ ಶಾಸನದಲ್ಲಿ ರವಿವರ್ಮನು ದೇವತೆಗಳಿಂದ ಪೂಜಿಸಲ್ಪಟ್ಟ ಮುಚ್ಚುಂಡಿಯ ಗ್ರಾಮದ ಆರನೇ ಒಂದು ಭಾಗವನ್ನು ದಾನವನ್ನಾಗಿ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಜೊತೆಗೆ ಇದು ಶಿಕಾರಿಪುರ ಕ್ರಿ.ಶ 5-6ನೇ ಶತಮಾನದ್ದಾಗಿದೆ.

ಈ ಶಾಸನದ ಹತ್ತಿರ ಕದಂಬ ಅರಸರ ಕಾಲದ ಸಿಂಹ ಶಿಲ್ಪವು ಸಹಾ ದೊರೆತಿದೆ. ಇದರ ಅಕ್ಕಪಕ್ಕದಲ್ಲಿಯೇ ಇತರೆ ಶಾಸನಗಳು, ಶಿವಲಿಂಗಗಳು, ಸಪ್ತಮಾತೃಕೆ ಶಿಲ್ಪಗಳು ಕಂಡು ಬಂದಿದೆ. ಇದು ಒಂದು ದಾನ ಶಾಸನವಾಗಿರುವುದು ವಿಶೇಷವಾಗಿದೆ.  ಇದನ್ನೂ ಓದಿ:  ದೆಹಲಿಯತ್ತ ತೆರಳುತ್ತಿದ್ದ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ

Share This Article
Leave a Comment

Leave a Reply

Your email address will not be published. Required fields are marked *