ಅಮಾಯಕ ವ್ಯಾಪಾರಿ ಮೇಲೆ ಕಳ್ಳತನ ಆರೋಪ ಹೊರಿಸಿ ಲಾಠಿಯಿಂದ ಹಲ್ಲೆ – ಹೆಡ್‌ಕಾನ್‌ಸ್ಟೇಬಲ್ ಅಮಾನತು

By
1 Min Read

ಹಾಸನ: ಕೇಳಿದಷ್ಟು ಹಣಕ್ಕೆ ಪ್ಲಾಸ್ಟಿಕ್ ಟೇಬಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕ ವ್ಯಾಪಾರಿಯನ್ನು ಕರೆದೊಯ್ದು ಕಳ್ಳತನ ಆರೋಪ ಹೊರಿಸಿ ಲಾಠಿಯಿಂದ ಹಲ್ಲೆ ಮಾಡಿದ ಹೆಡ್‌ಕಾನ್‌ಸ್ಟೇಬಲ್‌ನನ್ನು (Head Constable) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅಮಾನತು ಮಾಡಿದ್ದಾರೆ.

ಹಾಸನ (Hassan) ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು ಪೊಲೀಸ್ ಠಾಣೆಯ ಮಣಿಕುಮಾರ್ ಅಮಾನತಾದ ಹೆಡ್‌ಕಾನ್‌ಸ್ಟೇಬಲ್. ಪ್ಲಾಸ್ಟಿಕ್ ಟೇಬಲ್ ಮಾರಾಟ ಮಾಡಲು ಯಸಳೂರು ರಸ್ತೆಯಲ್ಲಿ ಕೂಗಿಕೊಂಡು ಹೋಗುತ್ತಿದ್ದ ಗದಗ ಮೂಲದ ಅರ್ಜುನ್ ಎಂಬಾತನನ್ನು ರಸ್ತೆ ಬಳಿ ನಿಂತಿದ್ದ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಮಣಿಕುಮಾರ್ ಕರೆದು ಒಂದು ಪ್ಲಾಸ್ಟಿಕ್ ಟೇಬಲ್‌ಗೆ ಎಷ್ಟು ಎಂದು ಕೇಳಿದ್ದ. ಒಂದು ಟೇಬಲ್‌ಗೆ 2,500 ರೂ. ಎಂದು ವ್ಯಾಪಾರಿ ಹೇಳಿದ್ದು, 1,800 ರೂ.ಗೆ ಪ್ಲಾಸ್ಟಿಕ್ ಟೇಬಲ್ ಕೊಡುವಂತೆ ಮಣಿಕುಮಾರ್ ಕೇಳಿದ್ದಾನೆ.

ಅಷ್ಟು ಹಣಕ್ಕೆ ಬರಲ್ಲ ನೀವೇ ಒಂದು ರೇಟ್ ಹೇಳಿ ಪ್ಲಾಸ್ಟಿಕ್ ಟೇಬಲ್ ತೆಗೆದುಕೊಳ್ಳಿ ಎಂದು ಬಡ ವ್ಯಾಪಾರಿ ಅರ್ಜುನ್ ಮಣಿಕುಮಾರ್‌ಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಹೆಡ್‌ಕಾನ್‌ಸ್ಟೇಬಲ್ ಅರ್ಜುನ್‌ನನ್ನು ಯಸಳೂರಿನ ಕೆನರಾಬ್ಯಾಂಕ್‌ನ ಕಟ್ಟಡದ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿ ಪ್ಲಾಸ್ಟಿಕ್ ಟೇಬಲ್ ಕಳ್ಳತನ ಮಾಡಿಕೊಂಡು ಬಂದಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿಯಿಂದ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟು ಕೇರಳದಲ್ಲಿ ಅರೆಸ್ಟ್‌ ಆಗಿರುವ ಬೆಂಗಳೂರು ನಾಲ್ವರು ಪೊಲೀಸರು ಸಸ್ಪೆಂಡ್‌

ಇದರಿಂದ ಮನನೊಂದ ಅರ್ಜುನ್ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಣಿಕುಮಾರ್‌ನನ್ನು ಎಸ್‌ಪಿ ಹರಿರಾಂ ಶಂಕರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆಯೂ ಯಸಳೂರಿನಲ್ಲಿ ಮಣಿಕುಮಾರ್ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿತ್ತು. ಇದನ್ನೂ ಓದಿ: ಬಾಸ್ ಎಂದು ಕರೆಯದ್ದಕ್ಕೆ ಯುವಕನ ಮೇಲೆ ಪುಡಿರೌಡಿಗಳಿಂದ ಹಲ್ಲೆ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್