ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ‌: ಡಿಕೆಶಿ

Public TV
1 Min Read

ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ‌ ಮಾತನಾಡಿದ ಅವರು, ತೆರಿಗೆ ಯಲ್ಲಿ ಸರಿಯಾದ ರೆಷಿಯೋ ಬಿಡಿ, ಉತ್ತರ ಪ್ರದೇಶ ದೊಡ್ಡ ರಾಜ್ಯ, ಇದು ಬೇರೆ ವಿಚಾರ. ನಮಗೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ. ಇದರ ಕುರಿತು ಪರಿಶೀಲನೆ ಮಾಡುತ್ತೇವೆ. ಸಿಎಂ ಅದರ ಕುರಿತು ದೊಡ್ಡ ಅಧ್ಯಯನ ಮಾಡುತ್ತಿದ್ದಾರೆ. ರೆಶ್ಯೋ ಪದ್ಧತಿ, ಕಾನೂನು ಏನು ಎಂದು ಪರಿಶೀಲಿಸುತ್ತಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇರಿಗೇಷನ್ ನಲ್ಲಿ ಏನ್ ಮಾತು ಕೊಟ್ಟಿದ್ದಾರೆ ಅದು ಕೂಡ ಆಗಿಲ್ಲ. ಅರ್ಬನ್ ಡೆವಲಪ್ಮೆಂಟ್‌ನಲ್ಲೂ ಕೆಲವು ಅಂಶ ಇತ್ತು. ನಮ್ಮ ಹಕ್ಕಿಗೆ, ನಮ್ಮ ತೆರಿಗೆಗೆ ನಾವು ಹೋರಾಟ ಮಾಡಲೇಬೇಕು. ರಾಜ್ಯದ ಹಿತ ಕಾಪಾಡಬೇಕು. ಯಾಕೆ ಎಂಪಿಗಳು ಇಷ್ಟೊಂದು ಜನ ಇದ್ದರೂ ಮೌನ ವಹಿಸಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

Share This Article