– ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ಭರಪೂರ ಮೆಕ್ಕೆಜೋಳ (Corn) ಬೆಳೆದಿದ್ದು, ಬರೊಬ್ಬರಿ 2 ಲಕ್ಷ ಟನ್ ನಷ್ಟು ಮೆಕ್ಕೆಜೋಳ ಸಂಗ್ರಹ ಮಾಡಿದ್ದಾರೆ. ಆದ್ರೆ ಜಿಲ್ಲಾಡಳಿತ ಸರ್ಕಾರದ ನಿರ್ದೇಶನಕ್ಕೂ ಕ್ಯಾರೆ ಎನ್ನದೆ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದೇ ಕೂತಿದೆ. ಇದ್ರಿಂದ ಆಕ್ರೋಶಗೊಂಡ ರೈತರು (Farmers) ಇಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಮೆಕ್ಕೆಜೋಳ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯೊಂದರಲ್ಲೇ ಈ ಬಾರಿ 45,000 ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇದ್ರಿಂದ ಜಿಲ್ಲೆಯ ಬರೊಬ್ಬರಿ 2 ಲಕ್ಷ ಟನ್ ನಷ್ಟು ಮೆಕ್ಕೆಜೋಳ ಬೆಳೆಯಲಾಗಿದೆ. ಆದ್ರೆ ಕೆಎಂಎಫ್, ಎಂಎಸ್‌ಪಿ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿ ಮಾಡಿಕೊಂಡಿದೆ. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇದುವರೆಗೂ ಸಕಾಲಕ್ಕೆ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿಲ್ಲ.. ಖರೀದಿದಾರರ ಮನವೊಲಿಸದೇ ಬೆಳೆದ ಜೋಳ ಹಾಗೆಯೇ ಉಳಿದಿದೆ. ಇದರಿಂದ ಆಕ್ರೋಶಗೊಂಡ ರೈತರು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕೆಲ ರೈತರು ತಾವು ಬೆಳೆದ ಮೆಕ್ಕೆಜೋಳದ ತೆನೆ ಹಿಡಿದು ಧರಣಿ ಮಾಡಿದ್ರೆ, ಇನ್ನೂ ಕೆಲವರು ಮೆಕ್ಕೆಜೋಳದ ರಾಶಿ ಪ್ರದರ್ಶನ ಮಾಡಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ರು. ಸ್ಥಗಿತಗೊಂಡಿರುವ ಕೆಎಂಎಫ್‌ನ ಮೆಕ್ಕೆಜೋಳ ಖರೀದಿ ಕೇಂದ್ರ ಮತ್ತೆ ಆರಂಭಿಸಬೇಕು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಸರ್ಕಾರವೇ ಎಂ.ಎಸ್.ಪಿ ದರದಲ್ಲಿ ಜೋಳ ಖರೀದಿ ಮಾಡುವಂತೆ ಒತ್ತಾಯ ಮಾಡಿದ್ರು. ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ಪತ್ತೆ – ನಿಧಿಯ 1 ಭಾಗ ಕುಟುಂಬಕ್ಕೆ, ಮಗನಿಗೆ ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣದ ಭರವಸೆ
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರದ ನೂತನ ಜಿಲ್ಲಾಧಿಕಾರಿ ಪ್ರಭು ಜಿ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ರೈತರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ರು. ಇದನ್ನೂ ಓದಿ: ಮಂಗಳೂರಿನ ಪೆಡ್ಲರ್‌ಗಳಿಗೆ ಮಾದಕವಸ್ತು ಸಪ್ಲೈ – 4 ಕೋಟಿ ಮಾಲು ಸಮೇತ ಸಿಕ್ಕಿಬಿದ್ದ ಉಗಾಂಡ ಮಹಿಳೆ
ಕೆಎಂಎಫ್ ನವರು ಕೆಲದಿನಗಳ ಕಾಲ ಬೆಂಗಳೂರಿನ ರಾಜಾನುಕುಂಟೆ ಬಳಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದ್ರು ಅದೂ ಸ್ಥಗಿತಗೊಂಡಿದೆ. ಕೇವಲ 300 ಜನ ರೈತರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಆದ್ರೆ ಇನ್ನೂ ಸಾವಿರಾರು ರೈತರು ಬೆಳೆದಿರುವ ಮೆಕ್ಕೆಜೋಳಕ್ಕೆ ನೆಲೆ ಇಲ್ಲದೆ ರೈತರು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಬಡವರ ಸೂರಿನ ಸಬ್ಸಿಡಿಗೆ ಕೊಕ್ಕೆ – ʻಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಜ.31 ಕ್ಕೆ ಮನೆ ಭರವಸೆ



