ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ, ಗ್ರೌಂಡ್‌ನಲ್ಲಿ ಓಡಿಸಿ ದೈಹಿಕ ಶಿಕ್ಷಕನ ಅಮಾನವೀಯ ವರ್ತನೆ

By
1 Min Read

ಬೀದರ್: ನಗರದಲ್ಲಿ ಶಿಕ್ಷಕನಿಂದ ಅಮಾನವೀಯ ಕೃತ್ಯ ನಡೆದಿರುವುದು ಬಯಲಿಗೆ ಬಂದಿದೆ. ದೈಹಿಕ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ, ಅವರನ್ನು ಗ್ರೌಂಡ್‌ನಲ್ಲಿ ಓಡಿಸಿ ಅಮಾನವೀಯವಾಗಿ ನಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ (Humnabad) ಪಟ್ಟಣದ ನಗರೇಶ್ವರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ. ರಮೇಶ್ ಅಮಾನವೀಯ ಕೃತ್ಯ ಎಸಗಿದ ದೈಹಿಕ ಶಿಕ್ಷಕ. ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳದೇ ಇದ್ದರೆ ಅವರ ಪ್ಯಾಂಟ್ ಬಿಚ್ಚಿಸಿ ಚಡ್ಡಿ ಮೇಲೆ ಓಡಿಸುತ್ತಿದ್ದ. ಅರೆಬೆತ್ತಲೆಗೊಳಿಸಿ ಗ್ರೌಂಡ್‌ನಲ್ಲಿ ಓಡಿಸಿದ್ದಲ್ಲದೇ ವಿದ್ಯಾರ್ಥಿಗಳಿಗೆ ಹಿಂಸೆ ನೀಡುತ್ತಿದ್ದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ.

ಘಟನೆ 15 ದಿನಗಳ ಹಿಂದೆ ನಡೆದಿದ್ದು, ಶಾಲೆಗೆ ಹುಮ್ನಾಬಾದ್ ಡಿವೈಎಸ್‌ಪಿ ನ್ಯಾಮೇಗೌಡರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದಾಗ ದೈಹಿಕ ಶಿಕ್ಷಕನ ಕೃತ್ಯ ಬೆಳಕಿಗೆ ಬಂದಿದೆ. ಶಿಕ್ಷಕ ಶಾಲೆ ಮುಗಿದ ಮೇಲೂ ಹೆಚ್ಚುವರಿಯಾಗಿ 2 ಗಂಟೆ ದೈಹಿಕ ಪಾಠ ಮಾಡುತ್ತಿದ್ದ. ಇದನ್ನೂ ಓದಿ: ಪರೀಕ್ಷೆ ಶುಲ್ಕ ಪಾವತಿಸದ್ದಕ್ಕೆ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ!

 

ಈ ಬಗ್ಗೆ ಖಾಸಗಿ ಶಾಲೆಯ ಮ್ಯಾನೇಜ್‌ಮೆಂಟ್‌ನಿಂದ ದೂರು ದಾಖಲಾಗಿದೆ. ದೂರಿನ್ವಯ ಹುಮ್ನಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷಕನ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದನ್ನೂ ಓದಿ: ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಬಳ್ಳಾರಿ ಐಸಿಸ್‌ ಟೀಂ – ದಾಳಿಯಲ್ಲಿ ಏನು ಸಿಕ್ಕಿದೆ?

Share This Article