ಪಿತ್ರಾರ್ಜಿತ ಆಸ್ತಿ ವಿವಾದ: ತಮ್ಮಂದಿರಿಂದಲೇ ಅಣ್ಣನ ಕೊಲೆ

Public TV
1 Min Read

ರಾಯಚೂರು: ಜಿಲ್ಲೆಯ ಮಾನ್ವಿ(Manvi) ತಾಲೂಕಿನ ಕುರಡಿ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದ ಹಿನ್ನೆಲೆ ತಮ್ಮಂದಿರಿಂದಲೇ ಅಣ್ಣನ ಕೊಲೆ ನಡೆದಿದೆ.

ಸಂಜಯ್ ಕುರ್ಡಿಕರ್ (38) ಕೊಲೆಯಾದ ವ್ಯಕ್ತಿ. ಪಿತ್ರಾರ್ಜಿತ ಆಸ್ತಿ ಅಣ್ಣತಮ್ಮಂದಿರಿಗೆ ಹಂಚಿಕೆ ಆಗಿರಲಿಲ್ಲ. ನ್ಯಾಯಾಲಯ (Court) ಮೆಟ್ಟಿಲು ಏರಿ ತನ್ನ ಪಾಲಿನ ಆಸ್ತಿಯನ್ನ ಸಂಜಯ್ ಪಡೆದಿದ್ದ. ಇದರಿಂದ ಆಕ್ರೋಶಗೊಂಡಿದ್ದ ಉಳಿದ ಸಹೋದರರು ಅಣ್ಣ ಸಂಜಯ್ ಜೊತೆ ಜಗಳ ಮಾಡಿದ್ದಾರೆ. ಇದನ್ನೂ ಓದಿ: ಮುಡಾ ಸೈಟ್ ಪಡೆಯಲು ಸಿಎಂ ಪತ್ನಿ ಡಿಮ್ಯಾಂಡ್ – ಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

ಗ್ರಾಮದ ದೇವಿ ವೃತ್ತದಲ್ಲಿ ಹಾಡುಹಗಲೇ ತಮ್ಮಂದಿರು ಅಣ್ಣನಿಗೆ ಕಬ್ಬಿಣದ ರಾಡ್, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಆಸ್ತಿ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್‌ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?

ಆರೋಪಿಗಳಾದ ಸಂಜೀವ್, ಸಂಘರ್ಷ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರು ಜನ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇನ್ನೆರಡು ದಿನದಲ್ಲಿ ದುಬಾರಿ ಮದ್ಯ ದರ ಇಳಿಕೆ?

Share This Article