ರಾಯಚೂರಿನಲ್ಲಿ ತಯಾರಾಗೋ ವಿಶೇಷ ಕೌದಿ – ಸುಧಾಮೂರ್ತಿಯಿಂದ ರಾಷ್ಟ್ರಪತಿಗೆ ಉಡುಗೊರೆ

Public TV
1 Min Read

ರಾಯಚೂರು: ರಾಜ್ಯಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿಗಳಿಗೆ ಇನ್ಫೋಸಿಸ್ ಫೌಂಡೇಶನ್ (Infosys Foundation) ಮುಖ್ಯಸ್ಥೆ ಸುಧಾಮೂರ್ತಿ ( Sudhamurthy) ಕೌದಿ ಉಡುಗೊರೆ ನೀಡಿದ್ದು, ಇದೀಗ ಈ ವಿಚಾರ ಭಾರೀ ಚರ್ಚೆಯಾಗುತ್ತಿದೆ.

ಧಾರವಾಡದಲ್ಲಿ ಐಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಆಗಮಿಸಿದ್ದ ವೇಳೆ ಕೌದಿ (Kaudi Blanket) ಉಡುಗೊರೆ ನೀಡಿದ್ದರು. ಉಡುಗೊರೆ ಹಿಂದಿನ ಕತೆಯಲ್ಲಿ 3 ಸಾವಿರ ದೇವದಾಸಿಯರ ಪಾತ್ರ ಪ್ರಮುಖವಾಗಿದೆ. ರಾಯಚೂರು ಜಿಲ್ಲೆಯ ದೇವದಾಸಿ ಮಹಿಳೆಯರು ತಯಾರಿಸಿದ ಕೌದಿಯನ್ನು ಸುಧಾಮೂರ್ತಿ ಉಡುಗೊರೆಯಾಗಿ ನೀಡಿದ್ದಾರೆ. ದೇವದಾಸಿ ಪದ್ಧತಿಯಿಂದ (Devadasi system) ಹೊರತಂದು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿರುವ ಸುಧಾಮೂರ್ತಿ, ಅದೇ ಮಹಿಳೆಯರು ತಯಾರಿಸಿದ ಕೌದಿ ಹಾಗೂ ಸೀರೆ ಮತ್ತು ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದರು.  ಇದನ್ನೂ ಓದಿ: RSS ಬ್ಯಾನ್ ವಿಚಾರ – ಸಿದ್ದರಾಮಯ್ಯಗೆ ತಲೆಕೆಟ್ಟಿದೆ ಎಂದು ಅಪ್ಪಚ್ಚು ರಂಜನ್ ಕಿಡಿ

ಈ ಕೌದಿಗಳು ಫುಲ್ ಡಿಮ್ಯಾಂಡ್ ಹೊಂದಿವೆ. ಈ ಕೌದಿಗಳ ಬಗ್ಗೆಯೇ ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಸುಧಾಮೂರ್ತಿ ಪುಸ್ತಕ ಬರೆದಿದ್ದಾರೆ. ‘ತ್ರೀ ತೌಸಂಡ್ ಸ್ಟಿಚ್ಚಸ್'(Three Thousand Stitches), ‘ತೀನ್ ಹಜಾರ್ ಟಾಕಿ'(Teen Hazar Talkie) ಎಂಬ ಹೆಸರಿನ ಪುಸ್ತಕ ಬಿಡುಗಡೆಯಾಗಿವೆ. ಒಬ್ಬೊಬ್ಬ ದೇವದಾಸಿಯ ಒಂದೊಂದು ಹೊಲಿಗೆ ಸೇರಿ ಮೂರು ಸಾವಿರ ಹೊಲಿಗೆಗಳಿಂದ ಹೊಲಿದ ವಿಶೇಷ ಕೌದಿ ಸುಧಾಮೂರ್ತಿಗೆ ಉಡುಗೊರೆ ನೀಡಿದ್ದರು. ಕೌದಿ ಹೊಲಿದು ಸ್ವಯಂ ದುಡಿಮೆ ಮಾಡುವ ಸಂಸ್ಥೆ ನಿರ್ಮಿಸಿ ಸುಧಾಮೂರ್ತಿ ಅವರು ದೇವದಾಸಿಯರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಇದನ್ನೂ ಓದಿ: ತಾನು ಎರಡನೇ ಪತ್ನಿ ಅಂತಾ ಗೊತ್ತಾಗ್ತಿದ್ದಂತೆಯೇ ಮುಂಜಾನೆ ನೇಣಿಗೆ ಶರಣಾದ ನವವಧು!

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *