ಗುಂಡಿಕ್ಕಿ ಈಕ್ವೆಡರ್‌ ಬ್ಯೂಟಿ ಹತ್ಯೆ – ಇನ್‌ಸ್ಟಾಗ್ರಾಮ್‌ ಫಾಲೋ ಮಾಡಿ ಸ್ಕೆಚ್‌ ಹಾಕಿದ್ದ ಹಂತಕರು!

Public TV
2 Min Read

ಈಕ್ವೆಡಾರ್‌: ಸೋಷಿಯಲ್‌ ಮೀಡಿಯಾಗಳಲ್ಲಿ (Social Media) ಸ್ಟೇಸ್‌ ಹಾಕೋದು ತಮ್ಮ ದಿನದ ಬೆಳವಣಿಗೆಯನ್ನು ಫಾಲೋವರ್ಸ್‌ಗಳಿಗೆ ಹಂಚಿಕೊಳ್ಳಬೇಕೆಂಬುದು ಖಯಾಲಿ. ಇಂದು ಎಲ್ಲಿದ್ದೇವೆ? ಎಲ್ಲಿಗೆ ಹೋಗ್ತಿದ್ದೀವಿ? ಯಾರನ್ನ ಭೇಟಿ ಮಾಡ್ತೀವಿ? ಯಾವ ಹೋಟೆಲ್‌ನಲ್ಲಿ ಊಟ ಮಾಡಿದ್ರು? ಎಲ್ಲಿ ಶಾಪಿಂಗ್‌? ಹೀಗೆ ಪ್ರತಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಹೀಗೆ ಮಾಡದಿದ್ದರೆ ನಿದ್ರೆಯೇ ಬರೋದಿಲ್ಲ. ಇದು ಕ್ರಿಮಿನಲ್‌ಗಳಿಗೆ ನೆರವಾಗುತ್ತದೆ ಎಂಬುದಕ್ಕೆ ಈಕ್ವೆಡರ್‌ ದೇಶದ ಬ್ಯೂಟಿ (Ecuador Beauty) ಹತ್ಯೆಯೇ ಸ್ಪಷ್ಟ ಉದಾಹರಣೆಯಾಗಿದೆ.

ಹೌದು. 2022ರಲ್ಲಿ ʻಮಿಸ್ ಈಕ್ವೆಡರ್‌ʼ ಕಿರೀಟ ಧರಿಸಿದ್ದ ಬ್ಯೂಟಿ ಲ್ಯಾಂಡಿ ಪರಾಗ ಗೊಯ್ಬುರೊ (23) (Landy Parraga Goyburo) ಅವರು ಕಳೆದ ಏಪ್ರಿಲ್‌ 28ರಂದು ಭೀಕರ ಗುಂಡಿನ ದಾಳಿಗೆ ತುತ್ತಾಗಿದ್ದರು. ಈಕ್ವೆಡರ್‌ ದೇಶದ ಕ್ವೆವೆಡೊ ನಗರದಲ್ಲಿ ಇರುವ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಈ ಘಟನೆ ಈಕ್ವೆಡರ್‌ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದನ್ನೂ ಓದಿ: ನಿಜ್ಜರ್‌ ಹತ್ಯೆ ಕೇಸ್‌ – ಬಂಧಿತ ಮೂವರು ಆರೋಪಿಗಳು ಭಾರತ ಮೂಲದವರು; ಫೋಟೋ ರಿಲೀಸ್‌

23 ವರ್ಷ ವಯಸ್ಸಿನ ಈಕೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದರು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಮಾಹಿತಿಯೇ ಹಂತಕರಿಗೆ ಸುಳಿವು ಸಿಗುವಂತೆ ಮಾಡಿದೆ ಎಂಬುದು ಗೊತ್ತಾಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಇಬ್ಬರು ಬಂದೂಕುಧಾರಿ ಯುವಕರು ಹೋಟೆಲ್‌ಗೆ ನುಗ್ಗಿ ಆಕೆಯ ಮೇಲೆ ಗುಂಡಿನ ಮಳೆಗರೆಯುತ್ತಾರೆ. ಇದೇ ವೇಳೆ ಲ್ಯಾಂಡಿ ಜೊತೆಗೆ ಇದ್ದ ಮತ್ತೊಬ್ಬನಿಗೂ ಗುಂಡೇಟು ತಗುಲಿದೆ. ದಾಳಿ ಬಳಿಕ ಬಂದೂಕುಧಾರಿಗಳು ಪರಾರಿಯಾಗುತ್ತಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಅಲ್‌ ಜಜೀರಾ ಬಂದ್‌ – ಕಚೇರಿ ಮೇಲೆ ದಾಳಿ

ಇನ್‌ಸ್ಟಾ ಫಾಲೋ ಮಾಡಿ ಸ್ಕೆಚ್‌ ಹಾಕಿದ್ದೇಗೆ?
ಸೋಷಿಯಲ್‌ ಮೀಡಿಯಾ ಪ್ರಭಾವಿಯಾಗಿದ್ದ (Ecuadorian influencer) ಲ್ಯಾಂಡಿ ಪರಾಗ, ತಾನು ಎಲ್ಲೇ ಹೋದರೂ ಇನ್‌ಸ್ಟಾ ಖಾತೆಯಲ್ಲಿ ಅಪ್‌ಡೇಟ್ ಮಾಡುತ್ತಿದ್ದರು. ಏಪ್ರಿಲ್ 28 ರಂದು ಸಹ ಆಕೆ ರೆಸ್ಟೋರೆಂಟ್ ಒಂದಕ್ಕೆ ಹೋಗಿ ತಾವು ಈ ರೆಸ್ಟೋರೆಂಟ್‌ನಲ್ಲಿ ಇರೋದಾಗಿ ಫೋಟೋ ಸಮೇತ ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್ ಮಾಡಿದ್ದರು. ಜೊತೆಗೆ ಆಕ್ಟೋಪಸ್‌ (ಸಮುದ್ರ ಜೀವಿ) ಆಹಾರವೊಂದನ್ನು ಸೇವಿಸುತ್ತಿರೋದಾಗಿಯೂ ಫೋಟೋ ಹಂಚಿಕೊಂಡಿದ್ದರು ಇದನ್ನು ನೋಡಿದ್ದೇ ತಡ, ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ ಹಂತಕರು, ರೆಸ್ಟೋರೆಂಟ್‌ಗೆ ದಾಂಗುಡಿ ಇಟ್ಟಿದ್ದರು. ಅಲ್ಲಿಯೇ ಗುಂಡಿನ ದಾಳಿ ನಡೆಸಿ ಆಕೆಯನ್ನ ಹತ್ಯೆಗೈದರು.

ಮೂಲಗಳ ಪ್ರಕಾರ ಲ್ಯಾಂಡಿ ಪರಾಗ ಅವರಿಗೆ ಲಿಯಾಂಡ್ರೊ ನೊರೆರೊ ಎಂಬಾತನ ಜೊತೆಗೆ ಗೆಳೆತನ ಇತ್ತು. ಆತ ಓರ್ವ ಮಾದಕ ದ್ರವ್ಯ ಸಾಗಾಟಗಾರನಾಗಿದ್ದ. ಕಳೆದ ವರ್ಷ ಜೈಲಿನಲ್ಲಿ ಇದ್ದ ವೇಳೆ ಜೈಲಿನಲ್ಲಿ ನಡೆದ ಬಡಿದಾಟದಲ್ಲಿ ಆತ ಕೊನೆಯುಸಿರೆಳೆದಿದ್ದ. ಲಿಯಾಂಡ್ರೊ ಪತ್ನಿಯೇ ಲ್ಯಾಂಡಿ ಅವರ ಹತ್ಯೆಗೆ ಸುಪಾರಿ ಕೊಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಏಕೆಂದರೆ ಲ್ಯಾಂಡಿ ವಿರುದ್ಧ ಅನೇಕ ಪೊಲೀಸ್‌ ಪ್ರಕರಣಗಳೂ ಸಹ ದಾಖಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

Share This Article