ಹುಬ್ಬಳ್ಳಿ: ಝೀರೋ ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ನವಜಾತ ಶಿಶು ಸಾವು

1 Min Read

ಹುಬ್ಬಳ್ಳಿ: ಝೀರೋ ಟ್ರಾಫಿಕ್‌ನಲ್ಲಿ (Zero Traffic) ಆಸ್ಪತ್ರೆಗೆ ದಾಖಲಿಸಿದ್ದ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

ವಿಜಯಲಕ್ಷ್ಮಿ ಎಂಬವರಿಗೆ ಸೇರಿದ ಮಗು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ. ಹೊಟ್ಟೆ ಮೇಲಿನ ಚರ್ಮ ಬೆಳೆಯದ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: 10 ಗಂಟೆಯ ನವಜಾತ ಶಿಶು ಜೀವನ್ಮರಣ ಹೋರಾಟ – ಝೀರೋ ಟ್ರಾಫಿಕ್‌ನಲ್ಲಿ ಕಿಮ್ಸ್‌ ಆಸ್ಪತ್ರೆಗೆ ರವಾನೆ

ಹೊಟ್ಟೆ ಭಾಗದಲ್ಲಿ ಚರ್ಚ ಬೆಳೆಯದೇ ಕರುಳು, ಕಿಡ್ನಿ ಹೊರಬಂದಿತ್ತು. ಇದೆ 28ರಂದು ಕೊಪ್ಪಳದಿಂದ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್‌ನಲ್ಲಿ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟು 30 ಅಂಬುಲೆನ್ಸ್‌ಗಳನ್ನು ಬಳಸಲಾಗಿತ್ತು. ಆದರೂ, ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ.

ಕೊಪ್ಪಳ ಜಿಲ್ಲೆಯ ಕುಕುನೂರ ತಾಲೂಕಿನ ಬೂದಗುಂಪ ಗ್ರಾಮದ ವಿಜಯಲಕ್ಷ್ಮಿ ಅವರ ಮಗುವನ್ನು ಕುಕನೂರ ತಾಲೂಕಾ ಆಸ್ಪತ್ರೆಯಲ್ಲಿ 27ರ ರಾತ್ರಿ ಮಧ್ಯರಾತ್ರಿ ಹೆರಿಗೆಯಾಗಿತ್ತು. ಮಗುವಿನ ಕರಳು, ಕಿಡ್ನಿ ಹೊರಬಂದ ಹಿನ್ನೆಲೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

28ರ ಬೆಳಗಿನ ಜಾವ 10 ಗಂಟೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಈ ವೇಳೆ ಝೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಕರೆತರಲಾಗಿತ್ತು. ಇದನ್ನೂ ಓದಿ: ಹುಲಿಕಲ್ ಘಾಟ್‌ನಲ್ಲಿ‌ ಧರೆಗೆ ಬಸ್ ಡಿಕ್ಕಿ: ಮಗು ಸಾವು, ಮೂವರಿಗೆ ಗಂಭೀರ ಗಾಯ

Share This Article