ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ

Public TV
2 Min Read

ಒಟ್ಟೋವಾ: ಖಲಿಸ್ತಾನಿ ಬೆಂಬಲಿಗರು (Khalistani Supporters) ಇಂದಿರಾ ಗಾಂಧಿ ಅವರ ಹತ್ಯೆಗೆ (Indira Gandhi’s assassination) ಸಂಬಂಧಿಸಿದ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಈ ಸಂಬಂಧದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೆನಡಾದ (Canada) ಬ್ರಾಂಪ್ಟನ್‌ ನಗರದಲ್ಲಿ ವಿವಾದಿತ ಸ್ತಬ್ಧಚಿತ್ರ ಮೆರವಣಿಗೆ ಮಾಡಲಾಯಿತು. 1984 ಅಕ್ಟೋಬರ್‌ 31 ರಂದು ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಧಾನಿಯ ಭದ್ರತಾ ಸಿಬ್ಬಂದಿಗಳೇ ಹತ್ಯೆ ಮಾಡಿದ್ದರು. ಆ ಸಂದರ್ಭವನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿತ್ತು. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?

ಜೂ. 6 ರಂದು ‘ಆಪರೇಷನ್‌ ಬ್ಲೂ ಸ್ಟಾರ್‌’ ಆಚರಣೆಗೂ ಮೊದಲು ಜೂ.4 ರಂದು ಖಲಿಸ್ತಾನಿ ಬೆಂಬಲಿಗರು ಪರೇಡ್‌ ಆಯೋಜಿಸಿದ್ದರು. ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕೊಲೆಗಾರರು ಹತ್ಯೆ ಮಾಡುತ್ತಿರುವ ಸಂದರ್ಭದ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಕೊಲೆ ಮಾಡಿದವರು ಪ್ರಧಾನಿ ಭದ್ರತಾ ಸಿಬ್ಬಂದಿಯೇ ಆಗಿದ್ದರು. ಆ ಸ್ತಬ್ಧಚಿತ್ರದಲ್ಲಿ “ಶ್ರೀ ದರ್ಬಾರ್ ಸಾಹಿಬ್ ಮೇಲಿನ ದಾಳಿಗೆ ಪ್ರತೀಕಾರ” ಎಂದು ಹೇಳುವ ಫಲಕ ಅಳವಡಿಸಲಾಗಿದೆ.

ಸ್ತಬ್ಧಚಿತ್ರ ಮೆರವಣಿಗೆಗೆ ಕೆನಡಾ ಹೈಕಮಿಷನರ್‌ ಖಂಡನೆ ವ್ಯಕ್ತಪಡಿಸಿದೆ. ಕೆನಡಾದ ಬ್ರಾಂಪ್ಟನ್ ನಗರದಲ್ಲಿ ದಿವಂಗತ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಸಂಭ್ರಮಾಚರಣೆಯ ವರದಿಗಳನ್ನು ಭಾರತದಲ್ಲಿ ಕೆನಡಾದ ಹೈಕಮಿಷನರ್ ಕ್ಯಾಮರೂನ್ ಮ್ಯಾಕೆ ಖಂಡಿಸಿದ್ದಾರೆ. “ಕೆನಡಾದಲ್ಲಿ ದ್ವೇಷ ಅಥವಾ ಹಿಂಸಾಚಾರವನ್ನು ವೈಭವೀಕರಿಸುವುದಕ್ಕೆ ಅವಕಾಶ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ದಿಲ್ಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ

“ಭಾರತದ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಕೆನಡಾದಲ್ಲಿ ಆಚರಿಸಿದ ಘಟನೆಯ ವರದಿಗಳಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ಕೆನಡಾದಲ್ಲಿ ದ್ವೇಷಕ್ಕೆ ಅಥವಾ ಹಿಂಸೆಯ ವೈಭವೀಕರಣಕ್ಕೆ ಸ್ಥಳವಿಲ್ಲ. ಈ ಚಟುವಟಿಕೆಗಳನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ ಎಂದು ಕ್ಯಾಮರೂನ್ ಮ್ಯಾಕೆ ಟ್ವೀಟ್ ಮಾಡಿದ್ದಾರೆ.

Share This Article