ಹುಬ್ಬಳ್ಳಿ | ಲ್ಯಾಂಡಿಂಗ್‌ ವೇಳೆ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ – ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ

1 Min Read

ಹುಬ್ಬಳ್ಳಿ: ಲ್ಯಾಂಡಿಂಗ್‌ (Landing) ವೇಳೆ ಇಂಡಿಗೋ ವಿಮಾನದಲ್ಲಿ (IndiGo Flight) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿದಂತಾಗಿದೆ.

ಬೆಂಗಳೂರಿನಿಂದ (Bengaluru) ಸಂಜೆ 6:45ಕ್ಕೆ ಬಿಟ್ಟು 7:45ಕ್ಕೆ ಹುಬ್ಬಳ್ಳಿಗೆ (Hubballi) ಬಂದಿದ್ದ 6ಇ7162 ಇಂಡಿಗೋ ವಿಮಾನದಲ್ಲಿ ಲ್ಯಾಂಡಿಂಗ್‌ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಆಕಾಶದಲ್ಲಿ 30 ನಿಮಿಷಗಳ ವಿಮಾನ ಸುತ್ತಾಟ ನಡೆಸಿದೆ. ಇದನ್ನೂ ಓದಿ: A320 ಸಾಫ್ಟ್‌ವೇರ್‌ನಲ್ಲಿ ದೋಷ – 250ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದತಿ/ವಿಳಂಬ ಸಾಧ್ಯತೆ

ಪೈಲಟ್ ಚಾಣಾಕ್ಷತನದಿಂದ 70ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಂತಾಗಿದೆ. 30 ನಿಮಿಷಗಳ ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಕರು ಕುಳಿತಿದ್ದರು. ಸುಮಾರು 8:15ಕ್ಕೆ ಲ್ಯಾಂಡ್ ವಿಮಾನ ಲ್ಯಾಂಡ್‌ ಆಗಿದೆ. ಇದನ್ನೂ ಓದಿ: `ದಿತ್ವಾಹ್’ ಎಫೆಕ್ಟ್ – ತಮಿಳುನಾಡಿನ ಶಾಲೆಗಳಿಗೆ ರಜೆ, 54 ವಿಮಾನಗಳ ಹಾರಾಟ ರದ್ದು

Share This Article