ತಪ್ಪಿತು ದೊಡ್ಡ ದುರಂತ – ಮತ್ತೆ ಟೇಕಾಫ್ ಆಗಿ ಇಂಡಿಗೋ ಸೇಫ್ ಲ್ಯಾಂಡಿಂಗ್

Public TV
1 Min Read

ಪಾಟ್ನಾ: ದೆಹಲಿಯಿಂದ (Delhi) ಪಾಟ್ನಾಗೆ (Patna) ಹೊರಟಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ವೇಳೆ ಸಮಸ್ಯೆಯಾದ ಪರಿಣಾಮ ಪೈಲಟ್‌ನ ಚಾಣಾಕ್ಷತನದಿಂದ ಮತ್ತೆ ಟೇಕಾಫ್ ಆಗಿ ಬಳಿಕ ಸೇಫ್ ಲ್ಯಾಂಡಿಂಗ್ ಆಗಿದೆ.

ಮಂಗಳವಾರ (ಜು.14) ರಾತ್ರಿ ದೆಹಲಿಯಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ 6ಇ2482 ಇಂಡಿಗೋ ವಿಮಾನ ಪಾಟ್ನಾದ ಜಯ ಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Jay Prakash Narayan International Airport) ಲ್ಯಾಂಡಿಂಗ್ ಆಗುವಾಗ ಕೂದಲೆಳೆ ಅಂತರದಲ್ಲಿ ಪಾರಾಗಿದೆ.ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ – ಬಟ್ಟೆ ಸುತ್ತಿ ಕಿಟಿಕಿಯಿಂದ ಆಚೆ ಎಸೆದ ಪಾಪಿ ತಾಯಿ

ವಿಮಾನವು ಲ್ಯಾಂಡ್ ಆಗುವಾಗ ಗೊತ್ತುಪಡಿಸಿದ ಟಚ್‌ಡೌನ್ ಪಾಯಿಂಟ್‌ಗಿಂತ ಮುಂದೆ ಇಳಿದಿದೆ. ಇದನ್ನರಿತ ಪೈಲಟ್ ಉಳಿದ ರನ್‌ವೇ ಉದ್ದವು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಮತ್ತೆ ಚಾಣಾಕ್ಷತನದಿಂದ ಟೇಕಾಫ್ ಮಾಡಿದ್ದಾರೆ. ಬಳಿಕ ಮೂರು ಸುತ್ತು ಹೊಡೆದು ರಾತ್ರಿ 9 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.

ವಿಮಾನದಲಿದ್ದ 173 ಪ್ರಯಾಣಿಕರು ಸುರಕ್ಷಿತವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದ ರನ್‌ವೇ ಚಿಕ್ಕದಾಗಿದ್ದು, ಲ್ಯಾಂಡಿಂಗ್ ಸಮಯದಲ್ಲಿ ಆಗಾಗ ಸವಾಲುಗಳು ಎದುರಾಗುತ್ತಿರುತ್ತವೆ.ಇದನ್ನೂ ಓದಿ: ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿ – ಹಲವು ಪ್ರಯಾಣಿಕರಿಗೆ ಗಾಯ

Share This Article