– ಇಂಡಿಗೋ, ಏರ್ ಇಂಡಿಯಾ ವಿಮಾನಗಳಲ್ಲಿ ಭಾರೀ ಅಡಚಣೆ
ನವದೆಹಲಿ: ದೇಶದಲ್ಲಿ ಕಾರ್ಯ ನಿರ್ವಹಿಸುವ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ವಹಿಸುವ ಹಲವಾರು ವಿಮಾನಗಳು ತಮ್ಮ A320 ಸರಣಿಯ ತಂತ್ರಾಂಶದಲ್ಲಿ ಉಂಟಾದ ದೋಷದಿಂದಾಗಿ ಅಡಚಣೆ ಉಂಟಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ತಾಂತ್ರಿಕ ದೋಷದಿಂದ ಸುಮಾರು 200 ರಿಂದ 250 ವಿಮಾನಗಳ ಹಾರಾಟದಲ್ಲಿ ವಿಳಂಬ ಅಥವಾ ರದ್ದತಿ ಉಂಟಾಗಬಹುದು ಎನ್ನಲಾಗಿದೆ.
Safety comes first. Always. 💙✈
Airbus has issued a technical advisory for the global A320 fleet. We are proactively completing the mandated updates on our aircraft with full diligence and care, in line with all safety protocols. While we work through these precautionary…
— IndiGo (@IndiGo6E) November 28, 2025
ಫ್ರೆಂಚ್ ವಿಮಾನಯಾನ ಕಂಪನಿ ಏರ್‌ಬಸ್, ಅತಿಯಾದ ಸೌರ ವಿಕಿರಣವು A320 ಸರಣಿಯ ವಿಮಾನಗಳ ಹಾರಾಟ ನಿಯಂತ್ರಣಗಳಿಗೆ ಅಗತ್ಯವಾದ ನಿರ್ಣಾಯಕ ಡೇಟಾವನ್ನ ನಾಶಪಡಿಸಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೇ ಸಮಸ್ಯೆಯನ್ನು ಸರಿಪಡಿಸಲು ಅಗತ್ಯವಿರುವ ಸಾಫ್ಟ್‌ವೇರ್ ಬದಲಾವಣೆಯು ಕೂಡ ವಿಮಾನ ಕಾರ್ಯಾಚರಣೆಗಳಿಗೆ ಅಡಚಣೆ ಉಂಟುಮಾಡಬಹುದು ಎಂದು ಏರ್‌ಬಸ್ ಶುಕ್ರವಾರ ಹೇಳಿದೆ.
We are aware of a directive from Airbus related to its A320 family aircraft currently in-service across airline operators. This will result in a software/hardware realignment on a part of our fleet, leading to longer turnaround time and delays to our…
— Air India (@airindia) November 28, 2025
ಕಿರಿದಾದ ದೇಹದ A320 ಸರಣಿಯ ವಿಮಾನಗಳಲ್ಲಿ ಹಲವು ಸಾಫ್ಟ್‌ವೇರ್ ಬದಲಾವಣೆಗಳು ಅಥವಾ ಕೆಲವು ಸಂದರ್ಭಗಳಲ್ಲಿ ಹಾರ್ಡ್‌ವೇರ್ ಮರುಜೋಡಣೆಗೆ ಒಳಗಾಗುವುದರಿಂದ ಕಾರ್ಯಾಚರಣೆಗೆ ಅಡಚಣೆಗಳು ಉಂಟಾಗುತ್ತವೆ. ಭಾರತೀಯ ನಿರ್ವಾಹಕರು ಸುಮಾರು 560, A320 ಸರಣಿಯ ವಿಮಾನಗಳನ್ನ ಹೊಂದಿದ್ದು, ಅವುಗಳಲ್ಲಿ 200-250 ವಿಮಾನಗಳಿಗೆ ಸಾಫ್ಟ್‌ವೇರ್ ಬದಲಾವಣೆಗಳು ಅಥವಾ ಹಾರ್ಡ್‌ವೇರ್ ಮರುಜೋಡಣೆ ಅಗತ್ಯವಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (EASA) ಪ್ರಕಾರ, ಅಪಘಾತಕ್ಕೀಡಾದ ವಿಮಾನದಲ್ಲಿ ಸೇವೆ ಸಲ್ಲಿಸಬಹುದಾದ ಎಲಿವೇಟರ್ ಐಲೆರಾನ್ ಕಂಪ್ಯೂಟರ್ (ELAC) ಅನ್ನು ಅಳವಡಿಸುವ ಅಗತ್ಯವಿದೆ. ಅದಕ್ಕಾಗಿ ಏರ್‌ಬಸ್ ವಿಮಾನಯಾನ ನಿರ್ವಾಹಕರನ್ನ ಕೇಳಲಾಗಿದೆ. ಸಾಮಾನ್ಯವಾಗಿ, ELAC ವಿಮಾನ ನಿಯಂತ್ರಣಗಳಿಗೆ ಇರುತ್ತವೆ. ಆದ್ದರಿಂದ ಸಮಸ್ಯೆಗೆ ಒಳಗಾಗಿರುವ ವಿಮಾನಗಳು ಮುಂದಿನ ಹಾರಾಟಕ್ಕೂ ಮುನ್ನ ದೋಷ ಉಂಟಾದ ELAC ಅನ್ನು ಬದಲಾಯಿಸುವ ಅಥವಾ ಮಾರ್ಪಾಡು ಮಾಡುವ ಮೂಲಕ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸೂಚಿಸಿದೆ.
Please visit https://t.co/SqGk3gEKqm to check your flight status, or #ChatWithTia on WhatsApp at +91 65600 12345. pic.twitter.com/5SNXKwZjES
— Air India Express (@AirIndiaX) November 28, 2025
ಶನಿವಾರ, ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, A320 ಸರಣಿ ವಿಮಾನಗಳಿಗೆ ಸಂಬಂಧಿಸಿದಂತೆ ನಮ್ಮ ಬಹುಪಾಲು ಫ್ಲೀಟ್‌ಗಳ ತಯಾರಕರಾದ ಏರ್‌ಬಸ್ ಹೊರಡಿಸಿದ ಅಧಿಸೂಚನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ ಎಂದು ಹೇಳಿದೆ. ಅಲ್ಲದೇ ʻಏರ್‌ಬಸ್ʼ ಅಧಿಸೂಚನೆಯ ಪ್ರಕಾರ, ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಾವು ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಅಗತ್ಯ ತಪಾಸಣೆಗಳನ್ನು ನಡೆಸುತ್ತಿದ್ದರೂ, ಅಡಚಣೆಗಳನ್ನು ಕಡಿಮೆ ಮಾಡಲು ನಾವು ಎಲ್ಲ ಪ್ರಯತ್ನಗಳನ್ನ ಮಾಡುತ್ತಿದ್ದೇವೆ. ತಕ್ಷಣದ ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಂಡಿದ್ದೇವೆ ಎಂದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೂ ಏರ್ ಇಂಡಿಯಾ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಎಲ್ಲಾ ವಿಮಾನ ನಿರ್ವಾಹಕರಿಗೂ ತನ್ನ A320 ಸರಣಿ ವಿಮಾನಗಳಿಗೆ ಸಂಬಂಧಿಸಿದ ಏರ್‌ಬಸ್ ನಿರ್ದೇಶನದ ಬಗ್ಗೆ ತಿಳಿಸಿದ್ದೇವೆ. ಆದ್ರೆ ಸ್ವಲ್ಪ ಪ್ರಮಾಣದಲ್ಲಿ ನಿಗದಿತ ಕಾರ್ಯಾಚರಣೆಗಳಲ್ಲಿ ವಿಳಂಬಕ್ಕೆ ಸಾಧ್ಯತೆ ಯಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

